ಖ್ಯಾತ ಗಾಯಕ ಕಾನ್ಯೆ ವೆಸ್ಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ವಿಡಿಯೋ ಬಿಡುಗಡೆ

ಹಾಲಿವುಡ್​ನ ಜನಪ್ರಿಯ ಗಾಯಕ, ಫ್ಯಾಷನ್ ಡಿಸೈನರ್ ಕಾನ್ಯೆ ವೆಸ್ಟ್ ವಿರುದ್ಧ ಅವರ ಮಾಜಿ ಸಹಾಯಕಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಕೆಲವು ವಿಡಿಯೋ, ಸಂದೇಶಗಳನ್ನು ಬಿಡುಗಡೆ ಮಾಡಿದ್ದಾರೆ.

ಖ್ಯಾತ ಗಾಯಕ ಕಾನ್ಯೆ ವೆಸ್ಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ವಿಡಿಯೋ ಬಿಡುಗಡೆ
Follow us
ಮಂಜುನಾಥ ಸಿ.
|

Updated on: Jun 04, 2024 | 12:49 PM

ಅಮೆರಿಕದ ಜನಪ್ರಿಯ ಗಾಯಕ, ರ‍್ಯಾಪರ್, ಫ್ಯಾಷನ್ ಡಿಸೈನರ್, ಉದ್ಯಮಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕಾನ್ಯೆ ವೆಸ್ಟ್ (Kanye West) ಮೇಲೆ ಅವರ ಮಾಜಿ ಸಹಾಯಕಿ ಲಾರೆನ್ ಪಿಸ್ಕಾಟ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಕಾನ್ಯೆಯ ವಿಡಿಯೋ ಹಾಗೂ ಕಾನ್ಯೆ ತಮಗೆ ಕಳಿಸಿರುವ ಅಶ್ಲೀಲ ಸಂದೇಶಗಳನ್ನು ಸಹ ಆಕೆ ಬಿಡುಗಡೆ ಮಾಡಿದ್ದಾರೆ. ಕಾನ್ಯೆ ವೆಸ್ಟ್, ತಮಗೆ ಅಶ್ಲೀಲ ವಿಡಿಯೋಗಳನ್ನು, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಎಂದು ಲಾರೆನ್ ಆರೋಪ ಮಾಡಿದ್ದಾರೆ.

ಕಾನ್ಯೆ ವೆಸ್ಟ್, ಮುಷ್ಠಿ ಮೈಥುನ ಮಾಡುವಾಗ ತಮಗೆ ಕರೆ ಮಾಡುತ್ತಿದ್ದ. ಕರೆ ಮಾಡಿ ನಾನು ಈಗ ಏನು ಮಾಡುತ್ತಿದ್ದೀನಿ ಊಹಿಸು ಎಂದು ಕೇಳುತ್ತಿದ್ದ, ಅಲ್ಲದೆ ನನ್ನ ಬಾಯ್​ಫ್ರೆಂಡ್​ಗಳ ಖಾಸಗಿ ಅಂಗದ ಅಳತೆ ಇನ್ನಿತರೆ ವಿಷಯಗಳ ಬಗ್ಗೆ ಅಶ್ಲೀಲವಾಗಿ ನನ್ನ ಬಳಿ ವಿಚಾರಿಸುತ್ತಿದ್ದ ಎಂದು ಲಾರೆನ್ ಆರೋಪ ಮಾಡಿದ್ದಾರೆ.

ಕಾನ್ಯೆ ತಮ್ಮ ಹೊಸ ಫ್ಯಾಷನ್ ಬ್ರ್ಯಾಂಡ್ ‘ಯೀಜಿ’ ಅನ್ನು ಪ್ರಾರಂಭ ಮಾಡುವಾಗ ಲಾರೆನ್ ಅನ್ನು ಕಾನ್ಯೆ ಸಹಾಯಕಿಯಾಗಿ ನೇಮಕ ಮಾಡಿಕೊಂಡಿದ್ದರು. ‘ಯೀಜಿ’ ಕೆಲವೇ ತಿಂಗಳಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿತ್ತು. ಫ್ಯಾಷನ್ ಬ್ರ್ಯಾಂಡ್​ನ ಜೊತೆಗೆ ಕಾನ್ಯೆಯ ಆಲ್ಬಂ ಒಂದಕ್ಕಾಗಿ ಸಹ ಲಾರೆನ್, ಕಾನ್ಯೆ ಜೊತೆಗೆ ಕೆಲಸ ಮಾಡಿದ್ದರು. ಕೆಲಸಕ್ಕೆ ಸೇರಿಸಿಕೊಂಡ ಒಂದು ವರ್ಷದ ಬಳಿಕ, ಲಾರೆನ್​ರ ‘ಓನ್ಲಿ ಫ್ಯಾನ್ಸ್’ ಪೇಜ್ ಅನ್ನು ಡಿಲೀಟ್ ಮಾಡುವಂತೆ ಕಾನ್ಯೆ ಹೇಳಿದ್ದ, ಲಾರೆನ್ ‘ಓನ್ಲಿ ಫ್ಯಾನ್ಸ್’ ಡಿಲೀಟ್ ಮಾಡಿದರೆ 8.35 ಕೋಟಿ ನೀಡುವುದಾಗಿ ಹೇಳಿದ್ದರಂತೆ.

ಇದನ್ನೂ ಓದಿ:ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮದಲ್ಲಿ ಖ್ಯಾತ ಹಾಲಿವುಡ್ ಗಾಯಕಿಯ ಪ್ರದರ್ಶನ

ಲಾರೆನ್​ಗೆ ತೀರ ಅಶ್ಲೀಲ ಸಂದೇಶಗಳನ್ನು ಕಾನ್ಯೆ, ಲಾರೆನ್​ಗೆ ಕಳಿಸಿದ್ದು ಆ ಸಂದೇಶಗಳನ್ನು ಲಾರೆನ್ ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ. ಕಾನ್ಯೆ, ಲಾರೆನ್​ ಬಳಿ ಲೈಂಗಿಕತೆಗೆ ಸಂಬಂಧಿಸಿದಂತೆ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಇಟ್ಟಿರುವುದು ಈಗ ಬಿಡುಗಡೆ ಮಾಡಲಾಗಿರುವ ಸಂದೇಶಗಳಿಂದ ಗೊತ್ತಾಗಿದೆ. ಲಾರೆನ್​ಗೆ ಕೆಲವು ಅಶ್ಲೀಲ ವಿಡಿಯೋಗಳನ್ನು ಸಹ ಕಾನ್ಯೆ ಕಳಿಸಿದ್ದು, ಅದರಲ್ಲಿ ಕೆಲವು ತಮ್ಮದೇ ಖಾಸಗಿ ವಿಡಿಯೋಗಳಾಗಿವೆ ಎಂದು ಲಾರೆನ್ ಹೇಳಿದ್ದಾರೆ. ಕಾನ್ಯೆ, ಕೆಲವು ಮಾಡೆಲ್​ಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡು ಲಾರೆನ್​ಗೆ ಕಳಿಸಿದ್ದ.

ಕಾನ್ಯೆ ವೆಸ್ಟ್, ಲಾರೆನ್​ಗೆ ವರ್ಷಕ್ಕೆ 33 ಕೋಟಿ ಸಂಬಳ ನೀಡುತ್ತಿದ್ದರಂತೆ. ಒಂದೇ ವರ್ಷದಲ್ಲಿ ಎರಡು ಬಾರಿ ಪ್ರೊಮೋಷನ್ ಸಹ ನೀಡಿದ್ದರು. 2022 ರ ಅಕ್ಟೋಬರ್​ನಲ್ಲಿ ಲಾರೆನ್​ ಅನ್ನು ಕೆಲಸದಿಂದ ವಜಾ ಮಾಡಿದ್ದ ಕಾನ್ಯೆ, 25 ಕೋಟಿ ಹಣ ಕೊಟ್ಟು ಹೊರಗೆ ಕಳಿಸಿದ್ದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ