AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ರೇಕಪ್ ಆಗಿತ್ತು, ಕುಡಿಯುತ್ತಿದ್ದೆ’ ಖಾಸಗಿ ಜೀವನದ ಬಗ್ಗೆ ವಿಜಯ್ ದೇವರಕೊಂಡ ಮಾತು

Vijay Deverakonda life: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮದುವೆಯಾದರು. ವಿಜಯ್ ದೇವರಕೊಂಡ ಸಾಮಾನ್ಯ ಕುಟುಂಬದಿಂ ಬಂದು ಸ್ಟಾರ್ ಆಗಿ ನೆಲೆ ನಿಂತವರು. ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನದ ಕೆಲ ಘಟನೆಗಳ್ನು ಮೆಲುಕು ಹಾಕಿದ್ದಾರೆ. ಪ್ರೀತಿ, ಬ್ರೇಕಪ್, ಕುಡಿತ, ಮದುವೆಗಳ ಬಗ್ಗೆ ಅವರು ಮಾತನಾಡಿದ್ದಾರೆ.

‘ಬ್ರೇಕಪ್ ಆಗಿತ್ತು, ಕುಡಿಯುತ್ತಿದ್ದೆ’ ಖಾಸಗಿ ಜೀವನದ ಬಗ್ಗೆ ವಿಜಯ್ ದೇವರಕೊಂಡ ಮಾತು
Vijay Deverakonda
ಮಂಜುನಾಥ ಸಿ.
|

Updated on: Sep 01, 2026 | 11:10 AM

Share

ಮುಖ್ಯಾಂಶಗಳು

  • ವಿಜಯ್ ದೇವರಕೊಂಡ ಖಾಸಗಿ ಜೀವನ
  • ತಮ್ಮ ಪ್ರೀತಿ, ಬ್ರೇಕಪ್, ಮದುವೆಗಳ ಬಗ್ಗೆ ವಿಜಯ್ ಮಾತು
  • ಕುಡಿತದ ದಾಸನಾಗಿದ್ದ ವಿಷಯವನ್ನೂ ಹಂಚಿಕೊಂಡಿದ್ದಾರೆ ನಟ

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದ ಸ್ಟಾರ್ ನಟ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ವಿವಾಹವಾಗಿದ್ದಾರೆ. ಇತ್ತೀಚೆಗಷ್ಟೆ ಅವರು, ತಮ್ಮ ಗೆಳೆಯ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಪ್ರಣಯ್ ರೆಡ್ಡಿ ನಿರ್ಮಾಣದ ‘ರೋಮಾಂಚಕಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮದ್ಯಪಾನ, ಪ್ರೀತಿ, ಬ್ರೇಕಪ್, ಮದುವೆ ಇನ್ನೂ ಹಲವು ವಿಷಯಗಳ ಬಗ್ಗೆ ವಿಜಯ್ ದೇವರಕೊಂಡ ಬಹಿರಂಗವಾಗಿ ಮಾತನಾಡಿದ್ದಾರೆ.

ನಿಮಗೆ ಯಾವ ವರ್ಷ ‘ರೋಮಾಂಚಕಾರಿ’ಯಾಗಿತ್ತು? ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ‘ನಾನು ಹುಟ್ಟಿದಾಗಿನಿಂದಲೂ ಈ ವರ್ಷವೇ (2026) ಅತ್ಯಂತ ರೋಮಾಂಚಕಾರಿಯಾಗಿತ್ತು ಎಂದರು ವಿಜಯ್ ದೇವರಕೊಂಡ. ‘89ರಲ್ಲಿ ಹುಟ್ಟಿದೆ, ಆಗಿನಿಂದ ಈಗಿನವರೆಗೂ ಪ್ರತಿ ದಿನವೂ ‘ರೋಮಾಂಚನಕಾರಿ’ಯೇ. ಜೇಬಿನಲ್ಲಿ ದುಡ್ಡಿರಲಿ, ಇಲ್ಲದಿರಲಿ ಎಂಜಾಯ್ ಮಾಡಿದ್ದೇನೆ. ಬ್ಲೆಂಡರ್ಸ್ ಪ್ರೈಡ್, ಗ್ಲೆನ್ ಫಿಡಿಕ್ ಕುಡಿಯುತ್ತಿದ್ದೆ. ಆದರೆ ಆ ನಂತರ ಕುಡಿತ ಬಿಟ್ಟುಬಿಟ್ಟೆ. ಪ್ರೀತಿಸಿದೆ, ಹಾರ್ಟ್ ಬ್ರೇಕ್ ಆಯ್ತು ಆ ನಂತರ ಮತ್ತೆ ಪ್ರೀತಿಗೆ ಬಿದ್ದೆ ಮದುವೆಯಾದೆ’ ಎಂದಿದ್ದಾರೆ ವಿಜಯ್ ದೇವರಕೊಂಡ.

ಇದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆಯೂ ಪ್ರಶ್ನಿಸಲಾಯ್ತು, ಅದಕ್ಕೆ ಉತ್ತರಿಸಿದ ವಿಜಯ್, ‘ನಿಮ್ಮ ಅತ್ತಿಗೆ (ರಶ್ಮಿಕಾ) ಚೆನ್ನಾಗಿದ್ದಾರೆ, ಅವರಿಗೆ ಗಾಯವಾಗಿತ್ತು, ಆದರೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಆರಾಮವಾಗಿ, ಆನಂದದಿಂದ ಇದ್ದಾರೆ’ ಎಂದರು.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಇಂದಾಗಿ ವಿಜಯ್ ದೇವರಕೊಂಡ ಸಿನಿಮಾ ತಡ?

ಇದೇ ಕಾರ್ಯಕ್ರಮದಲ್ಲಿ ತಮ್ಮ ಗೆಳೆಯ ಸಂದೀಪ್ ರೆಡ್ಡಿ ವಂಗಾ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ‘ಸಂದೀಪ ನನ್ನ ಆತ್ಮೀಯ ಗೆಳೆಯ, ಅವನಿಗಾಗಿ ನಾನು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆ, ನನಗಾಗಿ ಅವನು ಸಹ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲ. ಆದರೆ ಹೀಗೆ ಕಾರ್ಯಕ್ರಮಗಳಿಗೆ ಕರೆದು ಥ್ಯಾಂಕ್ಸ್ ಎಲ್ಲ ಹೇಳುತ್ತಿದ್ದರೆ ನನಗೆ ವಿಚಿತ್ರ ಅನಿಸುತ್ತದೆ, ಅವನು ಕರೆದಾಗ ಬರದಿದ್ದರೆ ಬದುಕಿರುವುದೇ ವೇಸ್ಟ್ ಹಾಗಿರುವಾಗ ಇಂಥ ಫಾರ್ಮಾಲಿಟಿಗಳು ಅನವಶ್ಯಕ’ ಎಂದು ತಮ್ಮಿದ್ದರ ಆಳವಾದ ಗೆಳೆತನದ ಬಗ್ಗೆ ವಿಜಯ್ ಹೇಳಿದ್ದಾರೆ.

ವಿಜಯ್ ದೇವರಕೊಂಡ ಅವರನ್ನು ಸ್ಟಾರ್ ಮಾಡಿದ ಸಿನಿಮಾ ‘ಅರ್ಜುನ್ ರೆಡ್ಡಿ’ ಆ ಸಿನಿಮಾ ನಿರ್ದೇಶಿಸಿದ್ದು ಸಂದೀಪ್ ರೆಡ್ಡಿ ವಂಗಾ. ಅದು ಸಂದೀಪ್​​ಗೆ ನಿರ್ದೇಶಕನಾಗಿ ಮೊದಲ ಸಿನಿಮಾ. ಆ ಸಿನಿಮಾದ ಬಳಿಕ ವಿಜಯ್ ದೇವರಕೊಂಡ ಸ್ಟಾರ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ