‘ಆಪನ್​ಹೈಮರ್​ ಚಿತ್ರದಲ್ಲಿ ಭಗವದ್ಗೀತೆ ದೃಶ್ಯವೇ ನನ್ನ ಫೇವರಿಟ್​’: ವಿಮರ್ಶೆ ತಿಳಿಸಿದ ಕಂಗನಾ ರಣಾವತ್​

Bhagavad Gita: ಭಗವದ್ಗೀತೆಗೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣ ಆಗುವಂತಹ ದೃಶ್ಯ ‘ಆಪನ್​ಹೈಮರ್​’ ಸಿನಿಮಾದಲ್ಲಿದೆ. ಅದು ತಮ್ಮ ಇಷ್ಟದ ದೃಶ್ಯ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

‘ಆಪನ್​ಹೈಮರ್​ ಚಿತ್ರದಲ್ಲಿ ಭಗವದ್ಗೀತೆ ದೃಶ್ಯವೇ ನನ್ನ ಫೇವರಿಟ್​’: ವಿಮರ್ಶೆ ತಿಳಿಸಿದ ಕಂಗನಾ ರಣಾವತ್​
ಕಂಗನಾ ರಣಾವತ್​, ಕಿಲಿಯನ್​ ಮರ್ಫಿ
Follow us
ಮದನ್​ ಕುಮಾರ್​
|

Updated on: Jul 31, 2023 | 9:42 PM

ನಟಿ ಕಂಗನಾ ರಣಾವತ್​ (Kangana Ranaut) ಅವರು ಯಾವಾಗ, ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ. ಒಂದಷ್ಟು ದಿನಗಳ ಕಾಲ ಅವರು ಹಾಲಿವುಡ್​ ಸಿನಿಮಾಗಳ ವಿರುದ್ಧ ಮಾತನಾಡಿದ್ದರು. ಈಗ ಏಕಾಏಕಿ ಅವರು ‘ಆಪನ್​ಹೈಮರ್​’ (Oppenheimer) ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ (Christopher Nolan) ಅವರ ಸಿನಿಮಾಗಳಲ್ಲಿ ಇದೇ ಬೆಸ್ಟ್​ ಚಿತ್ರ ಎಂದು ಕಂಗನಾ ರಣಾವತ್​ ಹೊಗಳಿದ್ದಾರೆ. ಸಿನಿಮಾ ನೋಡಿದ ಬಳಿಕ ವಿಡಿಯೋ ಮೂಲಕ ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ. ಒಂದಷ್ಟು ವಿವಾದ ಸೃಷ್ಟಿ ಮಾಡಿರುವ ಭಗವದ್ಗೀತೆಯ ದೃಶ್ಯದ ಬಗ್ಗೆಯೂ ಕಂಗನಾ ರಣಾವತ್​ ಅವರು ಮಾತನಾಡಿದ್ದಾರೆ.

ಅಣು ಬಾಂಬ್​ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ವಿವರಗಳನ್ನು ಆಧರಿಸಿ ‘ಆಪನ್​ಹೈಮರ್​’ ಸಿನಿಮಾ ಮೂಡಿಬಂದಿದೆ. ಆಪನ್​ಹೈಮರ್​ ಅವರ ಪಾತ್ರವನ್ನು ಕಿಲಿಯನ್​ ಮರ್ಫಿ ನಿಭಾಯಿಸಿದ್ದಾರೆ. ವಿಶ್ವಾದ್ಯಂತ ಬಿಡುಗಡೆ ಆಗಿರುವ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಭಾರತದಲ್ಲೂ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ‘ಆಪನ್​ಹೈಮರ್​’ ಉತ್ತಮವಾಗಿ ಕಮಾಯಿ ಮಾಡಿದೆ. ಕಂಗನಾ ರಣಾವತ್​ ಅವರಿಗೂ ಈ ಸಿನಿಮಾ ಇಷ್ಟವಾಗಿದೆ. ಅದನ್ನು ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ.

‘ಆಪನ್​ಹೈಮರ್​’ ಸಿನಿಮಾದ ಕಥೆ ಏನು? ಯಾವೆಲ್ಲ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ಚರ್ಚೆ ಮಾಡಲಾಗಿದೆ? ತಮಗೆ ಯಾಕೆ ಈ ಸಿನಿಮಾ ಇಷ್ಟ ಆಯಿತು ಎಂಬಿತ್ಯಾದಿ ಅಂಶಗಳನ್ನು ಕಂಗನಾ ರಣಾವತ್ ಅವರು ವಿವರಿಸಿದ್ದಾರೆ. ‘ಭಗವದ್ಗೀತೆಯ ಉಲ್ಲೇಖ ಇರುವ ದೃಶ್ಯವೇ ನನ್ನ ಫೇವರಿಟ್​’ ಎಂದು ಅವರು ಹೇಳಿದ್ದಾರೆ. ‘ಇದು ಒಳ್ಳೆಯ ಸಿನಿಮಾ. ಎಲ್ಲರೂ ಹೋಗಿ ನೋಡಿ’ ಎಂದು ಕೂಡ ಕಂಗನಾ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ

ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಆಪನ್​ಹೈಮರ್​ ಅವರು ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಈ ಸಿನಿಮಾದಲ್ಲಿ ಇದೆ. ಅದಕ್ಕೆ ಭಾರತದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಆಕ್ಷೇಪಿಸಲಾಗಿದೆ. ಈ ನಡುವೆ ಕಂಗನಾ ರಣಾವತ್​ ಅವರು ಇಂಥ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣ ಆಗಿದೆ. ಕಂಗನಾ ಹೇಳಿಕೆಗೆ ಕೆಲವರು ಸಹಮತ ಸೂಚಿಸಿದ್ದಾರೆ. ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ