AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೇಜ್ ಬಿಟ್ಟು ಓಡಿ ಹೋದ ನಿಕ್, ಪ್ರಿಯಾಂಕಾ ಚೋಪ್ರಾ ಪತಿ ಜೀವಕ್ಕೆ ಅಪಾಯ?

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹಾಲಿವುಡ್​ನ ಖ್ಯಾತ ಪಾಪ್ ಗಾಯಕ. ಇತ್ತೀಚೆಗೆ ಲೈವ್ ಶೋ ನೀಡುವಾಗ ನಿಕ್ ಶೋ ಹಠಾತ್ತನೇ ವೇದಿಕೆ ಇಳಿದು ಓಡಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಕ್ ಜೋನಸ್ ಜೀವಕ್ಕೆ ಬೆದರಿಕೆ ಇದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

ಸ್ಟೇಜ್ ಬಿಟ್ಟು ಓಡಿ ಹೋದ ನಿಕ್, ಪ್ರಿಯಾಂಕಾ ಚೋಪ್ರಾ ಪತಿ ಜೀವಕ್ಕೆ ಅಪಾಯ?
Follow us
ಮಂಜುನಾಥ ಸಿ.
|

Updated on: Oct 16, 2024 | 12:38 PM

ಈಗ ಹಾಲಿವುಡ್​ನಲ್ಲಿ ನೆಲೆಸಿರುವ ಖ್ಯಾತ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಹಾಲಿವುಡ್​ನ ಜನಪ್ರಿಯ ಪಾಪ್ ಗಾಯಕ. ನಿಕ್ ಜೋನಸ್ ಹಾಗೂ ಅವರ ಸಹೋದರರು ಸೇರಿ ನಡೆಸುವ ಜೋನಸ್ ಬ್ರದರ್ಸ್ ಕಾನ್ಸರ್ಟ್​ಗಳಿಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಸುತ್ತಾರೆ. ಇತ್ತೀಚೆಗೆ ನಡೆದ ಇಂಥಹುದೇ ಒಂದು ಕಾನ್​ಸರ್ಟ್​ನಲ್ಲಿ ನಿಕ್ ಜೋನಸ್ ವೇದಿಕೆ ಮೇಲೆ ಪ್ರದರ್ಶನ ನೀಡುವ ಸಮಯದಲ್ಲಿ ಒಮ್ಮಿಂದೊಮ್ಮೆಲೆ ಸ್ಟೇಜ್​ ಬಿಟ್ಟು ಓಡಿ ಹೋಗಿದ್ದಾರೆ. ಇದು ನಿಕ್​ರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಹೀಗೆ ಹಠಾತ್ತನೆ ಸ್ಟೇಜ್ ಬಿಟ್ಟು ಓಡಿ ಹೋಗಿದ್ದಕ್ಕೆ ಕಾರಣವೂ ಇದೆ.

ಪೆರುಗ್ವೆನಲ್ಲಿ ನಿಕ್ ಸಹೋದರರು ಲೈವ್ ಕಾನ್ಸರ್ಟ್ ನಡೆಸುತ್ತಿದ್ದರು. ವೇದಿಕೆ ಮೇಲೆ ನಿಕ್ ಜೋನಸ್, ಜೋ ಜೋನಸ್, ಕೆವಿನ್ ಜೋನಸ್ ಮೂವರೂ ಸಹ ಪ್ರದರ್ಶನ ನೀಡುತ್ತಿದ್ದರು. ಸುತ್ತಲೂ ಪ್ರೇಕ್ಷಕರ ಗ್ಯಾಲರಿ ನಿರ್ಮಾಣವಾಗಿತ್ತು. ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ವೇದಿಕೆ ಮೇಲಿದ್ದ ನಿಕ್ ತಮ್ಮ ಹಿಂದೆ ಗ್ಯಾಲರಿಯಲ್ಲಿ ನಿಂತಿದ್ದ ಜನರನ್ನು ನೋಡುತ್ತಲೇ ವೇದಿಕೆ ಇಳಿದು ತನ್ನ ಭದ್ರತೆಯವರಿಗೆ ಕೈ ಸಂಜ್ಞೆ ಮಾಡುತ್ತಾ ವೇದಿಕೆಯಿಂದ ಇಳಿದು ಓಡಿದರು. ಇದು ನೆರೆದಿದ್ದವರಿಗೆ ಆಶ್ಚರ್ಯ ತಂದಿತು.

ಅಸಲಿಗೆ ನಡೆದಿದ್ದೇನೆಂದರೆ ನಿಕ್​ ಮೇಲೆ ಯಾರೋ ಲೇಸರ್ ಬೆಳಕು ಬಿಟ್ಟರು. ಕೆಂಪು ಬಣ್ಣದ ಆ ಬೆಳಕು ರೈಫರ್ ಬಂದೂಕುಗಳಲ್ಲಿಯೂ ಬಳಲಸಾಗುತ್ತದೆ. ಅಲ್ಲದೆ ಕೆಂಪು ಬಣ್ಣದ ಬೆಳಕನ್ನು ಅಪಾಯನ ಸೂಚಕವಾಗಿಯೂ ಬಳಸಲಾಗುತ್ತದೆ. ಅದೇ ಕಾರಣಕ್ಕೆ ನಿಕ್ ಜೋನಸ್ ತಮ್ಮ ಮೇಲೆ ಕೆಂಪು ಲೇಸರ್ ಬೀಳುತ್ತಿದ್ದಂತೆ ಅಲ್ಲಿಂದ ದೂರ ಓಡಿ ಬಚ್ಚಿಟ್ಟುಕೊಂಡಿದ್ದಾರೆ. ಅವರ ಭದ್ರತೆಯರು ಕೂಡಲೇ ಪರಿಶೀಲನೆ ನಡೆಸಿ ಲೇಸರ್ ಬಿಡುತ್ತಿದ್ದ ವ್ಯಕ್ತಿಯನ್ನು ಕಂಡು ಹಿಡಿದು ಆತನನ್ನು ಹೊರಗಟ್ಟಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕಾಗೂ ಮುನ್ನ ನಿಕ್ ಜೋನಸ್ ಅದೆಷ್ಟು ಹುಡುಗಿಯರ ಜೊತೆ ಓಡಾಡಿದ್ದಾರೆ ಗೊತ್ತಾ?

ನಿಕ್ ಜೋನಸ್ ಹಾಲಿವುಡ್​ನ ಖ್ಯಾತ ರ್ಯಾಪರ್ ಮತ್ತು ಪಾಪ್ ಗಾಯಕ. ಜೋನಸ್ ಬ್ರದರ್ಸ್ ಹೆಸರಿನ ಇವರ ಬ್ಯಾಂಡ್ ವಿಶ್ವಮಟ್ಟದಲ್ಲಿ ಜನಪ್ರಿಯತೆ ಹೊಂದಿದೆ. ಭಾರತದಲ್ಲಿಯೂ ಒಮ್ಮೆ ನಿಕ್ ಪ್ರದರ್ಶನ ನೀಡಿದ್ದರು. ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ 2018 ರಲ್ಲಿ ವಿವಾಹವಾದರು. ನಿಕ್​ರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಹಾಲಿವುಡ್​ನಲ್ಲಿ ನೆಲೆಸಿದ್ದಾರೆ. ಇಬ್ಬರಿಗೂ ಸಹ ಮಾಲತಿ ಹೆಸರಿನ ಮಗಳಿದ್ದಾಳೆ. ನಿಕ್ ಜೋನಸ್ ಕೇವಲ ಗಾಯಕ ಮಾತ್ರವೇ ಅಲ್ಲದೆ ಹಲವಾರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ