Happy Birthday Dhanush: ಸೋಲಿನ ಸುಳಿಯಲ್ಲಿದ್ದ ನಟ ಧನುಷ್ ಯಶಸ್ಸನ್ನು ಪಡೆಯಲು ಕಾರಣವಾದ ಸಂಗತಿಗಳು ನಿಮಗೆ ಗೊತ್ತೇ?

Actor Dhanush Birthday: ಇಂದು ನಟ ಧನುಷ್ ಜನ್ಮದಿನ. ತಮ್ಮ ಪ್ರತಿಭೆಯಿಂದ ಭಾಷಾ ಗಡಿಯನ್ನು ಮೀರಿ ಬೆಳೆದಿರುವ ಈ ನಟನಿಗೆ ಪ್ರಾರಂಭದಲ್ಲಿ ಎದುರಾದದ್ದು ಸೋಲು. ಅದನ್ನು ಮೀರಿ ಗೆಲುವಿನ ಹಾದಿಯಲ್ಲಿ ಸಾಗುವುದಕ್ಕೆ ನಟ ಧನುಷ್ ತಮ್ಮಲ್ಲಿ ಏನೆಲ್ಲಾ ಬದಲಾವಣೆ ತಂದುಕೊಂಡರು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.

Happy Birthday Dhanush: ಸೋಲಿನ ಸುಳಿಯಲ್ಲಿದ್ದ ನಟ ಧನುಷ್ ಯಶಸ್ಸನ್ನು ಪಡೆಯಲು ಕಾರಣವಾದ ಸಂಗತಿಗಳು ನಿಮಗೆ ಗೊತ್ತೇ?
ನಟ ಧನುಷ್
TV9kannada Web Team

| Edited By: shivaprasad.hs

Jul 28, 2021 | 3:48 PM


ಚಲನಚಿತ್ರಗಳಲ್ಲಿ ‘ಹೀರೋ’ ಆಗಬೇಕೆಂಬ ಅಪೇಕ್ಷೆಯಿಂದ ಚಿತ್ರರಂಗ ಪ್ರವೇಶಿಸಿದ ತಮಿಳು ನಟ ಧನುಷ್ ಅವರಿಗೆ ಮೊದಲು ಸಿಕ್ಕಿದ್ದು ಅಪಹಾಸ್ಯ, ನೋವು, ಸೋಲು. ಅದರ ನಂತರ 20 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಧನುಷ್ ಬೆಳೆದ ಎತ್ತರವಿದೆಯಲ್ಲಾ, ಅದು ಅನನ್ಯವಾದದ್ದು. ಸೋಲಿನ ಪ್ರಪಾತದಲ್ಲಿದ್ದ ಅವರು ಯಶಸ್ಸಿನ ತುತ್ತತುದಿಗೆ ತಲುಪಲು ಹೇಗೆ ಸಾಧ್ಯವಾಯಿತು ಎಂಬುದು ಪ್ರತಿಯೊಬ್ಬನಿಗೂ ಸೋಜಿಗದ ವಿಷಯ. ಧನುಷ್ ಅವರ ಸಿನಿ ಪ್ರಯಾಣವನ್ನು ನೋಡುವಾಗ, ಕಾಲ್ಪನಿಕ ಕಥೆಗಳು ಕಣ್ಮುಂದೆ ಬರುತ್ತವೆ. ಒಬ್ಬ ವ್ಯಕ್ತಿಯು ನಿರಂತರವಾಗಿ ಶ್ರಮಿಸಿದರೆ ಎಂತಹ ಪವಾಡವನ್ನು ಬೇಕಾದರೂ ಸಾಧ್ಯವಾಗಿಸಬಹುದು ಎಂಬುದಕ್ಕೆ ಧನುಷ್ ಅವರ ಸಾಧನೆಯೇ ಸಾಕ್ಷಿ! ಧನುಷ್ ಸೋಲಿನ ಸುಳಿಯಲ್ಲಿದ್ದಾಗ ಹೇಗೆ ಮೇಲೆದ್ದರು? ಅವರ ಯಶಸ್ಸಿನ ಮಂತ್ರವೇನು ಎಂಬ ಗುಟ್ಟನ್ನು ನೀವು ತಿಳಿಯಬೇಕೆ? ಧನುಷ್ ಅವರ ಜನ್ಮ ದಿನವಾದ ಇಂದು(ಜುಲೈ 28) ಈ ಗುಟ್ಟುಗಳನ್ನು ಧನುಷ್ ಅವರ ಮಾತಿನ ಸಹಿತವಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಓದಿ, ನೋಡಿ.

ಯಶಸ್ವಿ ಜೀವನಕ್ಕಾಗಿ ಧನುಷ್ ಅವರ ಎಂಟು ಸೂತ್ರಗಳು ಇಲ್ಲಿವೆ:

1) ನಿಮ್ಮ ಕನಸುಗಳೇ ನಿಮಗೆ ದಾರಿದೀಪ:
“ನಿಮಗೆ ಬೇಕಾದುದನ್ನು ನೀವು ಸ್ಪಷ್ಟಪಡಿಸಿಗೊಳ್ಳಬೇಕು. ಕೆಲವರಿಗೆ ಯಶಸ್ಸು ಮೊದಲೇ ಬರುತ್ತದೆ. ಮತ್ತೆ ಕೆಲವರಿಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ, ನೀವು ತಾಳ್ಮೆ ಹೊಂದಿರಬೇಕು ಮತ್ತು ನೀವು ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು. ಯಶಸ್ಸು ಮತ್ತು ವೈಫಲ್ಯವನ್ನು ಎಲ್ಲರೂ ಎದುರಿಸುತ್ತಾರೆ. ಯಶಸ್ಸು ನಮ್ಮ ಅಹಂಕಾರದ ಕಾರಣವಾಗಬಾರದು ಮತ್ತು ವೈಫಲ್ಯವು ನಮ್ಮನ್ನು ನಿರಾಶೆಗೊಳಿಸಬಾರದು. ಯಾವಾಗಲೂ ಸಮತೋಲನವನ್ನು ಕಾಪಾಡಿಕೊಳ್ಳಬೇಕು.”

2) ಜನರ ಕಾಮೆಂಟ್‌ಗಳಿಗೆ ಕಿವುಡರಾಗಿ:
“ಜನರು ನಿಮ್ಮನ್ನು ನೋಡಿ ನಗಬಹುದು, ನಿಮ್ಮ ಕನಸು ಮತ್ತು ನಿಮ್ಮ ಪ್ರಯತ್ನಗಳನ್ನು ಅಪಹಾಸ್ಯ ಮಾಡಬಹುದು. ಅಪ್ರಸ್ತುತವಾದ ವಿಷಯಗಳಿಗಾಗಿ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಅವರು ಹೇಳಿಕೊಳ್ಳಬಹುದು. ಆ ಯಾವುದೇ ಕಾಮೆಂಟ್‌ಗಳಿಗೆ ಎಂದಿಗೂ ಗಮನ ಕೊಡಬೇಡಿ.”

3) ದೊಡ್ಡ ಸಾಧನೆಗಳಿಗೆ ಹೆಚ್ಚಿನ ಪ್ರಯತ್ನವು ಬೇಕಾಗುತ್ತದೆ:
“ನಮ್ಮಲ್ಲಿ ಪರಿಶ್ರಮ ಮಾಡುವ ಛಲ ಇಲ್ಲದಿದ್ದರೆ, ಯಾವುದೇ ಪ್ರಚಾರವೂ ನಮಗೆ ಸಹಾಯ ಮಾಡುವುದಿಲ್ಲ. ನಾವು ಕೇವಲ ನಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಮ್ಮನ್ನು ಅನುಸರಿಸುತ್ತದೆ. ಆದರೆ, ನಾವು ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳಬಾರದು. ಯಾಕೆಂದರೆ ಉಪಯುಕ್ತವಾದ ಯಾವುದೂ ಸುಲಭವಾಗಿ ಬರುವುದಿಲ್ಲ ಮತ್ತು ಸುಲಭವಾಗಿ ಪಡೆಯುವ ವಸ್ತುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ತಾಳ್ಮೆಯಿಂದಿರಿ ಮತ್ತು ಪ್ರಯತ್ನಿಸುತ್ತರಿ. ನೀವು ಯಶಸ್ಸನ್ನು ಕಾಣುತ್ತೀರಿ.”

4) ಯಾವುದೂ ಶಾಶ್ವತವಲ್ಲ:
“ಏರಿಳಿತಗಳು, ಸ್ನೇಹಿತರು ಮತ್ತು ಶತ್ರುಗಳು ಇರುತ್ತಾರೆ. ನಮ್ಮ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಿರಂತರವಾಗಿ ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ, ನಮಗೆ ಹೆಚ್ಚು ಹೋರಾಟ, ಗದ್ದಲ ಮತ್ತು ಕೋಪ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸಂತೋಷದ ಮತ್ತು ಶಾಂತಿಯುತ ಜೀವನ. ಮಾತ್ರ.”

5) ಪ್ರೀತಿಯನ್ನು ಹರಡಿ, ದ್ವೇಷವಲ್ಲ:
“ಬದುಕು ಮತ್ತು ಬದುಕಲು ಬಿಡು. ಇತರರನ್ನು ದ್ವೇಷಿಸಲು ಯಾವುದೇ ಕಾರಣವಿಲ್ಲ. ನೀವು ಯಾರನ್ನಾದರೂ ಇಷ್ಟಪಟ್ಟರೆ, ಆ ವ್ಯಕ್ತಿಯ ಜೊತೆಗಿರಿ ಯಾರನ್ನಾದರು ಇಷ್ಟಪಡದಿದ್ದರೆ, ಆ ವ್ಯಕ್ತಿಯಿಂದ ದೂರವಿರಿ. ಪ್ರೀತಿಯನ್ನು ಹರಡಿ, ಜಗತ್ತಿಗೆ ಅದು ತುಂಬಾ ಬೇಕು”

6) ಒಳ್ಳೆಯ ಆಲೋಚನೆಗಳನ್ನು ಹೊಂದಿರಿ:
“ಒಳ್ಳೆಯ ಆಲೋಚನೆಗಳನ್ನು ಯೋಚಿಸುವವರಿಗೆ ಒಳ್ಳೆಯದು ಸಂಭವಿಸುತ್ತದೆ. ನಾವು ಇತರರಿಗೆ ಒಳ್ಳೆಯದನ್ನು ಬಯಸಿದರೆ, ನಮಗೆ ಇನ್ನಷ್ಟು ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ.”

7) ಸಕ್ರಿಯರಾಗಿರಿ
“ತಂತ್ರಜ್ಞಾನ ಬೆಳೆದಂತೆ ನಾವು ಸೋಮಾರಿಯಾಗುತ್ತಿದ್ದೇವೆ. ನಾವು ಹೆಚ್ಚು ಸೋಮಾರಿಯಾಗಿ ಬೆಳೆಯುತ್ತಿರುವಾಗ, ಎಲ್ಲಾ ರೀತಿಯ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಈ ದಿನಗಳಲ್ಲಿ, ನಾವು ಹೊರಗೆ ತಿನ್ನಲು ಹೊರಹೋಗುವ ಅಗತ್ಯವಿಲ್ಲ. ಕೆಲವು ಅಪ್ಲಿಕೇಶನ್‌ಗಳು ನಾವು ಇರುವ ಸ್ಥಳದಲ್ಲೆ ಆಹಾರವನ್ನು ತರುತ್ತವೆ. ಈ ದಿನಗಳಲ್ಲಿ ನಡೆಯುವುದನ್ನು ಸಹ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಮುಂಚಿನ, ವಾಕಿಂಗ್ ಜನರು ಪ್ರತಿದಿನ ಮಾಡುತ್ತಿದ್ದ ನೈಸರ್ಗಿಕ ಚಟುವಟಿಕೆಯಾಗಿತ್ತು. ಚಾರ್ಲಿ ಚಾಪ್ಲಿನ್ ಒಮ್ಮೆ ಹೇಳಿದ್ದು, ಒಂದು ಹಂತದಲ್ಲಿ ನಗುವುದು ಕೂಡ ಒಂದು ವ್ಯಾಯಾಮವಾಗುತ್ತದೆ. ಅದು ಕೂಡ ಈಗ ನಿಜವಾಗಿದೆ. ನಮ್ಮ ದೇಹವು ದೇವಾಲಯದಂತಿದೆ, ಮತ್ತು ಮನಸ್ಸು ದೇವರಂತೆ. ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ”

8)ಯಾರೂ ನಿಮ್ಮ ಜ್ಞಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ:
“ಯಾರಾದರು ನಮ್ಮ ಜಮೀನು ಮತ್ತು ಹಣವನ್ನು ಕಸಿದುಕೊಳ್ಳಬಹುದು. ಆದರೆ ನಮ್ಮ ಜ್ಞಾನವನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಗೆಲ್ಲಬೇಕೆಂದು ನೀವು ಬಯಸಿದರೆ, ಅಧ್ಯಯನ ಮಾಡಿ ಮತ್ತು ಅಧಿಕೃತ ಸ್ಥಾನವನ್ನು ತೆಗೆದುಕೊಳ್ಳಿ.” (ಅಸುರನ್ ಚಿತ್ರದ ಸಂಭಾಷಣೆ)

ಇದನ್ನೂ ಓದಿ: Dulquer Salmaan Birthday: ದುಲ್ಕರ್ ಸಲ್ಮಾನ್ ನಟಿಸಿರುವ ಈ ಚಿತ್ರಗಳನ್ನು ನೀವಿನ್ನೂ ನೋಡಿಲ್ಲವೇ? ಮಿಸ್ ಮಾಡಲೇಬೇಡಿ

ಇದನ್ನೂ ಓದಿ: Art and Entertainment : ‘ಸಂಪೂರ್ಣ ನಗ್ನರಾದ ಹೆಣ್ಣುಮಕ್ಕಳನ್ನು ನೋಡುವುದು ಸಾಧ್ಯವಾಗಲಿಲ್ಲ’

(How actor Dhanush overcome his failures and get success in cinema career)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada