AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ

ಜಾಗತಿಕ ಮಟ್ಟದ ಖ್ಯಾತ ಹಾರರ್ ನಿರ್ದೇಶಕ ಕರಿ ಬಾರ್ಕರ್ ಅವರು ಭಾರತದ ಮೂವರು ಪ್ರತಿಭೆಗಳನ್ನು ಫಾಲೋ ಮಾಡುತ್ತಿದ್ದಾರೆ. ‘ಅಬ್ಸೆಷನ್’ ಸಿನಿಮಾ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿರುವ ಕರಿ ಬಾರ್ಕರ್ ಅವರಿಗೆ ಭಾರತದಲ್ಲಿ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಎಲ್ಲ ಕಡೆಗಳಲ್ಲಿ ‘ಅಬ್ಸೆಷನ್’ ಬಗ್ಗೆಯೇ ಮಾತುಗಳು ಕೇಳಿಬರುತ್ತಿವೆ.

ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ
Curry Barker
ಮದನ್​ ಕುಮಾರ್​
|

Updated on: Jun 26, 2026 | 9:45 PM

Share

ಮುಖ್ಯಾಂಶಗಳು

  • ಭಾರತದಲ್ಲಿ ಸೂಪರ್ ಹಿಟ್ ಆಗಿದೆ ಹಾಲಿವುಡ್​ನ ‘ಅಬ್ಸೆಷನ್’ ಸಿನಿಮಾ.
  • ಈ ಹಾರರ್ ಚಿತ್ರದ ನಿರ್ದೇಶಕ ಕರಿ ಬಾರ್ಕರ್ ಕೂಡ ಫೇಮಸ್ ಆಗಿದ್ದಾರೆ.
  • ಭಾರತದ ಕೇವಲ 3 ಸೆಲೆಬ್ರಿಟಿಗಳನ್ನು ಫಾಲೋ ಮಾಡ್ತಿರುವ ಕರಿ ಬಾರ್ಕರ್.

ತಮ್ಮ ಇತ್ತೀಚಿನ ಸೈಕಲಾಜಿಕಲ್ ಹಾರರ್ ಹಿಟ್ ಸಿನಿಮಾ ‘ಅಬ್ಸೆಷನ್’ (Obsession) ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡಿರುವ 26 ವರ್ಷದ ಪ್ರತಿಭಾವಂತ ಹಾಲಿವುಡ್ ನಿರ್ದೇಶಕ ಕರಿ ಬಾರ್ಕರ್ (Curry Barker) ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕರಿ ಬಾರ್ಕರ್ ಅವರ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್ ಗಮನಿಸಿದರೆ, ಅವರಿಗೆ ಭಾರತದ ಚಿತ್ರರಂಗದೊಂದಿಗೆ ಇರುವ ಒಂದು ವಿಶೇಷ ನಂಟಿನ ಬಗ್ಗೆ ಗೊತ್ತಾಗಿದೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ಮೂವರು ಭಾರತೀಯ ಸೆಲೆಬ್ರಿಟಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ನಟರಾದರೆ, ಮತ್ತೊಬ್ಬರು ಸಿನಿಮಾ ನಿರ್ದೇಶಕರಾಗಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್:

ಹಿಂದಿ ಚಿತ್ರರಂಗದ ಖ್ಯಾತ ನಟ ಕಾರ್ತಿಕ್ ಆರ್ಯನ್ ಅವರನ್ನು ಕರಿ ಬಾರ್ಕರ್ ಫಾಲೋ ಮಾಡುತ್ತಿರುವುದು ಅಷ್ಟೇನೂ ಆಶ್ಚರ್ಯ ತಂದಿಲ್ಲ. ಏಕೆಂದರೆ, ಕರಿ ಬಾರ್ಕರ್ ಅವರ ‘ಅಬ್ಸೆಷನ್’ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್‌ನಿಂದ ಅದಕ್ಕೆ ಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಇದೇ ಕಾರ್ತಿಕ್ ಆರ್ಯನ್. ಈ ಚಿತ್ರದ ಬಗ್ಗೆ ಇಂಟರ್ನೆಟ್‌ನಲ್ಲಿ ತಮಗಿರುವ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ ಕಾರ್ತಿಕ್, ‘ಬಹಳ ದಿನಗಳ ನಂತರ ಬಂದ ಅತ್ಯುತ್ತಮ ಹಾರರ್ ಚಿತ್ರಗಳಲ್ಲಿ ಇದು ಒಂದು. ನಾನು ನಿಜಕ್ಕೂ ‘ಅಬ್ಸೆಷನ್’ ಚಿತ್ರಕ್ಕೆ ಫಿದಾ ಆಗಿದ್ದೇನೆ. ಯಾರೂ ಇದನ್ನು ಮಿಸ್ ಮಾಡಬೇಡಿ’ ಎಂದು ಬರೆದುಕೊಂಡಿದ್ದರು.

ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ:

ಲಕ್ನೋ ಮೂಲದ ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ ಅವರು ಕರಿ ಬಾರ್ಕರ್ ಫಾಲೋ ಮಾಡುತ್ತಿರುವ ಎರಡನೇ ಭಾರತೀಯ ನಟಿ. ರಿಚ್ಚಾ ಅವರು ಸದ್ಯ ಬ್ರಿಟಿಷ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಅನ್ಯಾ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಪೈನ್‌ವುಡ್ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು, ಹೊಸ ದೇಶಕ್ಕೆ ತೆರಳುವ ಯುವತಿಯೊಬ್ಬಳು ಅಲ್ಲಿ ಎದುರಿಸುವ ಭಾವುಕ ಹಾಗೂ ರೋಮಾಂಚನಕಾರಿ ಸನ್ನಿವೇಶಗಳ ಸುತ್ತ ಸಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಸೂಪರ್ ಹಿಟ್ ಆದ ಹಾಲಿವುಡ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಬರೋದು ಯಾವಾಗ?

ಯುವ ನಿರ್ದೇಶಕ ಕುಶಾಲ್ ಚಾವ್ಲಾ:

ಕರಿ ಬಾರ್ಕರ್ ಲಿಸ್ಟ್‌ನಲ್ಲಿರುವ ಮೂರನೇ ಭಾರತೀಯ ಅಂದರೆ ಅದು ನಿರ್ದೇಶಕ ಕುಶಾಲ್ ಚಾವ್ಲಾ. ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಮತ್ತು ಇಂಡಿ ಸಿನಿಮಾ ವಲಯದಲ್ಲಿ ಕುಶಾಲ್ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಅನದರ್ ಟೈಮ್’ ಸಿನಿಮಾ ಲಾಸ್ ಏಂಜಲೀಸ್‌ನ ಪ್ರಖ್ಯಾತ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್‌ನಲ್ಲಿ ಪ್ರೀಮಿಯರ್ ಆಗುವ ಮೂಲಕ ದೊಡ್ಡ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರವು ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸೇರಿದಂತೆ ಜಾಗತಿಕವಾಗಿ 15ಕ್ಕೂ ಹೆಚ್ಚು ಗೌರವಗಳನ್ನು ಮುಡಿಗೇರಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ