
ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ನಡುವೆ ಉತ್ತಮ ಒಡನಾಟ ಬೆಳೆದಿದೆ. ‘ಸಲಾರ್’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ ಅವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಬಿಡುವು ಸಿಕ್ಕಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಅದಕ್ಕೆ ಈಗ ಲೇಟೆಸ್ಟ್ ಉದಾಹರಣೆ ಸಿಕ್ಕಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ (Prabhas) ಅವರು ಜೊತೆಯಾಗಿ ಸಿನಿಮಾ ನೋಡಲು ತೆರಳಿದ್ದಾರೆ. ತಮ್ಮ ತಮ್ಮ ಸಿನಿಮಾಗಳ ಕೆಲಸಗಳನ್ನು ಬದಿಗಿಟ್ಟು ಅವರು ಹಾಲಿವುಡ್ ಸಿನಿಮಾ ವೀಕ್ಷಿಸಿದ್ದಾರೆ. ಅಂದಹಾಗೆ, ಅವರು ನೋಡಿರುವುದು ‘ಎಫ್1’ (F1 The Movie) ಸಿನಿಮಾ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಜೂನ್ 27ರಂದು ‘ಎಫ್1’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಬ್ರಾಡ್ ಪಿಟ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಕಾರ್ ರೇಸಿಂಗ್ ಕುರಿತ ಕಹಾನಿ ಇರುವ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾವನ್ನು ನೋಡಲು ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ಕೂಡ ತೆರಳಿದ್ದಾರೆ. ಆ ಮೂಲಕ ಅವರು ಸುದ್ದಿ ಆಗಿದ್ದಾರೆ.
ಹೈದರಾಬಾದ್ನ ಪ್ರಸಾದ್ ಮಲ್ಟಿಪ್ಲೆಕ್ಸ್ನಲ್ಲಿ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಅವರು ಸಿನಿಮಾ ವೀಕ್ಷಿಸಿದ್ದಾರೆ. ಅವರಿಬ್ಬರು ಒಟ್ಟಿಗೆ ಕುಳಿತಿರುವಾಗ ಅಭಿಮಾನಿಗಳಿಗಳು ಫೋಟೋ ಕ್ಲಿಕ್ಕಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ‘ಭಾರತದ ದೊಡ್ಡ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ನಮ್ಮ ಪ್ರಶಾಂತ್ ನೀಲ್ ಅವರು ಎಫ್1 ಸಿನಿಮಾ ನೋಡುತ್ತಿದ್ದಾರೆ’ ಎಂಬ ಕ್ಯಾಪ್ಷನ್ನೊಂದಿಗೆ ಫೋಟೋ ಹಂಚಿಕೊಳ್ಳಲಾಗಿದೆ.
India’s biggest star #Prabhas and our #PrashanthNeel Watching #F1TheMovie in Prasads Multiplex [PCX] 🔥🔥🔥 pic.twitter.com/BahuoWZNix
— Hail Prabhas (@HailPrabhas007) July 14, 2025
ಅಷ್ಟಕ್ಕೂ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರು ‘ಎಫ್1’ ಸಿನಿಮಾವನ್ನು ನೋಡಲು ಏನಾದರೂ ನಿರ್ದಿಷ್ಟ ಕಾರಣ ಇರಬಹುದೇ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಮುಂದಿನ ಸಿನಿಮಾಗೆ ಏನಾದರೂ ಸ್ಫೂರ್ತಿ ಪಡೆಯುವ ಸಲುವಾಗಿ ಅವರಿಬ್ಬರು ಈ ಸಿನಿಮಾ ನೋಡಿರಬಹುದಾ ಎಂಬ ಅನುಮಾನ ಕೆಲವರಿಗೆ ಇದೆ.
ಇದನ್ನೂ ಓದಿ: ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕರೀನಾ ಕಪೂರ್ ಸ್ಪೆಷಲ್ ಸಾಂಗ್?
ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 5ರಂದು ಈ ಚಿತ್ರ ತೆರೆಕಾಣಲಿದೆ. ಇತ್ತ, ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಬಳಿಕ ಅವರು ‘ಸಲಾರ್ 2’ ಸಿನಿಮಾ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.