AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಪುತ್ರಿಯ ಮನೆ ಖರೀದಿಸಿದ ಹಾಲಿವುಡ್ ಜೋಡಿ: ಬೆಲೆ ಎಷ್ಟು?

Hollywood: ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಲಿವುಡ್​ನ ಬೆವರ್ಲಿ ಹಿಲ್ಸ್​ನಲ್ಲಿನ ತಮ್ಮ ಐಶಾರಾಮಿ ಮನೆಯನ್ನು ಮಾರಾಟ ಮಾಡಿದ್ದಾರೆ. ಮನೆ ಖರೀದಿ ಮಾಡಿರುವುದು ಹಾಲಿವುಡ್​ನ ಇಬ್ಬರು ದೊಡ್ಡ ತಾರೆಯರು.

ಅಂಬಾನಿ ಪುತ್ರಿಯ ಮನೆ ಖರೀದಿಸಿದ ಹಾಲಿವುಡ್ ಜೋಡಿ: ಬೆಲೆ ಎಷ್ಟು?
ಮಂಜುನಾಥ ಸಿ.
|

Updated on: Dec 06, 2024 | 10:52 AM

Share

ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ತಂದೆಯಂತೆಯೇ ಉದ್ಯಮಿಯಾಗಿ ಛಾಪು ಮೂಡಿಸಿದ್ದಾರೆ. ಇಶಾ ಅಂಬಾನಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಐಶಾರಾಮಿ ಮನೆಗಳನ್ನು ಹೊಂದಿದ್ದು, ಅಮೆರಿಕದ ಖ್ಯಾತ ಪ್ರದೇಶದಲ್ಲಿ ಇದ್ದ ತಮ್ಮ ಮನೆಯನ್ನು ಇದೀಗ ಮಾರಾಟ ಮಾಡಿದ್ದಾರೆ. ಇಶಾ ಅಂಬಾನಿಯ ಐಶಾರಾಮಿ ಮನೆಯನ್ನು ಹಾಲಿವುಡ್​ನ ಅತ್ಯಂತ ಜನಪ್ರಿಯ ದಂಪತಿ ಖರೀದಿ ಮಾಡಿದ್ದಾರೆ. ಅದೂ ಭಾರಿ ಬೆಲೆಗೆ.

ಇಶಾ ಅಂಬಾನಿ, ಹಾಲಿವುಡ್​ನ ಬೆವರ್ಲಿ ಹಿಲ್ಸ್​ನಲ್ಲಿ ಭಾರಿ ದೊಡ್ಡ ಮನೆಯನ್ನು ಹೊಂದಿದ್ದರು. 5.2 ಎಕರೆ ಪ್ರದೇಶದ ಅತ್ಯಂತ ದುಬಾರಿ ಮನೆಯನ್ನು ಇಶಾ ಅಂಬಾನಿ ಹೊಂದಿದ್ದರು. ಈ ಮನೆಯನ್ನು ಸುಮಾರು 10 ವರ್ಷಗಳ ಹಿಂದೆಯೇ ಖರೀದಿ ಮಾಡಲಾಗಿತ್ತು. ಆದರೆ ಇಶಾ ಅಂಬಾನಿ ಬಹಳ ಕಡಿಮೆ ಸಮಯ ಈ ಮನೆಯಲ್ಲಿದ್ದರು. 2022 ರ ತಮ್ಮ ಪ್ರೆಗ್ನೆನ್ಸಿ ಅವಧಿಯನ್ನು ಇಶಾ ಅಂಬಾನಿ ಇಲ್ಲಿಯೇ ಕಳೆದಿದ್ದರು. ಆ ಸಮಯದಲ್ಲಿ ಅವರ ತಾಯಿ ಅನಿತಾ ಅಂಬಾನಿ ಸಹ ಇದೇ ಮನೆಯಲ್ಲಿದ್ದರು. ಈಗ ಈ ಮನೆ ಮಾರಾಟವಾಗಿದೆ.

ಕಳೆದ ಐದು ವರ್ಷದಿಂದಲೂ ಈ ಮನೆ ಮಾರಾಟಕ್ಕೆ ಇಡಲಾಗಿತ್ತು, ಕೊನೆಗೆ ಹಾಲಿವುಡ್​ನ ತಾರಾ ದಂಪತಿಗಳಾದ ಜೆನಿಫರ್ ಲೊಪೇಜ್ ಮತ್ತು ಬೆನ್ ಅಫ್ಲಿಕ್ ಅವರುಗಳು ಈ ಮನೆಯನ್ನು 508 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡಿದ್ದಾರೆ. 12 ಬೆಡ್​ರೂಂ, 24 ಬಾತ್​ರೂಂ ಹೊಂದಿರುವ ಈ ಮನೆ ಹಾಗೂ ಪ್ರಾಪರ್ಟಿಯ ಒಟ್ಟು ವಿಸ್ತೀರ್ಣ 5.2 ಎಕರೆ. ಈ ಮನೆಯಲ್ಲಿ ವಿಶಾಲವಾದ ಸ್ವಿಮ್ಮಿಂಗ್ ಪೂಲ್, ಪಿಕಲ್ ಬಾಲ್ ಕೋರ್ಟ್, ವಿಶಾಲವಾದ ಎಂಟರ್ಟೈನ್​ಮೆಂಟ್ ಏರಿಯಾ, ಸಲೂನ್, ಖಾಸಗಿ ಜಿಮ್, ವಿಶಾಲ ಡೈನಿಂಗ್ ಏರಿಯಾ ಇನ್ನೂ ಹಲವು ಐಶಾರಾಮಿ ಸವಲತ್ತುಗಳನ್ನು ಒಳಗೊಂಡಿದೆ.

ಇದನ್ನೂ ಓದಿ:ರೇಖಾಳನ್ನು ಮೊಸಳೆ ಬಾಯಿಗೆ ತಳ್ಳಿ ಹಾಲಿವುಡ್​ಗೆ​ ಪರಾರಿ ಆಗಿದ್ದ ನಟ

ಬೆನ್ ಅಫ್ಲಿಕ್ ಹಾಲಿವುಡ್​ನ ಸ್ಟಾರ್ ನಟರಲ್ಲಿ ಒಬ್ಬರು. ಆಸ್ಕರ್ ವಿಜೇತ ‘ಅರ್ಗೊ’, ‘ಗೋನ್ ಗರ್ಲ್​’ ಸೇರಿದಂತೆ ಹಲವಾರು ಟಾಪ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಜಸ್ಟಿಸ್ ಲೀಗ್’ ಸಿನಿಮಾ ಸರಣಿಯಲ್ಲಿ ಬ್ಯಾಟ್​ಮ್ಯಾನ್ ಪಾತ್ರದಲ್ಲಿ ಸಹ ಬೆನ್ ಅಫ್ಲಿಕ್ ನಟಿಸಿದ್ದಾರೆ. ಇನ್ನು ಇವರ ಪತ್ನಿ ಜೆನಿಫರ್ ಲೊಪೇಜ್, ಪಾಪ್ ಲೋಕದ ದೊಡ್ಡ ತಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಕಲಾವಿದೆಯರಲ್ಲಿ ಜೆನಿಫರ್ ಲೊಪೇಜ್ ಸಹ ಒಬ್ಬರು

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ