ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರು ‘GOAT’ ಸಿನಿಮಾ ಮೂಲಕ ಸಾಧಾರಣ ಗೆಲುವು ಕಂಡಿದ್ದು ಗೊತ್ತೇ ಇದೆ. ಈ ಚಿತ್ರವು ಇತ್ತೀಚೆಗೆ ಬಿಡುಗಡೆ ಕಂಡಿದೆ. ಈ ಚಿತ್ರ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ ಎಂಬ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆಯಂತೆ. ಇದಕ್ಕೂ ಮೊದಲು ರಿಲೀಸ್ ಆದ ‘ಲಿಯೋ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು ಎಂದೇ ಹೇಳಬಹುದು. ಈಗ ಅವರು ‘ದಳಪತಿ 69’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಹೆಚ್. ವಿನೋದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಇದನ್ನು ನಿರ್ಮಾಣ ಮಾಡುತ್ತಿದೆ ಅನ್ನೋದು ವಿಶೇಷ. ಈ ಸಿನಿಮಾದ ಕಥೆಯ ಬಗ್ಗೆ ಈಗ ವರದಿ ಒಂದು ಹರಿದಾಡಿದೆ.
ಈ ಚಿತ್ರಕ್ಕೆ ಅನಿರುದ್ಧ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್ ಅವರು ಈ ಸಿನಿಮಾದ ತಂಡ ಸೇರಿಕೊಂಡಿದ್ದಾರಂತೆ. ಇನ್ನು, ಮಲಯಾಳಂನ ನಟಿ ಮಮತಾ ಬೈಜು ಅವರು ಚಿತ್ರದ ಭಾಗವಾಗಲಿದ್ದಾರಂತೆ. ಅವರು ವಿಜಯ್ ತಂಗಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ತೆಲುಗು ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ.
ವಿಜಯ್ ಅವರು ‘ದಳಪತಿ 69’ ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರು ಈಗಾಗಲೇ ಪಕ್ಷವನ್ನು ಕೂಡ ಘೋಷಣೆ ಮಾಡಿದ್ದಾರೆ ಅನ್ನೋದು ವಿಶೇಷ. ಈ ಕಾರಣದಿಂದಲೇ ಅವರ ಕೊನೆಯ ಸಿನಿಮಾ ರಾಜಕೀಯಕ್ಕೆ ಸಂಬಂಧಿಸಿದಂತೆ ಇರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಟೈಟಲ್ ರಿವೀಲ್ ಆದ ಬಳಿಕ ಇನ್ನೊಂದಷ್ಟು ವಿಚಾರಗಳು ರಿವೀಲ್ ಆಗಲಿವೆ. ಇದು ಯಾವ ತೆಲುಗು ಸಿನಿಮಾದ ರಿಮೇಕ್ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಕೂಡ ನಡೆಯುತ್ತಿವೆ.
ಇದನ್ನೂ ಓದಿ: ಹೀರೋ ಆದವರು ನೆಗೆಟಿವ್ ರೋಲ್ ಮಾಡಿ ಸಾಕಷ್ಟು ಪ್ರಭಾವ ಬೀರಿದವರು ಇವರೇ ನೋಡಿ
ವಿಜಯ್ ಅವರು ರಾಜಕೀಯಕ್ಕೆ ಸೇರಿದ್ದು ಅವರ ಅಭಿಮಾನಿಗಳಿಗೆ ಬೇಸರ ಇದೆ ಎಂದು ಹೇಳಬಹುದು. ಏಕೇಂದರೆ ಅವರು ರಾಜಕೀಯಕ್ಕೆ ಹೋದ ಬಳಿಕ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆಯಲಿದ್ದಾರೆ. ಈ ವಿಚಾರವನ್ನು ಅವರ ಕಡೆಯಿಂದಲೇ ಅಧಿಕೃತವಾಗಿ ಘೋಷಣೆ ಆಗಿದೆ. ‘ಗೋಟ್’ ಸಿನಿಮಾ ಥಿಯೇಟರ್ನಲ್ಲಿ ಸಾಧಾರಣ ಗಳಿಕೆ ಮಾಡಿತು. ಅಕ್ಟೋಬರ್ 3ರಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.