AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕರೀನಾ ಕಪೂರ್ ಸ್ಪೆಷಲ್ ಸಾಂಗ್?

ಬೇರೆ ಬೇರೆ ಸಿನಿಮಾಗಳಲ್ಲಿ ಕರೀನಾ ಕಪೂರ್ ಖಾನ್ ಅವರು ಸ್ಪೆಷಲ್ ಸಾಂಗ್ ಮಾಡಿ ಜನರನ್ನು ರಂಜಿಸಿದ್ದಾರೆ. ಈಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ತಂಡದಿಂದ ಕರೀನಾ ಕಪೂರ್ ಅವರಿಗೆ ಆಫರ್ ನೀಡಲಾಗಿದೆ. ಈ ಆಫರ್ ಒಪ್ಪಿಕೊಂಡರೆ ಅವರಿಗೆ ದುಬಾರಿ ಸಂಭಾವನೆ ಸಿಗಲಿದೆ. ಈ ರೀತಿ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿಸುತ್ತಿದೆ.

‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಜೊತೆ ಕರೀನಾ ಕಪೂರ್ ಸ್ಪೆಷಲ್ ಸಾಂಗ್?
Prabhas, Kareena Kapoor Khan
ಮದನ್​ ಕುಮಾರ್​
|

Updated on: Jul 02, 2025 | 7:13 AM

Share

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರಿಗೆ ಈಗ 44 ವರ್ಷ ವಯಸ್ಸು. ಎರಡು ಮಕ್ಕಳ ತಾಯಿ ಅವರು. ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿವೆ. ಹಾಗಿದ್ದರೂ ಕೂಡ ಅವರಿಗೆ ಇಂದಿಗೂ ಅಷ್ಟೇ ಬೇಡಿಕೆ ಇದೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಕರೀನಾ ಕಪೂರ್ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದಲ್ಲಿ ಸಹ ಕರೀನಾ ಕಪೂರ್ ಅವರು ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದವರು ಕರೀನಾ ಕಪೂರ್ ಜೊತೆ ಈಗಾಗಲೇ ಒಂದು ಸತ್ತಿನ ಮಾತುಕಥೆ ಮಾಡಿದ್ದಾರೆ ಎಂದು ಸುದ್ದಿ ಆಗಿದೆ.

‘ದಿ ರಾಜಾ ಸಾಬ್’ ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯ ಆಗಿವೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಇದು ಹಾರರ್ ಸಿನಿಮಾ. ಪ್ರಭಾಸ್ ಅವರು ಇದೇ ಮೊದಲ ಬಾರಿಗೆ ಹಾರರ್ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಇದೇ ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ನಟಿಸುವ ಸಾಧ್ಯತೆ ಇದೆ.

ಈ ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಇರಬೇಕು ಎಂದು ಚಿತ್ರತಂಡ ನಿರ್ಧರಿಸಿದೆಯಂತೆ. ಅದರಲ್ಲಿ ಡ್ಯಾನ್ಸ್ ಮಾಡಲು ಕರೀನಾ ಕಪೂರ್ ಅವರಿಗೆ ಆಫರ್ ನೀಡಲಾಗಿದೆ. ಕರೀನಾ ಒಪ್ಪಿಕೊಂಡರೆ ಅವರಿಗೆ ದುಬಾರಿ ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ. ಕರೀನಾ ಕಡೆಯಿಂದ ಅಂತಿಮ ನಿರ್ಧಾರ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ
Image
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ಕಲ್ಕಿ 2898 ಎಡಿ’ ಟೀಂ
Image
ಪ್ರಭಾಸ್ ಜೊತೆಗೆ ಹೊಂಬಾಳೆಯ 4ನೇ ಸಿನಿಮಾ, ನಿರ್ದೇಶಕ ಯಾರು?
Image
ತಂದೆ ಮೃತಪಟ್ಟ ನೋವಲ್ಲೂ ಸಹಾಯ ಮಾಡೋದು ಮರೆತಿರಲಿಲ್ಲ ಪ್ರಭಾಸ್  
Image
ಪ್ರಭಾಸ್​ರ ಹೊಸ ಚಿತ್ರ ಶೂಟಿಂಗ್​ಗೆ ಮುಹೂರ್ತ ಫಿಕ್ಸ್, ಬಿಡುಗಡೆ ಯಾವಾಗ?

ಮಾರುತಿ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ಟಿಜಿ ವಿಶ್ವಪ್ರಸಾದ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ಸಂಜಯ್ ದತ್, ನಿಧಿ ಅಗರ್​ವಾಲ್, ಮಾಳವಿಕಾ ಮೋಹನನ್ ಮುಂತಾದವರು ಕೂಡ ‘ದಿ ರಾಜಾ ಸಾಬ್’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಕರೀನಾ ಕಪೂರ್ ಸಹವಾಸ ಮಾಡಬೇಡ’: ಸೈಫ್​ಗೆ ಎಚ್ಚರಿಕೆ ನೀಡಿದ್ದ ಅಕ್ಷಯ್ ಕುಮಾರ್

ಈ ಮೊದಲು ಕೂಡ ಕರೀನಾ ಕಪೂರ್ ಖಾನ್ ಬಗ್ಗೆ ಕೆಲವು ಗಾಸಿಪ್ ಕೇಳಿಬಂದಿತ್ತು. ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ಕರೀನಾ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಅದು ನಿಜವಾಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.