ವಿಜಯ್-ತ್ರಿಶಾ ಒಂದೇ ಹೋಟೆಲ್​​​ನಲ್ಲಿ ಇದ್ದಿದ್ದ ನೋಡಿದ ಆ ವ್ಯಕ್ತಿ; ಮುಂದೇನಾಯ್ತು?

ದಳಪತಿ ವಿಜಯ್ ಹಾಗೂ ತ್ರಿಷಾ ನಡುವೆ ಅಫೇರ್ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ವಿಜಯ್ ಪತ್ನಿ ಸಂಗೀತಾ ಅವರ ಆರೋಪದ ಬೆನ್ನಲ್ಲೇ, ವಿಜಯ್-ತ್ರಿಷಾ ಒಟ್ಟಿಗೆ ಕಾಣಿಸಿಕೊಂಡು ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ರಾಜಕೀಯ ವಿಮರ್ಶಕ ತಿರುಚಿ ಸೂರ್ಯ ಅವರು ವಿಜಯ್-ತ್ರಿಷಾ ಅವರನ್ನು ಹೋಟೆಲ್‌ನಲ್ಲಿ ನೋಡಿದ್ದೇನೆಂದು ಹೇಳಿದ್ದಾರೆ.

ವಿಜಯ್-ತ್ರಿಶಾ ಒಂದೇ ಹೋಟೆಲ್​​​ನಲ್ಲಿ ಇದ್ದಿದ್ದ ನೋಡಿದ ಆ ವ್ಯಕ್ತಿ; ಮುಂದೇನಾಯ್ತು?
ವಿಜಯ್-ತ್ರಿಷಾ

Updated on: Mar 06, 2026 | 1:04 PM

ದಳಪತಿ ವಿಜಯ್ ಹಾಗೂ ತ್ರಿಷಾ (Trisha) ನಡುವೆ ಸಂಬಂಧ ಇದೆ, ಈ ಕಾರಣದಿಂದ ವಿಜಯ್ ಅವರು ಪತ್ನಿಯಿಂದ ದೂರ ಆಗುತ್ತಿದ್ದಾರೆ ಎಂಬ ಮಾತು ಜೋರಾಗಿದೆ. ವಿಜಯ್ ಪತ್ನಿ ಸಂಗೀತಾ ಅವರು ಖುದ್ದು, ‘ವಿಜಯ್​ಗೆ ನಟಿಯ ಜೊತೆ ಸಂಬಂಧ ಇದೆ’ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ವಿಜಯ್ ಹಾಗೂ ತ್ರಿಷಾ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ವಿವಾಹ ಕಾರ್ಯಕ್ರಮ ಒಂದಕ್ಕೆ, ಒಂದೇ ಕಾರಲ್ಲಿ ಇವರು ಆಗಮಿಸಿದರು. ಈ ಬೆನ್ನಲ್ಲೇ ವ್ಯಕ್ತಿಯೋರ್ವ ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ.

ರಾಜಕೀಯ ವಿಮರ್ಶಕ ತಿರುಚಿ ಸೂರ್ಯ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಅವರು ಹೋಟೆಲ್ ಒಂದರಲ್ಲಿ ತ್ರಿಷಾ ಅವರನ್ನು ನೋಡಿದ್ದಾರಂತೆ. ಅವರ ಹೇಳಿಕೆಯನ್ನು ಚರ್ಚೆಯನ್ನು ಹುಟ್ಟುಹಾಕಿದೆ. ಹೋಟೆಲ್​​ನಲ್ಲಿ ನೋಡಿದ ಬಳಿಕ ಅವರು ಸುಮ್ಮನೆ ಇರಲಿಲ್ಲ. ಅದನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಲ್ಲದೆ, ಚಾಲೆಂಜ್ ಕೂಡ ಮಾಡಿದ್ದಾರೆ.

‘ನಾನು ವಿಜಯ್ ಹಾಗೂ ತ್ರಿಷಾ ಅವರನ್ನು ಒಂದೇ ಹೋಟೆಲ್​​​ನಲ್ಲಿ ನೋಡಿದ್ದೇನೆ. ಈ ಹೇಳಿಕೆ ಬಳಿಕ ವಿಜಯ್ ಹಾಗೂ ತ್ರಿಷಾ ಅವರು ನನ್ನ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಬಹುದು. ನಾನು ಅವರನ್ನು ಎಲ್ಲಿ ನೋಡಿದ್ದೇನೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನಾನು ಅದನ್ನು ಕೋರ್ಟ್​​ಗೆ ನೀಡುತ್ತೇನೆ’ ಎಂದು ಚಾಲೆಂಜ್ ಮಾಡಿದ್ದಾರೆ.

ಇದನ್ನೂ ಓದಿ: ‘ಪತ್ನಿ ಜೊತೆ ಬಂದು ಸ್ಪಷ್ಟನೆ ಕೊಡಬೇಕು, ಸಂಬಂಧ ಇಟ್ಟುಕೊಂಡವರ ಜೊತೆಯಲ್ಲ’

ಸಾಮಾನ್ಯವಾಗಿ ಈ ರೀತಿಯ ಅಫೇರ್ ವಿಷಯ ಪ್ರಸ್ತಾಪ ಆದಾಗ ಆ ನಟ-ನಟಿ ದೂರ ಇರಲು ಪ್ರಯತ್ನಿಸುತ್ತಾರೆ. ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ, ವಿಜಯ್ ಹಾಗೂ ತ್ರಿಷಾ ಆ ರೀತಿ ಮಾಡಿಲ್ಲ. ಇವರು ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:00 pm, Fri, 6 March 26

Follow Us