AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ ಈಗ ಕರ್ನಾಟಕ ಹೈಕೋರ್ಟ್​ ಜಡ್ಜ್​; 555 ಪ್ರಕರಣ ಆಲಿಕೆ

ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆ ವಿಶಿಷ್ಟ ಪಯಣ ಬೆಳೆಸಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಒಂದೇ ದಿನ 550ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಹೂಮಳೆ' ಸಿನಿಮಾದಲ್ಲಿ ನಟಿಸಿದ್ದ ಇವರು, ಈಗ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥದತ್ತ ದಾಪುಗಾಲು ಇಡುತ್ತಿದ್ದಾರೆ.

ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ ಈಗ ಕರ್ನಾಟಕ ಹೈಕೋರ್ಟ್​ ಜಡ್ಜ್​; 555 ಪ್ರಕರಣ ಆಲಿಕೆ
ನಾಗ ಪ್ರಸನ್ನ
ರಾಜೇಶ್ ದುಗ್ಗುಮನೆ
|

Updated on: Sep 04, 2026 | 6:59 AM

Share

ಮುಖ್ಯಾಂಶಗಳು

  • ಹೂಮಳೆ ಚಿತ್ರದ ನಟ ಈಗ ಹೈಕೋರ್ಟ್ ಜಡ್ಜ್
  • ಒಂದೇ ದಿನ 550 ಕೇಸ್ ವಿಚಾರಣೆ
  • ನ್ಯಾಯಮೂರ್ತಿ ನಾಗಪ್ರಸನ್ನ ದಾಖಲೆ

ಚಿತ್ರರಂಗವು ಎಲ್ಲಾ ವೃತ್ತಿಯವರನ್ನು ಆಕರ್ಷಿಸುತ್ತದೆ. ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದವರು ಸಿನಿಮಾದಲ್ಲಿ ನಟಿಸಿಬಿಡೋಣ ಎಂದು ಪ್ರಯತ್ನಿಸುವುದು ಸಹಜ. ಅದೇ ರೀತಿ ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಟಿಸಿ ಗಮನ ಸೆಳೆದಿದ್ದ ವ್ಯಕ್ತಿಯೊಬ್ಬರು ಈಗ ಕರ್ನಾಟಕ ಹೈಕೋರ್ಟ್ ಜಡ್ಜ್ ಆಗಿದ್ದಾರೆ. ಇತ್ತೀಚೆಗೆ ಅವರು 550ಕ್ಕೂ ಹೆಚ್ಚು ಪ್ರಕರಣವನ್ನು ಆಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಕೋರ್ಟ್​​ನಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಮಾಡೋದು ಅವರು ಗುರಿ. ಅಷ್ಟಕ್ಕೂ ಯಾರವರು? ನ್ಯಾಯಮೂರ್ತಿ ನಾಗಪ್ರಸನ್ನ.

ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮ್ಮ ವೃತ್ತಿ ಆರಂಭಿಸಿದ್ದು ವಕೀಲರಾಗಿ. ಈ ಸಂದರ್ಭದಲ್ಲಿಯೇ ಅವರಿಗೆ ಸಿನಿಮಾ ಆಫರ್ ಬಂದಿತ್ತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಹೂಮಳೆ’ ಸಿನಿಮಾದಲ್ಲಿ ಪ್ರಸನ್ನ ಅವರು ನಟಿಸಿದ್ದರು. ಕನ್ನಡದ ಹೆಸರಾಂತ ಕಲಾವಿದ ರಮೇಶ್ ಅರವಿಂದ್ ಜೊತೆ ಅವರು ತೆರೆಹಂಚಿಕೊಂಡಿದ್ದರು ಅನ್ನೋದು ವಿಶೇಷ. 1998ರಲ್ಲಿ ಈ ಸಿನಿಮಾ ರಿಲೀಸ್ ಆಗಿ ಗಮನ ಸೆಳೆಯಿತು.

ನ್ಯಾಯಮೂರ್ತಿ ಪ್ರಸನ್ನ ಅವರು ಅಪರೂಪದ ಸಾಧನೆ ಮಾಡುತ್ತಿದ್ದಂತೆ ಅವರ ನಟಿಸಿದ್ದ ಸಿನಿಮಾದ ಕ್ಲಿಪ್​ಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಸುರದ್ರೂಪಿ ಆಗಿರೋ ಅವರು ಹೀರೋ ಮೆಟೀರಿಯಲ್ ಆಗಿದ್ದರು’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ ಕಲಾಪದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ನ್ಯಾಯಮೂರ್ತಿ ನಾಗಪ್ರಸನ್ನ

ಪ್ರಸನ್ನ ಅವರು ಮಾಡಿದ ಸಾಧನೆ

ಸೆಪ್ಟೆಂಬರ್ 2ರಂದು ಪ್ರಸನ್ನ ಅವರು ಕರ್ನಾಟಕ ಹೈಕೋರ್ಟ್​​ನಲ್ಲಿ ಒಟ್ಟೂ 550 ಪ್ರಕರಣವನ್ನು ಆಲಿಸಿದ್ದಾರೆ. ತುರ್ತು ವಿಚಾರಣೆ ಕೋರಿದ್ದ 250 ಪ್ರಕರಣಗಳನ್ನು ಕೇವಲ ಎರಡೂವರೆ ಗಂಟೆಯಲ್ಲಿ ವಿಚಾರಣೆ ನಡೆಸಿದ್ದಾರೆ. 2024ರ ನವೆಂಬರ್ ವೇಳೆಗೆ ಅವರು ಹೈಕೋರ್ಟ್‌ ಜಡ್ಜ್ ಆಗಿ ಐದು ವರ್ಷ ಪೂರೈಸಿದ್ದರು. ಐದು ವರ್ಷ ಪೂರೈಸುವ ಸಂದರ್ಭದಲ್ಲಿ 16,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರು. 2025ರ ನವೆಂಬರ್ ವೇಳೆಗೆ ಆ ಸಂಖ್ಯೆ 21,924 ಪ್ರಕರಣಗಳಿಗೆ ತಲುಪಿತ್ತು ಎಂದು ವರದಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More