AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಕೃಷ್ಣನ ಪಾತ್ರದಲ್ಲಿ ವಿಜಯ್ ದೇವರಕೊಂಡ: ಗುಜರಾತಿ ಬ್ಲಾಕ್‌ಬಸ್ಟರ್ ‘ಲಾಲೋ’ ತೆಲುಗು ರಿಮೇಕ್

ಗುಜರಾತಿ ಚಿತ್ರರಂಗದ ಸಾರ್ವಕಾಲಿಕ ದಾಖಲೆಯ ಬ್ಲಾಕ್‌ಬಸ್ಟರ್ 'ಲಾಲೋ' ತೆಲುಗಿಗೆ ರಿಮೇಕ್ ಆಗುತ್ತಿದ್ದು, ನಟ ವಿಜಯ್ ದೇವರಕೊಂಡ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕ ದಿಲ್ ರಾಜು ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ರಾಮ್ ಚರಣ್ ಬದಲಿಗೆ ವಿಜಯ್ ಅಂತಿಮಗೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಶ್ರೀಕೃಷ್ಣನ ಪಾತ್ರದಲ್ಲಿ ವಿಜಯ್ ದೇವರಕೊಂಡ: ಗುಜರಾತಿ ಬ್ಲಾಕ್‌ಬಸ್ಟರ್ 'ಲಾಲೋ' ತೆಲುಗು ರಿಮೇಕ್
ವಿಜಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 04, 2026 | 7:59 AM

Share

ಗುಜರಾತಿ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ‘ಲಾಲೋ’ ಸಿನಿಮಾ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಮೂಡಿಬಂದು ಬರೋಬ್ಬರಿ 100 ಕೋಟಿಗೂ ಅಧಿಕ ಗಳಿಕೆ ಕಂಡ ಈ ಭಕ್ತಿ ಪ್ರಧಾನ ಚಿತ್ರದ ತೆಲುಗು ಆವೃತ್ತಿಯಲ್ಲಿ ನಟ ವಿಜಯ್ ದೇವರಕೊಂಡ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಈ ಪಾತ್ರಕ್ಕೆ ರಾಮ್ ಚರಣ್ ಹೆಸರು ಕೇಳಿಬಂದಿತ್ತು.

ಆರಂಭದಲ್ಲಿ ರಾಮ್ ಚರಣ್ ಶ್ರೀಕೃಷ್ಣನಾಗಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಬಾಲಿವುಡ್ ಹಂಗಾಮ ವರದಿಯ ಪ್ರಕಾರ ವಿಜಯ್ ದೇವರಕೊಂಡ ಈ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಆಟೋ ಚಾಲಕನೊಬ್ಬ ಕಳ್ಳತನ ಮಾಡಲು ಹೋಗಿ ನಿರ್ಜನ ಬಂಗಲೆಯಲ್ಲಿ ಸಿಲುಕಿಕೊಳ್ಳುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಆಪತ್ತಿನಲ್ಲಿರುವಾಗ ಆತನಿಗೆ ಸಹಾಯ ಮಾಡಲು ಬರುವ ಅಪರಿಚಿತ ವ್ಯಕ್ತಿಯೇ ಕೊನೆಗೆ ಶ್ರೀಕೃಷ್ಣ ಎಂದು ತಿಳಿಯುತ್ತದೆ. ಈ ವಿಭಿನ್ನ ಹಾಗೂ ಭಾವನಾತ್ಮಕ ಕಥಾವಸ್ತುವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಂಕಿತ್ ಸಖಿಯಾ ನಿರ್ದೇಶಿಸಿದ್ದ ಮೂಲ ಗುಜರಾತಿ ಚಿತ್ರದಲ್ಲಿ ಕರಣ್ ಜೋಶಿ ಮತ್ತು ಶ್ರುಹದ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಯಾವುದೇ ದೊಡ್ಡ ತಾರಾಗಣವಿಲ್ಲದೆ ಬಿಡುಗಡೆಯಾಗಿದ್ದ ಈ ಸಿನಿಮಾ ಜನಪ್ರಿಯತೆಯಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈಗ ಅದೇ ಮ್ಯಾಜಿಕ್ ಅನ್ನು ತೆಲುಗಿನಲ್ಲೂ ಮರುಸೃಷ್ಟಿಸಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: ‘ಬ್ರೇಕಪ್ ಆಗಿತ್ತು, ಕುಡಿಯುತ್ತಿದ್ದೆ’ ಖಾಸಗಿ ಜೀವನದ ಬಗ್ಗೆ ವಿಜಯ್ ದೇವರಕೊಂಡ ಮಾತು

ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿರುವುದು ಅತ್ಯಂತ ವಿಶೇಷ ಹಾಗೂ ವಿಭಿನ್ನ ಪ್ರಯತ್ನವಾಗಿದೆ. ಸಾಲು ಸಾಲು ಆಕ್ಷನ್ ಸಿನಿಮಾಗಳಲ್ಲಿ ನಿರತರಾಗಿರುವ ವಿಜಯ್, ಈ ಭಕ್ತಿಪ್ರಧಾನ ಚಿತ್ರದ ಮೂಲಕ ಅಭಿಮಾನಿಗಳಿಗೆ ಹೊಸ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಈ ಸಿನಿಮಾ ತೆಲುಗು ಚಿತ್ರರಂಗದಲ್ಲೂ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 am, Fri, 4 September 26

Follow Us