‘ಕೆಜಿಎಫ್ 2’ ತೆರೆಕಂಡ ಬಳಿಕ ವಿಜಯ್ ಕಿರಗಂದೂರು (Vijay Kiragandur) ಒಡೆತನದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಪರ ಭಾಷೆಯಲ್ಲೂ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಹೊಂಬಾಳೆ ಫಿಲ್ಮ್ಸ್ ಬ್ಯುಸಿ ಆಗಿದೆ. ಈಗ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಜತೆ ಹೊಸ ಸಿನಿಮಾ ಘೋಷಿಸುವ ಮೂಲಕ ಈ ನಿರ್ಮಾಣ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಚಿತ್ರಕ್ಕೆ ‘ಟೈಸನ್’ (Tyson) ಎನ್ನುವ ಶೀರ್ಷಿಕೆ ಇಡಲಾಗಿದೆ.
‘ಟೈಸನ್’ ಚಿತ್ರಕ್ಕೆ ಪೃಥ್ವಿರಾಜ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ಅವರು ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಇದು ಐಎಎಸ್ ಅಧಿಕಾರಿಯ ಕಥೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹೀಗಾಗಿ, ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ಸಿದ್ಧಗೊಳ್ಳಲಿದೆ.
Happy to announce our next venture #Tyson with @PrithviOfficial.
Get ready to be astonished by our brave defender. Time to unshackle the chains and resuscitate the system!@VKiragandur @hombalefilms #MuraliGopy@TysonOffl @HombaleGroup #HombaleFilms pic.twitter.com/VO7g2chMi4
— Hombale Films (@hombalefilms) June 10, 2022
‘ಟೈಸನ್’ ಪೋಸ್ಟರ್ನಲ್ಲಿ ವ್ಯಕ್ತಿಯೋರ್ವ ಬೋರ್ಡ್ಮೇಲೆ ಹೆಸರನ್ನು ಬರೆಯುತ್ತಿದ್ದಾನೆ. ರಂಜನ್ ಘೋಷ್ ಎಂಬ ಐಎಎಸ್ ಅಧಿಕಾರಿ 2022-2023ವರೆಗೆ ಸೇವೆ ಸಲ್ಲಿಸಿರುವಾಗಿ ಬರೆಯಲಾಗಿದೆ. ಹೀಗಾಗಿ, ಸಿನಿಮಾ 2023 ಅಥವಾ 2024ರಲ್ಲಿ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
– Hombale Films (@HombaleFilms) 10 June 2022
ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಈ ಸಿನಿಮಾ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ದುಡ್ಡಿನ ಹೊಳೆಯೇ ಹರಿದಿದೆ. ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡಲು ಬಲ ಸಿಕ್ಕಂತೆ ಆಗಿದೆ. ಹೀಗಾಗಿ, ಹೊಸಹೊಸ ಪ್ರಾಜೆಕ್ಟ್ಗಳನ್ನು ಘೋಷಣೆ ಮಾಡಲಾಗುತ್ತಿದೆ.
‘ನಿನ್ನಿಂದಲೇ’, ‘ಮಾಸ್ಟರ್ಪೀಸ್’, ‘ರಾಜಕುಮಾರ’, ‘ಕೆಜಿಎಫ್: ಚಾಪ್ಟರ್ 1’, ‘ಯುವರತ್ನ’, ‘ಕೆಜಿಎಫ್: ಚಾಪ್ಟರ್ 2’ ಚಿತ್ರಗಳನ್ನು ‘ಹೊಂಬಾಳೆ ಫಿಲ್ಮ್ಸ್’ ಇಲ್ಲಿಯವರೆಗೆ ನಿರ್ಮಾಣ ಮಾಡಿದೆ. ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’, ‘ಸಲಾರ್’, ‘ಬಘೀರ’, ‘ರಿಚರ್ಡ್ ಆ್ಯಂಟನಿ’ ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಈಗ ಇದಕ್ಕೆ ಹೊಸ ಸೇರ್ಪಡೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Fri, 10 June 22