‘ಮಗು ಮಲಗಿದೆ, ಕೂಗಬೇಡಿ’; ವಿಮಾನ ನಿಲ್ದಾಣದಲ್ಲಿ ನಿಕ್ ಜೋನಸ್ ವಿಶೇಷ ಮನವಿ

ಪ್ರಿಯಾಂಕಾ ಚೋಪ್ರಾ ಈ ಬಾರಿ ಹೋಳಿಯನ್ನು ಭಾರತದಲ್ಲಿ ಆಚರಿಸಿದ್ದಾರೆ. ಉದ್ಯಮಿ ಮುಖೇಶ್ ಅಂಬಾನಿ ಮನೆಯ ಹೋಳಿ ಆಚರಣೆಯಲ್ಲಿ ಭಾಗಿ ಆಗಿದ್ದರು. ದೆಹಲಿಯಲ್ಲಿ ಕುಟುಂಬದವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಅವರು ಭಾಗವಹಿಸಿದರು.

‘ಮಗು ಮಲಗಿದೆ, ಕೂಗಬೇಡಿ’; ವಿಮಾನ ನಿಲ್ದಾಣದಲ್ಲಿ ನಿಕ್ ಜೋನಸ್ ವಿಶೇಷ ಮನವಿ
ನಿಕ್-ಪ್ರಿಯಾಂಕಾ
Follow us
ರಾಜೇಶ್ ದುಗ್ಗುಮನೆ
|

Updated on: Apr 01, 2024 | 7:27 AM

ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ನಿಕ್ ಜೋನಸ್ ಸುಖವಾಗಿ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎಂದು ಅನೇಕರು ಹೇಳಿದ್ದು ಇದೆ. ಆದರೆ, ಇದೆಲ್ಲವನ್ನೂ ಈ ದಂಪತಿ ಸುಳ್ಳು ಮಾಡಿ ತೋರಿಸಿದ್ದಾರೆ. ಈ ದಂಪತಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಆಗಾಗ ಇವರು ಭಾರತಕ್ಕೆ ಬರುತ್ತಾರೆ. ಅವರು ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಹಲವು ಕಡೆಗಳಲ್ಲಿ ಸುತ್ತಾಡಿದ್ದರು. ಈಗ ಅವರು ಮರಳಿ ನ್ಯೂಯಾರ್ಕ್​ಗೆ ಹೊರಟಿದ್ದಾರೆ. ವಿಮಾನ ನಿಲ್ದಾಣದ ವಿಡಿಯೋ ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ಈ ಬಾರಿ ಹೋಳಿಯನ್ನು ಭಾರತದಲ್ಲಿ ಆಚರಿಸಿದ್ದಾರೆ. ಉದ್ಯಮಿ ಮುಖೇಶ್ ಅಂಬಾನಿ ಮನೆಯ ಹೋಳಿ ಆಚರಣೆಯಲ್ಲಿ ಭಾಗಿ ಆಗಿದ್ದರು. ದೆಹಲಿಯಲ್ಲಿ ಕುಟುಂಬದವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಅವರು ಭಾಗವಹಿಸಿದರು. ಸಹೋದರಿ ಮನ್ನಾರಾ ಚೋಪ್ರಾನ ಬರ್ತ್​ಡೇ ಪಾರ್ಟಿಯಲ್ಲೂ ಹಾಜರಿ ಹಾಕಿದ್ದರು. ಪ್ರಿಯಾಂಕಾ ಹೋದಲ್ಲೆಲ್ಲ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿ ಕೂಡ ತೆರಳಿದ್ದಾರೆ. ಈಗ ಅವರು ಭಾರತದಿಂದ ಅಮೆರಿಕಕ್ಕೆ ಹೊರಟಿದ್ದಾರೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಪ್ರಿಯಾಂಕಾ, ನಿಕ್ ಹಾಗೂ ಮಾಲ್ತಿ ಆಗಮಿಸಿದರು. ಮಾಲ್ತಿ ಅಮ್ಮನ ತೋಳಲ್ಲಿ ಮಲಗಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕಂಡಾಗ ಪಾಪರಾಜಿಗಳು ಅರಚುತ್ತಾರೆ. ಪೋಸ್ ಕೊಡುವಂತೆ ಕೂಗುತ್ತಾರೆ. ಇದನ್ನು ಅರಿತಿದ್ದ ನಿಕ್ ಜೋನಸ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ತುಟಿಯ ಮೇಲೆ ಬೆರಳು ಇಟ್ಟು ಸುಮ್ಮನೆ ಇರುವಂತೆ ಸೂಚಿಸಿದರು. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಅನೇಕರು ನಿಕ್​ನ ಬಾಯ್ತುಂಬ ಹೊಗಳಿದ್ದಾರೆ.

ಇದನ್ನೂ ಓದಿ: ಪತಿ ನಿಕ್ ಜೋನಸ್ ಜೊತೆ ಅಯೋಧ್ಯೆಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

‘ನಿಕ್ ಅವರು ಪತ್ನಿ ಹಾಗೂ ಮಗುವನ್ನು ಎಷ್ಟು ಕೇರ್ ಮಾಡುತ್ತಾರೆ ಅನ್ನೋದಕ್ಕೆ ಇದುವೇ ಸಾಕ್ಷಿ’ ಎಂದು ಅವರು ಬರೆದುಕೊಂಡಿದ್ದಾರೆ. ‘ನಿಕ್ ಅವರು ತಂದೆಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಸೆಟಲ್ ಆಗಿದ್ದು, ಹಾಲಿವುಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಿಕ್ ಅವರು ಪಾಪ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ