ಟಾಮ್ ಹಾಲೆಂಡ್ ((Tom Holland)) ನಟನೆಯ ‘ಸ್ಪೈಡರ್ ಮ್ಯಾನ್’ (Spider Man) ಸರಣಿಯ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (Spider-Man: No Way Home) ಡಿಸೆಂಬರ್ 16ರಂದು ಬಿಡುಗಡೆಯಾಗಿ ಬಾಕ್ಸ್ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಈಗಾಗಲೇ ಭಾರತದಲ್ಲಿ 213 ಕೋಟಿ ರೂಪಾಯಿ ಗಳಿಸಿದೆ. ಕೊವಿಡ್ ಮಧ್ಯೆಯೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ವಿಶ್ವಮಟ್ಟದಲ್ಲಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಚಿತ್ರ ಈವರೆಗೆ 12,608 ಕೋಟಿ ರೂಪಾಯಿ ಗಳಿಸಿದೆ. ವಿಶ್ವಮಟ್ಟದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಆರನೇ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.
‘ಜ್ಯುರಾಸಿಕ್ ವರ್ಲ್ಡ್ (12,459 ಕೋಟಿ ರೂಪಾಯಿ), ‘ದಿ ಲೈನ್ ಕಿಂಗ್’ (12,385 ಕೋಟಿ ರೂಪಾಯಿ) ಸಿನಿಮಾಗಳ ಕಲೆಕ್ಷನ್ಅನ್ನು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಈ ವಾರ ಹಿಂದಿಕ್ಕಿದೆ. ಈವರೆಗೆ ಈ ಸಿನಿಮಾ 12,608 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಕೊವಿಡ್ ಹೆಚ್ಚುತ್ತಿರುವ ಕಾರಣ ಯಾರೂ ಅಷ್ಟಾಗಿ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮ ಜಾರಿಗೆ ಬಂದಿದೆ. ಈ ಕಾರಣಕ್ಕೆ ಈ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಇನ್ನೂ ಒಂದು ತಿಂಗಳಕಾಲ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಚಿತ್ರ ನೋಡೋಕೆ ಈಗಲೂ ಜನರು ಬರುತ್ತಿದ್ದಾರೆ. ಹೀಗಾಗಿ, ಮಲ್ಟಿಪ್ಲೆಕ್ಸ್ಗಳು ಈ ಸಿನಿಮಾವನ್ನು ಮುಂದಿನ ಒಂದು ತಿಂಗಳು ಪ್ರದರ್ಶನ ಮಾಡಲು ನಿರ್ಧರಿಸಿವೆ. ಆ ಬಳಿಕವೇ ಚಿತ್ರ ಒಟಿಟಿಗೆ ಕಾಲಿಡಲಿದೆ. ಹೀಗಾಗಿ, ಈ ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.
ಗಳಿಕೆ ವಿಚಾರದಲ್ಲಿ ‘ಅವತಾರ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ 21,240 ಕೋಟಿ ರೂಪಾಯಿ ಗಳಿಸಿತ್ತು. ‘ಅವೇಂಜರ್ಸ್: ಎಂಡ್ಗೇಮ್’ 20,870 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿದೆ. 1997ರಲ್ಲಿ ತೆರೆಗೆ ಬಂದ ‘ಟೈಟಾನಿಕ್’ ಚಿತ್ರದ ದಾಖಲೆಯನ್ನು ಮುರಿಯೋಕೆ ಅನೇಕ ಚಿತ್ರಗಳ ಬಳಿ ಈಗಲೂ ಸಾಧ್ಯವಾಗಿಲ್ಲ. ಈ ಚಿತ್ರ ಮೂರನೇ ಸ್ಥಾನದಲ್ಲಿದೆ. ಈ ಸಿನಿಮಾ 16,315 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಾಲ್ಕನೇ ಸ್ಥಾನದಲ್ಲಿರುವ ‘ಸ್ಟಾರ್ ವಾರ್ಸ್: ದಿ ಫೋರ್ಸ್ ಅವೇಕನ್ಸ್’ 15,427 ಕೋಟಿ ರೂಪಾಯಿ ಗಳಿಸಿದೆ. ‘ಅವೆಂಜರ್ಸ್: ಇನ್ಫಿನಿಟಿ ವಾರ್’ 15,280 ಕೋಟಿ ರೂಪಾಯಿ ಗಳಿಸಿದೆ. ಇವುಗಳ ದಾಖಲೆಯನ್ನು ಮುರಿಯೋದು ಈಗಿನ ಪರಿಸ್ಥಿತಿಯಲ್ಲಿ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ಗೆ ಕಷ್ಟವಾಗಬಹುದು.
ಇದನ್ನೂ ಓದಿ: Pushpa The Rise: ರಶ್ಮಿಕಾರಂತೆ ಹೆಜ್ಜೆಹಾಕಿ ಎಲ್ಲರನ್ನೂ ದಂಗಾಗಿಸಿದ ಸ್ಪೈಡರ್ಮ್ಯಾನ್! ಇಲ್ಲಿದೆ ವಿಡಿಯೋ ಸಾಕ್ಷಿ