Val Kilmer: ಖ್ಯಾತ ಹಾಲಿವುಡ್ ನಟ ವಾಲ್ ಕಿಲ್ಮರ್ ನಿಧನ

Hollywood Actor Val Kilmer Dies: ಹಲವು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟ ವಾಲ್ ಕಿಲ್ಮರ್ ನಿಧನ ಹೊಂದಿದ್ದಾರೆ. 'ಟಾಪ್ ಗನ್',  'ಬ್ಯಾಟ್ ಮನ್', 'ರಿಯಲ್ ಜೀನಿಯಸ್',  'ಹೀಟ್', 'ಟೂಂಬ್ ಸ್ಟೋನ್' , ದಿ ಸೇಂಟ್', 'ಟಾಪ್ ಗನ್ ಮೇವರಿಕ್' ಇನ್ನೂ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

Val Kilmer: ಖ್ಯಾತ ಹಾಲಿವುಡ್ ನಟ ವಾಲ್ ಕಿಲ್ಮರ್ ನಿಧನ
Val Kilmer

Updated on: Apr 02, 2025 | 1:32 PM

ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಾದ ‘ಟಾಪ್ ಗನ್’ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ವಾಲ್ ಕಿಲ್ಮರ್ ನಿನ್ನೆ (ಏಪ್ರಿಲ್ 1) ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. 2014 ರಿಂದಲೂ ಅವರು ಗಂಟಲು ಕ್ಯಾನ್ಸರ್ ನಿಂದ ನರಳುತ್ತಿದ್ದರು. ಆ ಬಳಿಕ ಕ್ಯಾನ್ಸರ್ ನಿಂದ ಗುಣಮುಖರಾದರು. ಈಗ ಅವರು ನ್ಯುಮೋನಿಯಾದಿಂದಾಗಿ ನಿಧನ ಹೊಂದಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಾಲ್ ಕಿಲ್ಮರ್ ಅವರು ‘ಟಾಪ್ ಗನ್’,  ‘ಬ್ಯಾಟ್ ಮನ್’, ‘ರಿಯಲ್ ಜೀನಿಯಸ್’,  ‘ಹೀಟ್’, ‘ಟೂಂಬ್ ಸ್ಟೋನ್’ , ದಿ ಸೇಂಟ್’, ‘ಟಾಪ್ ಗನ್ ಮೇವರಿಕ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. 2021ರ ಕ್ಯಾನಸ್ ಫಿಲಂ ಫೆಸ್ಟ್ ನಲ್ಲಿ ವಾಲ್ ಕಿಲ್ಮರ್ ಅವರ ಜೀವನದ ಡಾಕ್ಯುಮೆಂಟರಿಯನ್ನು ಸಹ ಪ್ರದರ್ಶಿಸಲಾಗಿತ್ತು. ಆದರೆ ಇದೀಗ ವಾಲ್ ಕಿಲ್ಮರ್ ನಿಧನ ಹೊಂದಿದ್ದು ಹಲವು ಹಾಲಿವುಡ್ ಗಣ್ಯರು ವಾಲ್ ಕಿಲ್ಮರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಪತ್ನಿ ಜಾನ್ ವಾಲಿ ಸಹ ಹಾಲಿವುಡ್​ನ ಖ್ಯಾತ ನಟಿ. ಮದುವೆಯ ಕೆಲ ವರ್ಷಗಳ ಬಳಿಕ ದಂಪತಿ ವಿಚ್ಛೇದನ ಪಡೆದುಕೊಂಡು ದೂರಾದರು. ವಾಲ್ ಕಿಲ್ಮರ್ ತಮ್ಮ ಮಕ್ಕಳೊಡನೆ ಸಾಂಟ ಫೀನಲ್ಲಿ ಹಲವು ವರ್ಷ ಜೀವನ ನಡೆಸಿದ್ದರು. ವಾಲ್ ಕಿಲ್ಮರ್ ನಿಧನಕ್ಕೆ ಹಲವು ಹಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Wed, 2 April 25