ಕೆಲವೇ ದಿನಗಳ ಹಿಂದೆ ಕನ್ನಡದ ಖ್ಯಾತ ನಟಿಯೊಬ್ಬರ ಪಾರ್ಟಿ ವಿಡಿಯೋ ವೈರಲ್ ಆಗಿತ್ತು. ಗೆಳತಿಯರ ಜೊತೆ ಪಾರ್ಟಿ ಮಾಡುವಾಗ ಅವರು ತುಂಬ ಆಪ್ತವಾಗಿ ನಡೆದುಕೊಂಡಿದ್ದರು. ಗೆಳತಿಯ ಜೊತೆ ಲಿಪ್ ಲಾಕ್ ಮಾಡಿದ ಆ ಸ್ಯಾಂಡಲ್ವುಡ್ ನಟಿಯ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿ ಪಾಪ್ ಗಾಯಕಿ ಮಡೋನಾ (Madonna) ಅವರು ಕಿಸ್ ಮಾಡಿ ಸುದ್ದಿ ಆಗಿದ್ದಾರೆ. ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಆಗಸ್ಟ್ 16ರಂದು 64ನೇ ವಸಂತಕ್ಕೆ ಕಾಲಿಟ್ಟಿರುವ ಅವರು ಅದ್ದೂರಿಯಾಗಿ ಬರ್ತ್ಡೇ (Madonna Birthday) ಪಾರ್ಟಿ ಮಾಡಿಕೊಂಡರು. ಈ ವೇಳೆ ಕಳೆದ ಖುಷಿಯ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿವೆ. ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಗೆಳೆತಿಯರಿಬ್ಬರಿಗೆ ಮಡೋನಾ ಅವರು ಫ್ರೆಂಚ್ ಕಿಸ್ (Madonna Kiss) ನೀಡಿರುವ ದೃಶ್ಯ ಎಲ್ಲರ ಕಣ್ಣು ಕುಕ್ಕುತ್ತಿದೆ.
ಪಾಪ್ ಸಂಗೀತ ಲೋಕದಲ್ಲಿ ಗಾಯಕಿ ಮಡೋನಾ ಅವರು ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ‘ಪಾಪ್ ಲೋಕದ ರಾಣಿ’ ಎಂದೇ ಅವರನ್ನು ಕರೆಯಲಾಗುತ್ತದೆ. ಅವರ ವೃತ್ತಿಜೀವದನಲ್ಲಿ ಅನೇಕ ವಿವಾದಗಳು ಕೂಡ ಆಗಿದ್ದುಂಟು. ಅವುಗಳಿಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. 2003ರಲ್ಲಿ ವೇದಿಕೆ ಮೇಲೆ ಪರ್ಫಾರ್ಮೆನ್ಸ್ ನೀಡುವಾಗ ಮತ್ತೋರ್ವ ಗಾಯಕಿಗೆ ಕಿಸ್ ಮಾಡುವ ಮೂಲಕ ಮಡೋನಾ ಸೆನ್ಸೇಷನ್ ಸೃಷ್ಟಿಸಿದ್ದರು. ಈಗ ಅದೇ ರೀತಿ ಮತ್ತೊಮ್ಮೆ ಕಿಸ್ ಮಾಡಿದ್ದಾರೆ.
ಆಪ್ತರ ಜೊತೆ ಮಡೋನಾ ಬರ್ತ್ಡೇ ಪಾರ್ಟಿ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಡಗರಕ್ಕಾಗಿ ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ ತೊಟ್ಟಿರುವ ಮಡೋನಾ ಅವರು ವಿವಿಧ ಬಗೆಯ ಆಭರಣ ಧರಿಸಿ ಮಿಂಚಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ಪಾರ್ಟಿ ಮಾಡಿದ್ದಾರೆ. ಕಾರಿನೊಳಗೆ ಹೋಗುವುದಕ್ಕೂ ಮುನ್ನ ಖುಷಿಖುಷಿಯಿಂದ ಹಾಡಿತ್ತಾ ಕುಣಿದಿದ್ದಾರೆ. ಬಳಿಕ ಸ್ನೇಹಿತರ ಜೊತೆಗೂಡಿ, ಕಾರಿನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಚಿಯರ್ಸ್ ಎಂದಿರುವ ಮಡೋನಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಪಕ್ಕ ಕುಳಿತ ಇಬ್ಬರು ಗೆಳತಿಯರಿಗೆ ಅವರು ಫ್ರೆಂಚ್ ಕಿಸ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸ್ವತಃ ಮಡೋನಾ ಅವರೇ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ 30 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. ಎರಡು ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 11 ಸಾವಿರಕ್ಕೂ ಹೆಚ್ಚು ಕಮೆಂಟ್ಗಳು ಬಂದಿವೆ. ನೆಚ್ಚಿನ ಗಾಯಕಿಗೆ ಅಭಿಮಾನಿಗಳ ಬರ್ತ್ಡೇ ವಿಶ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 18.8 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.