‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು

Avengers Doomsday movie: ಅವೇಂಜರ್ಸ್ ಎಂಬುದು ಹಲವು ಸೂಪರ್ ಹೀರೋಗಳ ಗುಂಪಾಗಿದ್ದು, ಎಲ್ಲರೂ ಸೇರಿ ವಿಲನ್ ವಿರುದ್ಧ ಹೊಡೆದಾಡುವ ಕತೆಗಳನ್ನು ಈ ಸಿನಿಮಾಗಳು ಹೊಂದಿದ್ದರು. ಈ ಸಿನಿಮಾ ಸರಣಿಯ ಜನಪ್ರಿಯ ವಿಲನ್ ಥ್ಯಾನೋಸ್. ಆದರೆ ಇದೀಗ ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಬರುತ್ತಿದ್ದು, ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟು ಸೇರಿ ಒಬ್ಬ ವಿಲನ್ ವಿರುದ್ಧ ಹೋರಾಟಕ್ಕೆ ನಿಂತಿವೆ.

‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು
Avengers Doomsday

Updated on: Jul 21, 2026 | 4:07 PM

ಅವೇಂಜರ್ಸ್’ (Avengers), ವಿಶ್ವ ಸಿನಿಮಾ ರಂಗದ ಬಲು ಅದ್ಧೂರಿ ಆಕ್ಷನ್ ಸಿನಿಮಾ. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದು, ಈ ನಾಲ್ಕೂ ಸಿನಿಮಾಗಳು ದಾಖಲೆ ಮೊತ್ತದ ಗಳಿಕೆ ಮಾಡಿವೆ. ಅವೇಂಜರ್ಸ್ ಎಂಬುದು ಹಲವು ಸೂಪರ್ ಹೀರೋಗಳ ಗುಂಪಾಗಿದ್ದು, ಎಲ್ಲರೂ ಸೇರಿ ವಿಲನ್ ವಿರುದ್ಧ ಹೊಡೆದಾಡುವ ಕತೆಗಳನ್ನು ಈ ಸಿನಿಮಾಗಳು ಹೊಂದಿದ್ದರು. ಈ ಸಿನಿಮಾ ಸರಣಿಯ ಜನಪ್ರಿಯ ವಿಲನ್ ಥ್ಯಾನೋಸ್. ಆದರೆ ಇದೀಗ ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಬರುತ್ತಿದ್ದು, ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟು ಸೇರಿ ಒಬ್ಬ ವಿಲನ್ ವಿರುದ್ಧ ಹೋರಾಟಕ್ಕೆ ನಿಂತಿವೆ.

‘ಅವೆಂಜರ್ಸ್: ಡೂಮ್ಸ್‌ಡೇ’ ಹೆಸರಿನ ಸಿನಿಮಾ ನಿರ್ಮಾಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾನಲ್ಲಿ ಅವೇಂಜರ್ಸ್, ಥ್ಯಾನೋಸ್​​ಗಿಂತಲೂ ನೂರು ಪಟ್ಟು ಶಕ್ತಿಶಾಲಿ ವಿಲನ್ ಅನ್ನು ಎದುರಿಸುತ್ತಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಟ್ರೈಲರ್​​ನಲ್ಲಿ ತೋರಿಸಿರುವಂತೆ ಮಾರ್ವೆಲ್ ಯೂನಿವರ್ಸ್​​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟಿಗೆ ಸೇರಿದ್ದು, ಒಬ್ಬ ಮಹಾನ್ ಶಕ್ತಿಶಾಲಿ ವಿಲನ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ‘ಅವೇಂಜರ್ಸ್: ಎಂಡ್​​ಗೇಮ್’ನಲ್ಲಿ ಅವೇಂಜರ್ಸ್ ತಂಡದಿಂದ ನಿವೃತ್ತಿ ಪಡೆದಿದ್ದ ಕ್ಯಾಪ್ಟನ್ ಅಮೆರಿಕ ಸಹ ವಿಲನ್ ವಿರುದ್ಧ ಹೋರಾಡಲು ಮರಳಿ ಬಂದಿದ್ದಾನೆ.

ಈ ಬಾರಿ ಅವೇಂಜರ್ಸ್ ಗುಂಪನ್ನು ಥಾರ್ ಮುನ್ನಡೆಸುತ್ತಿದ್ದು, ಎಲ್ಲ ಸೂಪರ್ ಹೀರೋಗಳನ್ನು ಸಹ ಆತ ಒಟ್ಟಿಗೆ ಸೇರಿಸಿದ್ದಾನೆ. ಲೋಕಿ, ಕ್ಯಾಪ್ಟನ್ ಅಮೆರಿಕ, ಬ್ಲಾಕ್ ಪ್ಯಾಂಥರ್, ಆಂಟ್​ಮ್ಯಾನ್, ಬ್ಲಾಕ್ ಕ್ಯಾಪ್ಟನ್ ಅಮೆರಿಕ, ಬಕಿ, ಫೆಂಟಾಸ್ಟಿಕ್ ಫೈವ್ ತಂಡದ ಎಲ್ಲ ಸದಸ್ಯರು, ಹ್ಯೂಮನ್ ಟಾರ್ಚ್, ಶಾಂಗ್ ಚೀ, ಮೆಗ್ನಿಟೊ, ಡೆಡ್​​ಪೂಲ್ ಇನ್ನೂ ಹಲವಾರು ಸೂಪರ್ ಹೀರೋಗಳು ಕೇವಲ ಒಬ್ಬ ವಿಲನ್ ಎದುರು ಹೊಡೆದಾಲು ಒಂದಾಗಿದ್ದಾರೆ. ಅಂದಹಾಗೆ ಈ ಸೂಪರ್​​ ಹೀರೋಗಳೆಲ್ಲ ಒಂದಾಗಿರುವುದು ವಿಕ್ಟರ್ ವೋಮ್ ಡೂಮ್​​ಸ್ಡೇ ಎಂಬ ವಿಲನ್ ಜೊತೆ ಹೋರಾಡಲು.

ಇದನ್ನೂ ಓದಿ:ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು

‘ಅವೇಂಜರ್ಸ್: ಡೂಮ್​ಸ್ಡೇ’ ಸಿನಿಮಾನಲ್ಲಿ ಮುಖ್ಯ ವಿಲನ್ ಆಗಿರುವ ವಿಕ್ಟರ್ ವೋಮ್ ಡೂಮ್​​ಸ್ಡೇ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಿದ್ದಾರೆ. ಅವರು ನಟಿಸುತ್ತಿದ್ದ ಐರನ್ ಮ್ಯಾನ್ ಪಾತ್ರ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾನಲ್ಲಿ ಸತ್ತು ಹೋಗಿದ್ದು, ಇದೀಗ ರಾಬರ್ಟ್ ಅವರು ಡೂಮ್​​ಸ್ಡೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಥಾರ್ ಪಾತ್ರದ ಹಿನ್ನೆಲೆ ಧ್ವನಿ ಇದ್ದು, ‘ನಾನು ಈ ವರೆಗೆ ಮಹಾನ್ ವಿಲನ್​ಗಳ ಜೊತೆ ಹೋರಾಡಿದ್ದೀನಿ, ನನಗಿಂತಲೂ ಹಲವು ಪಟ್ಟು ಶಕ್ತಿಶಾಲಿಗಳೊಟ್ಟಿಗೆ ಹೋರಾಡಿದ್ದೀನಿ, ಆದರೆ ನನಗೆ ಭಯವಾಗಿಲ್ಲ. ಆದರೆ ಮೊದಲ ಬಾರಿಗೆ ಈತನ ಎದುರಿಸಲು ಭಯವಾಗುತ್ತಿದೆ’ ಎಂದಿದ್ದಾನೆ. ಈ ಸಂಭಾಷಣೆ, ಡೂಮ್​​ಸ್ಡೇ ಪಾತ್ರಕ್ಕಿರುವ ಶಕ್ತಿಯ ಸುಳಿವು ನೀಡುತ್ತಿದೆ. ಸಿನಿಮಾ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us