ಇಂಡಿಯನ್ ಐಡಲ್ ಬಗ್ಗೆ ಇತ್ತೀಚೆಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಬಡತನ, ಫೇಕ್ ಲವ್ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ ಎಂದು ಸ್ವತಃ ಇಂಡಿಯನ್ ಐಡಲ್ ವಿನ್ನರ್ ಆರೋಪಿಸಿದ್ದರು. ಈ ಬೆನ್ನಲ್ಲೇ ಗಾಯಕಿ ಆಶಾ ಭೋಸ್ಲೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂಡಿಯನ್ ಐಡಲ್ 12ರಲ್ಲಿ ವಿಶೇಷ ಜಡ್ಜ್ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಇಂಡಿಯನ್ ಐಡಲ್ ಯಶಸ್ವಿಯಾಗಿ 11 ಸೀಸನ್ ಪೂರ್ಣಗೊಳಿಸಿದೆ. ಈಗ 12ನೇ ಸೀಸನ್ ನಡೆಯುತ್ತಿದೆ. ಮುಂಬರುವ ವಿಶೇಷ ಎಪಿಸೋಡ್ನಲ್ಲಿ ಆಶಾ ಭೋಸ್ಲೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೋನಿ ಟಿವಿ ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಇನ್ನು ಜಡ್ಜ್ ಆದಿತ್ಯ ನಾರಾಯಣ್ ಅವರು ಈ ಎಪಿಸೋಡ್ ವಿಶೇಷವಾಗಿ ನಡೆಸಿಕೊಡುತ್ತಿದ್ದಾರೆ.
ಆಶಾ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಸ್ಪರ್ಧಿ ಪವನ್ದೀಪ್ ರಾಜನ್ ಅವರು ಗುಲಾಬಿ ಹೂವನ್ನು ನೀಡಿ ಸ್ವಾಗತಿಸಿದ್ದಾರೆ. ಸದ್ಯದಲ್ಲೇ ಇಂಡಿಯನ್ ಐಡಲ್ 12ರ ಫಿನಾಲೆ ನಡೆಯುತ್ತಿದ್ದು, ಅದಕ್ಕೂ ಮೊದಲೇ ಈ ಶೋನ ರಂಗು ಹೆಚ್ಚಿಸಲಾಗುತ್ತಿದೆ.
ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಪರ-ವಿರೋಧದ ಅನೇಕ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆದಿದೆ. ಹಿಂದಿಯ ‘ಇಂಡಿಯನ್ ಐಡಲ್ 12’ ಸಿಂಗಿಂಗ್ ರಿಯಾಲಿಟಿ ಶೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್ಗಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.
ಇಂಡಿಯನ್ ಐಡಲ್ ಐದು ಹಾಗೂ ಆರನೇ ಸೀಸನ್ ಜಡ್ಜ್ ಆಗಿದ್ದ ಸುನಿಧಿ ಚೌಹಾಣ್ ಈ ಶೋನಿಂದ ಹೊರ ಬಂದಿದ್ದರು. ಅಲ್ಲದೆ, ಈ ಶೋ ಸ್ಕ್ರಿಪ್ಟೆಡ್ ರೂಪದಲ್ಲಿ ನಡೆಯುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ‘
ಇದನ್ನೂ ಒದಿ: ಕೆಟ್ಟ ಗಾಯನ ಕೇಳಿ ಇಂಡಿಯನ್ ಐಡಲ್ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್
Published On - 7:46 pm, Thu, 8 July 21