AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹೈಕೋರ್ಟ್​​ ಕಲಾಪದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ನ್ಯಾಯಮೂರ್ತಿ ನಾಗಪ್ರಸನ್ನ

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮ ವೇಗವಾದ ಹಾಗೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವಿಲೇವಾರಿ ಮತ್ತು ಹಲವು ಮಹತ್ವದ ತೀರ್ಪುಗಳಿಂದ ಗಮನ ಸೆಳೆದಿದ್ದಾರೆ. ಹೌದು...ಇದೀಗ ತುರ್ತು ವಿಚಾರಣೆಗೆ ಕೋರಿದ್ದ 250 ಅರ್ಜಿಗಳನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸುವ ಮೂಲಕ ನಾಗಪ್ರಸನ್ನ ಅವರು ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಕರ್ನಾಟಕ ಹೈಕೋರ್ಟ್​​ ಕಲಾಪದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ನ್ಯಾಯಮೂರ್ತಿ ನಾಗಪ್ರಸನ್ನ
Justice M Nagaprasanna
ರಮೇಶ್​ ಎಮ್​.
| Edited By: |

Updated on: Sep 02, 2026 | 11:33 PM

Share

ಬೆಂಗಳೂರು, (ಸೆಪ್ಟೆಂಬರ್ 02):ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಹೈಕೋರ್ಟ್ ಪೀಠ ಇಂದು (ಸೆಪ್ಟೆಂಬರ್ 02) ರಾತ್ರಿ 8.5 ಗಂಟೆವರೆಗೂ ಅರ್ಜಿ ವಿಚಾರಣೆಗಳನ್ನು ನಡೆಸಿ ಗಮನಸೆಳೆದಿದ್ದು, ಇಂದು ಒಂದೇ ದಿನದಲ್ಲಿ ಬರೋಬ್ಬರಿ ಬರೋಬ್ಬರಿ 555 ಪ್ರಕಣಗಳನ್ನು ವಿಚಾರಣೆ ಮಾಡಿದೆ. ಅಲ್ಲದೇ ತುರ್ತು ವಿಚಾರಣೆಗೆ ಕೋರಿದ್ದ 250 ಅರ್ಜಿಗಳನ್ನು ಕೇವಲ 2.5 ಗಂಟೆಗಳ ಅವಧಿಯಲ್ಲಿ ವಿಚಾರಣೆ ನಡೆಸಿದೆ. ಈ ಮೂಲಕ ನಾಗಪ್ರಸನ್ನ ಅವರು ಹೈಕೋರ್ಟ್ ಕಲಾಪದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಬೆಳಗ್ಗೆ ಇಂದಿನ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋಲಾರದ 240ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪದ ಪಟ್ಟಿಗೆ ಸೇರಿಸಲು ಆದೇಶಿಸಿದ್ದರು. ಬೆಳಗಿನ ಕಲಾಪದಲ್ಲಿ ಎಂದಿನಿಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.5ಕ್ಕೆ ಮುಗಿಸಿದ್ದಾರೆ. ಇನ್ನು ಒಂದು ದಿನ ಕಲಾಪದ ಅವಧಿಯಲ್ಲಿ ಒಟ್ಟು 555 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳನ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು.

ಇದನ್ನೂ ಓದಿ: ಯೂನಿಫಾರ್ಮ್ ನಲ್ಲಿದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು: ಪೊಲೀಸರಿಗೆ ಹೈಕೋರ್ಟ್ ಫುಲ್ ಕ್ಲಾಸ್

ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ರಿಮಿನಲ್ ಪ್ರಕರಣಗಳು, ಜಾಮೀನು ಅರ್ಜಿಗಳು, ಸೇವಾ ವಿಷಯಗಳು ಮತ್ತು ವಿವಿಧ ಸಾಂವಿಧಾನಿಕ/ಕಾನೂನು ವಿಚಾರಗಳಲ್ಲಿ ತೀರ್ಪುಗಳನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಸಾವಿರಾರು ತೀರ್ಪುಗಳು ದಾಖಲಾಗಿವೆ. ಅವರ ಕಾರ್ಯನಿರ್ವಹಣೆಯ ವೇಗವೂ ಗಮನಾರ್ಹವಾಗಿದೆ. 2024ರ ನವೆಂಬರ್ ವೇಳೆಗೆ ಅವರು ಹೈಕೋರ್ಟ್‌ನಲ್ಲಿ ಐದು ವರ್ಷ ಪೂರೈಸುವ ಸಂದರ್ಭದಲ್ಲಿ 16,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರು. 2025ರ ನವೆಂಬರ್ ವೇಳೆಗೆ ಆ ಸಂಖ್ಯೆ 21,924 ಪ್ರಕರಣಗಳಿಗೆ ತಲುಪಿತ್ತು ಎಂದು ವರದಿಯಾಗಿದೆ. ಅವುಗಳಲ್ಲಿ ಸುಮಾರು 985 ತೀರ್ಪುಗಳು reported judgments ಆಗಿವೆ.

2023ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿ ಗಮನ ಸೆಳೆದಿದ್ದರು. ಅವುಗಳಲ್ಲಿ ಬೆಂಗಳೂರು ಮತ್ತು ಧಾರವಾಡ ಪೀಠಗಳಲ್ಲಿ ವಿಚಾರಣೆ ನಡೆಸಿದ್ದ ಪ್ರಕರಣಗಳ ತೀರ್ಪುಗಳೂ ಸೇರಿದ್ದವು. ಅವರ ಹಲವು ತೀರ್ಪುಗಳಲ್ಲಿ ಕಾನೂನು ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ನಾಗರಿಕರ ಹಕ್ಕುಗಳು ಮತ್ತು ತನಿಖಾ ಸಂಸ್ಥೆಗಳ ಜವಾಬ್ದಾರಿತನದ ಬಗ್ಗೆ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಉದಾಹರಣೆಗೆ, ಕಾನೂನುಬಾಹಿರ ಬಂಧನ/ಪೊಲೀಸ್ ಕ್ರಮಗಳ ಬಗ್ಗೆ ಅವರು ನ್ಯಾಯಾಲಯದಲ್ಲಿ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಸಂದರ್ಭಗಳಿವೆ.

ಒಟ್ಟಾರೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕರ್ನಾಟಕ ಹೈಕೋರ್ಟ್‌ನ ಪ್ರಮುಖ ಹಾಗೂ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರು. ಅವರ ವಿಚಾರಣೆಯ ವೇಗ, ತೀರ್ಪುಗಳ ಸಂಖ್ಯೆ ಮತ್ತು ವಿವಿಧ ಕಾನೂನು ಕ್ಷೇತ್ರಗಳಲ್ಲಿ ನೀಡಿರುವ ತೀರ್ಪುಗಳು ಗಮನಸೆಳೆದಿವೆ. ಇನ್ನು ಅವರ ಕೆಲ ಪ್ರಕರಣ ವಿಚಾರಣೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ