ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಕ್ಕೆ ಇದೆಂಥಾ ಸ್ಥಿತಿ

‘ಇಂಡಿಯನ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ತಲುಪಲು ವಿಫಲವಾಗಿದೆ. ಈ ಚಿತ್ರಕ್ಕೆ ಮತ್ತೊಂದು ದುಸ್ಥಿತಿ ಬಂದೊದಗಿದೆ. ಸಿನಿಮಾ ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಆಗಲೇ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಕ್ಕೆ ಇದೆಂಥಾ ಸ್ಥಿತಿ
ಕಮಲ್ ಹಾಸನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 05, 2024 | 10:50 AM

ಎಸ್​. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿದೆ. ಶಂಕರ್ ಅವರ ವೃತ್ತಿ ಜೀವನದಲ್ಲಿ ಸೋಲಿನ ಪಟ್ಟಿಯಲ್ಲಿ ಈ ಸಿನಿಮಾ ಸೇರಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿದೆ ಎಂದಾಗ ಅದನ್ನು ಆದಷ್ಟು ಬೇಗ ಒಟಿಟಿಗೆ ತರಲಾಗುತ್ತದೆ. ಈಗ ‘ಇಂಡಿಯನ್ 2’ ವಿಚಾರದಲ್ಲಿ ಆಗಿರೋದು ಕೂಡ ಅದೇ. ಈ ಸಿನಿಮಾ ಶೀಘ್ರವೇ ನೆಟ್​ಫ್ಲಿಕ್ಸ್ ಮೂಲಕ  ಒಟಿಟಿಗೆ ಕಾಲಿಡುತ್ತಿದೆ. ಇದು ಕಮಲ್ ಹಾಸನ್ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

‘ಇಂಡಿಯನ್’ ಸಿನಿಮಾ 1966ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ಶಂಕರ್ ಅವರು 28 ವರ್ಷಗಳ ಬಳಿಕ ಸೀಕ್ವೆಲ್ ತಂದರು. ‘ಇಂಡಿಯನ್ 2 ಸಿನಿಮಾ ಜುಲೈ 12ರಂದು ಬಿಡುಗಡೆ ಆಯಿತು. ಈಗ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಒಳಗಾಗಿ ಒಟಿಟಿಗೆ ಬರುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ನೆಟ್​ಫ್ಲಿಕ್ಸ್ ಕಡೆಯಿಂದ ಘೋಷಣೆ ಆಗಿದೆ. ತಮಿಳಿನ ಜೊತೆಗೆ, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಗೆ ರಿಲೀಸ್ ಆಗಲಿದೆ. ಈ ವಿಷಯ ನೋಡಿದ ಬಳಿಕ ಸಿನಿಮಾ ಯಾವ ದುಸ್ಥಿತಿಗೆ ತಲುಪಿತ್ತು ಅನ್ನೋದು ಪಕ್ಕಾ ಆಗಿದೆ.

ಈ ಸಿನಿಮಾದ ಅವಧಿ ಈ ಮೊದಲು 3 ಗಂಟೆ ಇತ್ತು. ಆ ಬಳಿಕ ಚಿತ್ರದ ಅವಧಿಗೆ ಎಲ್ಲರೂ ಟೀಕೆ ವ್ಯಕ್ಯಪಡಿಸಿದರು. ಹೀಗಾಗಿ ಸಿನಿಮಾದ ಅವಧಿಗೆ 20 ನಿಮಿಷ ಕತ್ತರಿ ಹಾಕಿ ಅದನ್ನು 2 ಗಂಟೆ 40 ನಿಮಿಷಕ್ಕೆ ಇಳಿಕೆ ಮಾಡಲಾಯಿತು. ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಜೊತೆ ಸಿದ್ದಾರ್ಥ್, ಎಸ್​ಜೆ ಸೂರ್ಯ, ಬಾಬಿ ಸಿಂಹ, ರಕುಲ್ ಪ್ರೀತ್ ಸಿಂಗ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ‘ಕಮಲ್ ಹಾಸನ್ ಸಿನಿಮಾ ಮುಳುಗಿದ ಹಡಗು’; ಮೊದಲ ದಿನವೇ ನೆಲಕಚ್ಚಿದ ‘ಇಂಡಿಯನ್ 2’ ಚಿತ್ರ

ಈ ಚಿತ್ರದ ಕಥೆ ತುಂಬಾನೇ ಹಳೆಯ ಫಾರ್ಮ್ಯಾಟ್ ಹೊಂದಿದೆ. ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿ ಸೋತರೂ ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರಲಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಎರಡನೇ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ಮಾಪಕರು ಮೂರನೇ ಪಾರ್ಟ್ ಮಾಡೋದು ಅನುಮಾನ ಎಂದೇ ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ