Alia Bhatt: ಹಾಲಿವುಡ್​ ನಟಿಗೆ ತೆಲುಗು ಹೇಳಿಕೊಟ್ಟ ನಟಿ ಆಲಿಯಾ ಭಟ್

‘ಆರ್​ಆರ್​ಆರ್​ ಸಿನಿಮಾ ಶೂಟಿಂಗ್ ವೇಳೆ ಆಲಿಯಾ ತೆಲುಗು ಮಾತನಾಡುವುದನ್ನು ಕೂಡ ಕಲಿಯಲು ಪ್ರಯತ್ನಿಸಿದ್ದರು. ಹೀಗಾಗಿ, ಅವರಿಗೆ ತೆಲುಗು ಭಾಷೆಯ ಮೇಲೆ ವಿಶೇಷ ಪ್ರೀತಿ ಇದೆ.

Alia Bhatt: ಹಾಲಿವುಡ್​ ನಟಿಗೆ ತೆಲುಗು ಹೇಳಿಕೊಟ್ಟ ನಟಿ ಆಲಿಯಾ ಭಟ್
ಗಾಲ್-ಆಲಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 08, 2023 | 11:02 AM

ನಟಿ ಆಲಿಯಾ ಭಟ್ (Alia Bhatt) ಅವರು ಬಾಲಿವುಡ್​ನ ಬೇಡಿಕೆಯ ನಟಿ. ಇತ್ತೀಚೆಗೆ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಆಗಸ್ಟ್ 11ರಂದು ಆಲಿಯಾ ಭಟ್ ನಟನೆಯ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಆಲಿಯಾ ಹಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಸಂದರ್ಶನದ ವೇಳೆ ಆಲಿಯಾ ಅವರು ನಟಿ ಗಾಲ್​ ಗಡೋಟ್ (Gal Gadot) ಅವರಿಗೆ ತೆಲುಗು ಮಾತನಾಡುವುದನ್ನು ಕಲಿಸಿಕೊಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಆಲಿಯಾ ಭಟ್ ಅವರು ಇಷ್ಟು ವರ್ಷಗಳ ಕಾಲ ಕೇವಲ ಬಾಲಿವುಡ್​ಗೆ ಸೀಮಿತ ಆಗಿದ್ದರು. ಆದರೆ, ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ದಕ್ಷಿಣ ಭಾರತದ ಜೊತೆ ಕನೆಕ್ಷನ್ ಬೆಳೆಸಿಕೊಂಡಿದ್ದಾರೆ. ಅವರು ತೆಲುಗು ಮಾತನಾಡುವುದನ್ನು ಕೂಡ ಕಲಿಯಲು ಪ್ರಯತ್ನಿಸಿದ್ದರು. ಹೀಗಾಗಿ, ಅವರಿಗೆ ತೆಲುಗು ಭಾಷೆಯ ಮೇಲೆ ವಿಶೇಷ ಪ್ರೀತಿ ಇದೆ.

ಸಂದರ್ಶನ ಒಂದರಲ್ಲಿ ಗಾಲ್​ ಗಡೋಟ್ ಹಾಗೂ ಆಲಿಯಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಅವರು ಗಾಲ್​​ಗೆ ‘ಅಂದರಿಕಿ ನಮಸ್ಕಾರಂ’ (ಎಲ್ಲರಿಗೂ ನಮಸ್ಕಾರ) ಎಂಬುದನ್ನು ಹೇಳಿಕೊಟ್ಟಿದ್ದಾರೆ. ಗಾಲ್ ಅವರು ಕಷ್ಟಪಟ್ಟು ಈ ಸಾಲುಗಳನ್ನು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. ತೆಲುಗು ಮಂದಿ ಖುಷಿಖುಷಿಯಿಂದ ಈ ವಿಡಿಯೋನ ಹಂಚಿಕೊಳ್ಳುತ್ತಿದ್ದಾರೆ. ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಇವರೇ ನಾಯಕಿ ಆಗಲಿ ಎಂದು ಎಲ್ಲರೂ ಕೋರುತ್ತಿದ್ದಾರೆ.

ಗಾಲ್​ ಗಡೋಟ್ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ರೇಚಲ್ ಸ್ಟೋನ್ ಹೆಸರಿನ ಪಾತ್ರ ಮಾಡಿದ್ದಾರೆ. ‘ಫಾಸ್ಟ್​ ಆ್ಯಂಡ್ ಫ್ಯೂರಿಯಸ್’ ಸಿನಿಮಾ ಮೂಲಕ ಗಾಲ್ ಬಣ್ಣದ ಬದುಕು ಆರಂಭಿಸಿದರು. ಬಳಿಕ ಹಲವು ಸಿನಿಮಾಗಳಲ್ಲಿ ಅವರು ನಟಿಸಿ ಫೇಮಸ್ ಆದರು. ಆಲಿಯಾ ‘ಹಾರ್ಟ್​​’ ಹೆಸರಿನ ವಸ್ತು ಕದಿಯುತ್ತಾರೆ ಮತ್ತು ರೇಚಲ್​ಗೆ ಸವಾಲು ಹಾಕುತ್ತಾರೆ.

ಇದನ್ನೂ ಓದಿ: ‘ನಿಮಗೆ ಏನಾಗಿದೆ?’; ರಸ್ತೆ ಮೇಲೆ ತಳ್ಳಾಡಿಕೊಂಡ ಆಲಿಯಾ ಭಟ್​-ರಣವೀರ್ ಸಿಂಗ್

‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ಆಗಸ್ಟ್ 11ರಂದು ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ರಿಲೀಸ್ ಆಗುತ್ತಿದೆ. ಈ ಸಿನಿಮಾನ ಅದ್ದೂರಿಯಾಗಿ ಕಟ್ಟಿಕೊಡಲಾಗಿದೆ. ಇಟಲಿ, ಲಂಡನ್​ ಮೊದಲಾದ ದೇಶಗಳಲ್ಲಿ ಸಿನಿಮಾನ ಶೂಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್