AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಸಿನಿಮಾಕ್ಕೆ ಬರಲಿದೆಯೇ ಸೀಕ್ವೆಲ್? ಕತೆಯಲ್ಲಿ ಇದೆಯೇ ಸುಳಿವು?

Peddi movie sequel: ರಾಮ್ ಚರಣ್ ಬಹಳ ಶ್ರಮ ಹಾಕಿ ‘ಪೆದ್ದಿ’ ಸಿನಿಮಾ ಮಾಡಿದ್ದಾರೆಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೊದಲ ದಿನವೇ ದೇಶದಾದ್ಯಂತ ರಾಮ್ ಚರಣ್ ಅವರ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ರಾಮ್ ಚರಣ್ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರೂ ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಅಂದಹಾಗೆ ‘ಪೆದ್ದಿ’ ಸಿನಿಮಾದ ಸೀಕ್ವೆಲ್ ಬರಲಿದೆಯೇ?

‘ಪೆದ್ದಿ’ ಸಿನಿಮಾಕ್ಕೆ ಬರಲಿದೆಯೇ ಸೀಕ್ವೆಲ್? ಕತೆಯಲ್ಲಿ ಇದೆಯೇ ಸುಳಿವು?
Ram Charan Peddi
ಮಂಜುನಾಥ ಸಿ.
|

Updated on: Jun 04, 2026 | 6:53 PM

Share

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಮ್ ಚರಣ್ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೊದಲ ದಿನವೇ ದೇಶದಾದ್ಯಂತ ರಾಮ್ ಚರಣ್ ಅವರ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ರಾಮ್ ಚರಣ್ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರೂ ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗುವ ದೊಡ್ಡ ಬಜೆಟ್​​ನ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲ ಸೀಕ್ವೆಲ್​​ಗಳು ಬರುತ್ತಿವೆ. ಇತ್ತೀಚೆಗಂತೂ ಸೀಕ್ವೆಲ್​​ಗಳ ಕಾಲವಾಗಿದೆ. ಕೆಲವರಂತೂ ‘ಸಿನಿಮ್ಯಾಟಿಕ್ ಯೂನಿವರ್ಸ್​​’ ಸಹ ಮಾಡುತ್ತಿದ್ದಾರೆ. ಈಗ ‘ಪೆದ್ದಿ’ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಸೀಕ್ವೆಲ್ ಸಹ ಬರಲಿದೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಸಹಜವಾಗಿದೆ. ಈ ಪ್ರಶ್ನೆಗೆ ಕೆಲ ದಿನಗಳ ಹಿಂದೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಉತ್ತರ ನೀಡಿದ್ದಾರೆ.

ಸಾಮಾನ್ಯವಾಗಿ ಸೀಕ್ವೆಲ್ ಮಾಡುವ ಉದ್ದೇಶವುಳ್ಳ ನಿರ್ದೇಶಕರು ಸಿನಿಮಾದ ಅಂತ್ಯದಲ್ಲಿ ಸುಳಿವು ನೀಡುತ್ತಾರೆ. ಆದರೆ ‘ಪೆದ್ದಿ’ ಸಿನಿಮಾದ ಅಂತ್ಯದಲ್ಲಿ ಸೀಕ್ವೆಲ್ ಬರುವುದರ ಬಗ್ಗೆ ಯಾವುದೇ ಸುಳಿವನ್ನು ನೀಡಲಾಗಿಲ್ಲ. ಕೆಲ ದಿನಗಳ ಹಿಂದಷ್ಟೆ ಈ ಬಗ್ಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬುಚ್ಚಿಬಾಬು ಸನಾ, ತಮಗೆ ‘ಪೆದ್ದಿ’ಯ ಕತೆ ಕೇವಲ ಒಂದು ಕತೆಯಾಗಿ ಹೊಳೆದಿತ್ತು, ಹಾಗಾಗಿ ಅದನ್ನು ಒಂದೇ ಸಿನಿಮಾ ಮಾಡಿದ್ದೇನೆ. ‘ಪೆದ್ದಿ’ ಬರುತ್ತಾನೆ, ಆತ ಸಾಧಿಸುತ್ತಾನೆ, ಆತನ ಕತೆ ಮುಗಿಯುತ್ತದೆ ಅಷ್ಟೆ, ಸೀಕ್ವೆಲ್​​ಗಾಗಿ ಅದನ್ನು ಹಿಗ್ಗಿಸುವ ಅವಶ್ಯಕತೆ ಇಲ್ಲ’ ಎಂದಿದ್ದರು.

ಇದನ್ನೂ ಓದಿ:Peddi Movie review: ‘ಪೆದ್ದಿ’: ರಾಮ್ ಚರಣ್ ಸಿಕ್ಸರ್, ನಿರ್ದೇಶಕ ರನೌಟ್

‘ಪೆದ್ದಿ’ ಸಿನಿಮಾವು ಒಂದು ಘನ ಉದ್ದೇಶವನ್ನು ಈಡೇರಿಸಲೆಂದು ಕ್ರೀಡಾಪಟುವಾಗುವ ಸಣ್ಣ ಗ್ರಾಮದ ಮಾಮೂಲಿ ಯುವಕನೊಬ್ಬನ ಕತೆ. ಸಿನಿಮಾನಲ್ಲಿ ನಟ ರಾಮ್ ಚರಣ್ ಅವರು ಕ್ರಿಕೆಟ್, ಕುಸ್ತಿ ಮತ್ತು ಮತ್ತೊಂದು ಕ್ರೀಡೆಯನ್ನು ಆಡುತ್ತಾರೆ. ಆಟದ ಮೂಲಕ ತಮಗಾಗಿ ಒಂದು ಐಡೆಂಟಿಟಿಯನ್ನು ಕಟ್ಟಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಕುಸ್ತಿ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ರತ್ನವೇಲು ಕ್ಯಾಮೆರಾ ಇದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA