ಆರ್ಆರ್ಆರ್ ತಂಡದ ಸದಸ್ಯರಿಗೆ ಮತ್ತೆ ಆಸ್ಕರ್ನಿಂದ ಬುಲಾವ್
RRR: ಕಳೆದ ಬಾರಿ ಆಸ್ಕರ್ ಗೆದ್ದು ಇತಿಹಾಸ ಸೃಷ್ಟಿಸಿದ್ದ ಆರ್ಆರ್ಆರ್ಗೆ ಈ ಬಾರಿ ಮತ್ತೆ ಆಸ್ಕರ್ನಿಂದ ಬುಲಾವ್ ಬಂದಿದೆ. ಅಂದರೆ ಆರ್ಆರ್ಆರ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಹಲವರಿಗೆ ಆಸ್ಕರ್ನ ಜ್ಯೂರಿ ಸದಸ್ಯರಾಗಲು ಆಹ್ವಾನಿಸಲಾಗಿದೆ.
ಆರ್ಆರ್ಆರ್ (RRR) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ (Box Office) ಭಾರಿ ಮೊತ್ತ ಕಲೆ ಹಾಕಿರುವುದು ಮಾತ್ರವಲ್ಲ ಗ್ಲೋಬಲ್ ಮಾರುಕಟ್ಟೆಯಲ್ಲಿ ಭಾರತ ಚಿತ್ರರಂಗದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದೆ. ಆರ್ಆರ್ಆರ್ ಮೂಲಕ ರಾಮ್ ಚರಣ್ (Ram Charan), ಜೂ ಎನ್ಟಿಆರ್ (Jr NTR) ಗ್ಲೋಬಲ್ ಸ್ಟಾರ್ಗಳಾಗಿದ್ದಾರೆ. ಮಾತ್ರವಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ ಇತರೆ ಕೆಲವು ನಟರು, ತಂತ್ರಜ್ಞರಿಗೆ ವಿಶ್ವಮಾನ್ಯತೆ ದೊರೆತಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್ (Oscar) ಗೆದ್ದಿರುವ ಆರ್ಆರ್ಆರ್ಗೆ ಇದೀಗ ಆಸ್ಕರ್ನಿಂದಲೇ ಬುಲಾವ್ ಬಂದಿದೆ. ಆರ್ಆರ್ಆರ್ ಚಿತ್ರತಂಡದ ಆರು ಮಂದಿಯನ್ನು ಆಸ್ಕರ್ ಜ್ಯೂರಿ ಮೆಂಬರ್ಗಳಾಗಿ ಗುರುತಿಸಿದೆ.
ಆಸ್ಕರ್, ಹೊಸ ಜ್ಯೂರಿ ಸದಸ್ಯರನ್ನು ಗುರುತಿಸಿ 2023ರ ಜ್ಯೂರಿ ತಂಡ ಸೇರಿಕೊಳ್ಳುವಂತೆ ಆಹ್ವಾನಿಸಿದೆ. ಒಟ್ಟು 398 ಕಲಾವಿದರಿಗೆ ಜ್ಯೂರಿ ತಂಡದ ಸದಸ್ಯರಾಗುವಂತೆ ಆಹ್ವಾನವನ್ನು ಆಸ್ಕರ್ ನೀಡಿದ್ದು, ಭಾರತದ ಹಲವು ಕಲಾವಿದರಿಗೆ ಆಹ್ವಾನ ದೊರೆತಿದೆ. ಅದರಲ್ಲಿಯೂ ಕಳೆದ ವರ್ಷ ಆಸ್ಕರ್ ನಲ್ಲಿ ಭಾಗವಹಿಸಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಆರ್ಆರ್ಆರ್ ಸಿನಿಮಾದ ಹಲವು ಸದಸ್ಯರಿಗೆ ಆಹ್ವಾನ ನೀಡಲಾಗಿದೆ.
ಜೂ ಎನ್.ಟಿಆರ್, ರಾಮ್ ಚರಣ್ ಅವರಿಗೆ ಆಹ್ವಾನ ದೊರೆತಿದೆ. ತಂತ್ರಜ್ಞರಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಾಟು ನಾಟು ಹಾಡು ಬರೆದಿದ್ದ ಗೀತ ಸಾಹಿತಿ ಚಂದ್ರಬೋಸ್, ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ಹಾಗೂ ಪ್ರೊಡಕ್ಷನ್ ಡಿಸೈನರ್ ಸಾಬು ಸಿರೀಲ್ ಅವರಿಗೆ ಜ್ಯೂರಿ ಸದಸ್ಯರಾಗುವಂತೆ ಆಹ್ವಾನಿಸಲಾಗಿದೆ.
ಇದನ್ನೂ ಓದಿ:‘ಆರ್ಆರ್ಆರ್’ ಹಿಂದಿಕ್ಕಿದ ‘ಪುಷ್ಪ 2’; ಚಿತ್ರದ ಆಡಿಯೋ ಹಕ್ಕು ಮಾರಾಟ ಆದ ಬೆಲೆ ಕೇಳಿದ್ರೆ ಅಚ್ಚರಿಪಡ್ತೀರಾ
ಆರ್ಆರ್ಆರ್ ಚಿತ್ರತಂಡದವರು ಮಾತ್ರವೇ ಅಲ್ಲದೆ ಭಾರತೀಯ ಚಿತ್ರರಂಗದ ಇತರೆ ಹಲವು ಸದಸ್ಯರಿಗೆ ಆಸ್ಕರ್ ಆಹ್ವಾನ ಕಳಿಸಿದೆ. ನಿರ್ಮಾಪಕ ಕರಣ್ ಜೋಹಾರ್, ನಿರ್ದೇಶಕ ಮಣಿರತ್ನಂ , ಚೈತನ್ಯ ತಮಹಾನೇ, ಷೌನೆಕ್ ಸೇನ್, ಸಿದ್ಧಾರ್ಥ್ ರಾಯ್ ಕಪೂರ್ ಅವರುಗಳಿಗೆ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ತಮಿಳು ನಟ ಸೂರ್ಯ, ಬಾಲಿವುಡ್ನ ಕಾಜೋಲ್ ಇನ್ನಿತರೆ ಕಲಾವಿದರು ಜ್ಯೂರಿ ತಂಡದಲ್ಲಿದ್ದರು.
ಆಸ್ಕರ್ ಆಯೋಜಿಸುವ ಅಕಾಡೆಮಿ ಮೋಷನ್ ಪಿಕ್ಚರ್ಸ್ನವರು ಜ್ಯೂರಿ ಸದಸ್ಯರನ್ನು ಆಹ್ವಾನಿಸಿದ್ದು ಈ ವರ್ಷ ಆಸ್ಕರ್ಗೆ ಆಯ್ಕೆ ಆಗುವ ಸಿನಿಮಾಗಳಿಗೆ ಜ್ಯೂರಿ ಸದಸ್ಯರಷ್ಟೆ ಮತಚಲಾಯಿಸಲಿದ್ದು, ಸಿನಿಮಾದ ಬೇರೆ ಬೇರೆ ವಿಭಾಗದ ಉತ್ತಮರನ್ನು ಜ್ಯೂರಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಈ ಬಾರಿ ಭಾರತದ ಒಟ್ಟು 11 ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಆರ್ಆರ್ಆರ್ ನಿರ್ದೇಶಕ ರಾಜಮೌಳಿ ಹೆಸರು ಇಲ್ಲದಿರುವುದು ಹಲವರಿಗೆ ಆಶ್ಚರ್ಯ ತಂದಿದೆ. ಸೆಲೆಬ್ರಿಟಿಗಳಾದ ಟೇಲರ್ ಸ್ವಿಫ್ಟ್, ಆಸ್ಟಿನ್ ಬಟ್ಲರ್, ಪಾಲ್ ಮೆಸ್ಕಲ್, ಜಾರ್ ಅಮೀರ್ ಇನ್ನೂ ಹಲವು ಕಲಾವಿದರಿಗೆ ಈ ಬಾರಿ ಆಹ್ವಾನವನ್ನು ಅಕಾಡೆಮಿ ಮೋಷನ್ ಪಿಕ್ಚರ್ಸ್ನವರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Thu, 29 June 23