
ಕನ್ನಡ ಚಿತ್ರರಂಗದ ಜೊತೆ ಭಾರತೀಯ ಸಿನಿಮಾ ರಂಗದಲ್ಲೂ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films)ಈಗ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಸದ್ಯ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಸಂಸ್ಥೆ, ಈಗ ಕಾಲಿವುಡ್ ಸ್ಟಾರ್ ನಟ ಸೂರ್ಯ ಜೊತೆ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ.
‘ದಿ ನೆಕ್ಸ್ಟ್ ಚಾಪ್ಟರ್’ (#SuriyaXHombale) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ಕಳೆದ ಮೂರು ದಶಕಗಳಿಂದ ಸತ್ಯಕ್ಕೆ ಹತ್ತಿರವಾದ ಪಾತ್ರಗಳು, ನೈಜ ಬದುಕಿನ ತೂಕವನ್ನು ಹೊತ್ತ ಕ್ಯಾರೆಕ್ಟರ್‌ಗಳು ಹಾಗೂ ಅದ್ಭುತ ಸಾಹಸಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಈ ತಲೆಮಾರಿನ ಅತ್ಯಂತ ನಿರ್ಭೀತ ನಟ ಸೂರ್ಯ ಅವರನ್ನು ನಮ್ಮ ಸಂಸ್ಥೆಗೆ ಹೆಮ್ಮೆಯಿಂದ ಸ್ವಾಗತಿಸುತ್ತಿದ್ದೇವೆ’ ಎಂದು ಹೊಂಬಾಳೆ ಬರೆದುಕೊಂಡಿದೆ.
ಇದನ್ನೂ ಓದಿ: ಜೂ.ಎನ್ಟಿಆರ್ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?
ಈ ಬಿಗ್ ಬಜೆಟ್ ಸಿನಿಮಾಗೆ ಯಾರು ನಿರ್ದೇಶನ ಮಾಡಲಿದ್ದಾರೆ ಮತ್ತು ಯಾರೆಲ್ಲಾ ತಂತ್ರಜ್ಞರು ಇರಲಿದ್ದಾರೆ ಎಂಬ ಕುತೂಹಲಕ್ಕೆ ಈ ಟ್ವೀಟ್‌ನಲ್ಲೇ ಸುಳಿವು ಸಿಕ್ಕಿದೆ.
The next chapter… #SuriyaXHombale
He built it.
Frame by frame. Film by film. Fight by fight.
Roles that bled truth.
Characters that carried the weight of real lives.
A journey defined by courage, conviction, and craft.
Three decades of truth on screen.
Countless hearts… pic.twitter.com/HoZOgQRbC7
— Hombale Films (@hombalefilms) June 29, 2026
ವಿಭಿನ್ನ ಭಾಷೆಗಳಲ್ಲಿ ವೈವಿಧ್ಯಮಯ ಸಿನಿಮಾಗಳನ್ನು ನೀಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ಸೂರ್ಯ ಜೊತೆ ಕೈ ಜೋಡಿಸಿದ್ದು ಖುಷಿ ಮೈಡಿಸಿದೆ. ಇವರ ಈ ಹೊಸ ಕಾಂಬಿನೇಷನ್ ಸಿನಿರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಸೃಷ್ಟಿಸಿದ್ದು, ಸಿನಿಮಾ ಪ್ರೇಕ್ಷಕರು ಅಧಿಕೃತ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.