
ಹಾಲಿವುಡ್ ಸಿನಿಮಾ ‘ಅವೇಂಜರ್ಸ್: ಡೂಮ್ಸ್ಡೇ’ ಭಾರತದಲ್ಲಿ ಡಿಸೆಂಬರ್ 17ಕ್ಕೆ ರಿಲೀಸ್ ಆಗಲಿದೆ. ವಿಶ್ವದಾದ್ಯಂತ ಭಾರಿ ನಿರೀಕ್ಷಿತ ಸಿನಿಮಾ ಇದೆನ್ನಲಾಗುತ್ತಿದೆ. ಭಾರತದಲ್ಲೂ ಸಹ ಈ ಸಿನಿಮಾಕ್ಕೆ ಭಾರಿ ದೊಡ್ಡ ಕ್ರೇಜ್ ಇದೆ. ಯಾವ ಮಟ್ಟಿಗೆಂದರೆ ಸಿನಿಮಾ ಬಿಡುಗಡೆ ಆಗಲು ಇನ್ನೂ ಮೂರು ವಾರಗಳಿರುವಾಗ ಅಡ್ವನ್ಸ್ ಬುಕಿಂಗ್ನಲ್ಲಿಯೇ ಸಿನಿಮಾ 60 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಬಾಚಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಯ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಭಾರತದ ಸ್ಟಾರ್ ನಟರ ಸಿನಿಮಾಗಳಿಗೂ ಸಿಗದಂಥಹಾ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ.
ಸಿನಿಮಾ ಬಿಡುಗಡೆಗೆ ಒಂದು ತಿಂಗಳಿರುವಾಗ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಯ್ತು. ಅಂದರೆ ಸರಿಯಾಗಿ ನವೆಂಬರ್ 17ಕ್ಕೆ ಸಿನಿಮಾದ ಮುಂಗಡ ಬುಕಿಂಗ್ ಆರಂಭವಾಗಿದ್ದು, ಒಂದು ವಾರ ಕಳೆಯುವಷ್ಟರಲ್ಲಿ ಕೇವಲ ಮುಂಗಡ ಬುಕಿಂಗ್ ಇಂದಲೇ ಸಿನಿಮಾ 61 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಮೂರು ವಾರಗಳಿದ್ದು, ಸಿನಿಮಾದ ಮುಂಗಡ ಗಳಿಕೆಯೇ 100 ಕೋಟಿ ದಾಟುವ ನಿರೀಕ್ಷೆ ಇದೆ.
‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾದ ಸುಮಾರು 9 ಲಕ್ಷ ಟಿಕೆಟ್ಗಳು ಮಲ್ಟಿಪ್ಲೆಕ್ಸ್ ಚೇನ್ಗಳಲ್ಲಿ ಈ ವರೆಗೆ ಮಾರಾಟ ಆಗಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇನ್ನೂ ಮುಂಗಡ ಬುಕಿಂಗ್ ಓಪನ್ ಆಗಿಲ್ಲ. ಈ ವರೆಗೆ ಭಾರತದ 294 ಚಿತ್ರಮಂದಿರಗಳಲ್ಲಿ ಸುಮಾರು 8,133 ಶೋಗಳನ್ನು ನೀಡಲಾಗಿದ್ದು. ಶೋಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಸಿನಿಮಾ ಇಂಗ್ಲೀಷ್ನಲ್ಲಿ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಸಹ ರಿಲೀಸ್ ಆಗಲಿದೆ. ಆದರೆ ಈ ವೆರಗೆ ಇಂಗ್ಲೀಷ್ ಆವೃತ್ತಿಗೆ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿದೆ.
ಇದನ್ನೂ ಓದಿ:‘ವಾರಣಾಸಿ’ ಬಳಿಕ ಹಾಲಿವುಡ್ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ
‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾ, ವಿಶ್ವ ಸಿನಿಮಾರಂಗದಲ್ಲಿ ಅತ್ಯಂತ ದೊಡ್ಡ ಸಿನಿಮಾ ಎಎನಿಸಿಕೊಂಡಿದೆ. ಹಾಲಿವುಡ್ನ ಹಲವಾರು ಸ್ಟಾರ್ ನಟ-ನಟಿಯರು ಒಟ್ಟಿಗೆ ಈ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದ ವಿಲನ್ ಆಗಿ ಹಾಲಿವುಡ್ನ ದೊಡ್ಡ ಸ್ಟಾರ್ ನಟ ರಾಬರ್ಟ್ ಡೌನಿ ಜೂನಿಯರ್ ನಟನೆ ಮಾಡಿದ್ದಾರೆ. ಡಾ ಡೂಮ್ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಿದ್ದು, ವಿಲನ್ ಅನ್ನು ಕೊಲ್ಲಲು ಎಂಸಿಯುನಲ್ಲಿರುವ ಬಹುತೇಕ ಎಲ್ಲ ಸೂಪರ್ ಹೀರೋಗಳು ಒಂದಾಗಿದ್ದಾರೆ. ಸಿನಿಮಾದ ಫೈನಲ್ ಟ್ರೈಲರ್ ಇತ್ತೀಚೆಗಷ್ಟೆ ರಿಲೀಸ್ ಆಗಿದ್ದು, ಭಾರಿ ವೈರಲ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ