AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲಿದೆ ಕನ್ನಡದ ನಿರ್ಮಾಣ ಸಂಸ್ಥೆ

ಕೆಜಿಎಫ್, ಕಾಂತಾರ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಮೂಲಕ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಜಯ್ ಕಿರಗಂದೂರು ಅವರ ಈ ಸಂಸ್ಥೆ, ಮೊದಲ ಬಾರಿಗೆ ವಿದೇಶಗಳಲ್ಲಿ ಸಿನಿಮಾ ವಿತರಣೆ ಮಾಡುತ್ತಿದ್ದು, ಇದು ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲು ಹೊಸ ಮೈಲಿಗಲ್ಲು. ಎ.ಆರ್. ರೆಹಮಾನ್ ಸಂಗೀತವಿರುವ 'ಪೆದ್ದಿ' ಜೂನ್ 4ರಂದು ತೆರೆಕಾಣಲಿದೆ.

‘ಪೆದ್ದಿ’ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲಿದೆ ಕನ್ನಡದ ನಿರ್ಮಾಣ ಸಂಸ್ಥೆ
ಪೆದ್ದಿ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: May 14, 2026 | 1:22 PM

Share

ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಖ್ಯಾತಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಇದೆ. ಈ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರೋ ವಿಷಯ ರಿವೀಲ್ ಆಗಿತ್ತು. ವಿದೇಶದಲ್ಲಿ ಸಿನಿಮಾ ಹಂಚಿಕೆ ಮಾಡಲು ಹೊಂಬಾಳೆ ಮುಂದಾಗಿತ್ತು. ಈಗ ರಾಮ್ ಚರಣ್ ನಟನೆಯ’ಪೆದ್ದಿ’ ಚಿತ್ರವನ್ನು ಹೊಂಬಾಳೆ ವಿದೇಶದಲ್ಲಿ ಹಂಚಿಕೆ ಮಾಡುತ್ತಿದೆ. ವಿದೇಶಿ ನೆಲದಲ್ಲಿ ಈ ಸಂಸ್ಥೆಯ ಮೊದಲ ಡಿಸ್ಟ್ರಿಬ್ಯೂಷನ್ ಇದಾಗಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋದ ಸಂಸ್ಥೆ.‘ಕೆಜಿಎಫ್’ ಹಾಗೂ ‘ಕಾಂತಾರ’ ಫ್ರಾಂಚೈಸಿ ಮೂಲಕ ಸಿನಿಮಾ ಮಾಡಿ ಸ್ಯಾಂಡಲ್​​ವುಡ್ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿತು. ಕರಾವಳಿಯ ಮಣ್ಣಿನ ಸೊಗಡಿನ ಕತೆಯನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿತು. ಈಗ ‘ಪೆದ್ದಿ’ ಸಿನಿಮಾ ಮೂಲಕ ಮತ್ತೊಂದು ಹೊಸ ಅಧ್ಯಾಯ ಬರೆಯಲು ಅಣಿಯಾಗಿದೆ.

ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಓವರ್‌ಸೀಸ್ ಹಂಚಿಕೆಯ ಜವಾಬ್ದಾರಿಯನ್ನು ಹೊಂಬಾಳೆ ಹೊತ್ತುಕೊಂಡಿದೆ. ಇದನ್ನು ಈ ಸಂಸ್ಥೆ ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಮೂಡಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿರುವುದು ವಿಶೇಷ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಬುಚ್ಚಿ ಬಾಬು ಅವರ ರಾ ಆ್ಯಕ್ಷನ್ ಕಥೆಯ ಮೇಲಿರುವ ನಿರೀಕ್ಷೆಗಳು ಹೆಚ್ಚಿಸಿದೆ. ಕನ್ನಡದ ಶಿವರಾಜ್​​ಕುಮಾರ್ ಪಾತ್ರ ಕೂಡ ಗಮನ ಸೆಳೆಯುವ ನಿರೀಕ್ಷೆ ಇದೆ. ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ವಿದೇಶಗಳಲ್ಲಿ ಈ ಚಿತ್ರವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಈ ಹಂಚಿಕೆ ಯಶಸ್ಸು ಕಂಡರೆ ನಿರ್ಮಾಣ ಸಂಸ್ಥೆಯನ್ನು ಹುಡುಕಿಕೊಂಡು ಮತ್ತಷ್ಟು ಬಿಗ್ ಬಜೆಟ್ ಸಿನಿಮಾಗಳು ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ