Alia Bhatt: ನಟಿ ಆಲಿಯಾ ಭಟ್ ಈಗ ವಿಲನ್; ರಣಬೀರ್ ಸಿನಿಮಾ ಎದುರೇ ರಿಲೀಸ್
Heart Of Stone Movie Trailer: ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದುದ್ದಕ್ಕೂ ಆ್ಯಕ್ಷನ್ ಇರಲಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಹಿಂಟ್ ನೀಡಲಾಗಿದೆ. ಆಲಿಯಾ ಭಟ್ ಕೂಡ ಆ್ಯಕ್ಷನ್ ಮೆರೆದಿದ್ದಾರೆ.
ನಟಿ ಆಲಿಯಾ ಭಟ್ (Alia Bhatt) ಅವರು ಗ್ಲಾಮರ್ ಹಾಗೂ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ಈವರೆಗೆ ವಿಲನ್ ಪಾತ್ರ ಮಾಡಿರಲಿಲ್ಲ. ಈಗ ಅಂಥದ್ದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ನಲ್ಲಿ ನಟಿಸಿದ ಮೊದಲ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಆಲಿಯಾ ಭಟ್ ವಿಲನ್ ಪಾತ್ರ ಮಾಡಿದ್ದಾರೆ. ಆಗಸ್ಟ್ 11ರಂದು ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ದಿನ ರಣಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ.
‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಟ್ರೇಲರ್ ಭಾನುವಾರ (ಜೂನ್ 18) ರಿಲೀಸ್ ಆಗಿದೆ. ಈ ಚಿತ್ರದುದ್ದಕ್ಕೂ ಆ್ಯಕ್ಷನ್ ಇರಲಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಹಿಂಟ್ ನೀಡಲಾಗಿದೆ. ಆಲಿಯಾ ಭಟ್ ಕೂಡ ಟ್ರೇಲರ್ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ಅವರು ವಿಲನ್ ಆಗಿ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
‘ಹಾರ್ಟ್ ಆಫ್ ಸ್ಟೋನ್’ ಸಿನಿಮಾಗೆ ಟಾಮ್ ಹಾರ್ಪರ್ ನಿರ್ದೇಶನ ಮಾಡಿದ್ದಾರೆ. ಗಾಲ್ ಗಡೋಟ್ ಅವರು ಈ ಚಿತ್ರದಲ್ಲಿ ರೇಚಲ್ ಸ್ಟೋನ್ ಹೆಸರಿನ ಪಾತ್ರ ಮಾಡಿದ್ದಾರೆ. ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಸಿನಿಮಾ ಮೂಲಕ ಗಾಲ್ ಗಡೋಟ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಅವರು ನಟಿಸಿ ಫೇಮಸ್ ಆದರು.
ಇದನ್ನೂ ಓದಿ: ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್ ಕಪೂರ್?
‘ಹಾರ್ಟ್ ಆಫ್ ಸ್ಟೋನ್’ ಚಿತ್ರವನ್ನು ಅದ್ದೂರಿಯಾಗಿ ಕಟ್ಟಿಕೊಡಲಾಗಿದೆ. ಇಟಲಿ, ಲಂಡನ್ ಮೊದಲಾದ ಭಾಗಗಳಲ್ಲಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಯಾವೆಲ್ಲ ಅಂಶ ಇರಲಿದೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಆಲಿಯಾ ಅವರು ‘ಹಾರ್ಟ್’ ಹೆಸರಿನ ವಸ್ತುವನ್ನು ಕದಿಯುತ್ತಾರೆ ಮತ್ತು ರೇಚಲ್ಗೆ ಸವಾಲು ಹಾಕುತ್ತಾರೆ.
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರ ಆಗಸ್ಟ್ 11ರಂದು ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ. ಆಲಿಯಾ ಭಟ್ ಸಿನಿಮಾ ನೇರವಾಗಿ ಒಟಿಟಿಗೆ ಲಗ್ಗೆ ಇಡುತ್ತಿದೆ. ಈ ಸಿನಿಮಾ ಬಗ್ಗೆ ಇರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Mon, 19 June 23