ರಿಲೀಸ್ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ
ದಳಪತಿ ವಿಜಯ್ ಅವರ 'ಜನ ನಾಯಗನ್' ಚಿತ್ರ ಜನವರಿ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದೆ ಸಮಸ್ಯೆ ಎದುರಿಸುತ್ತಿದೆ. ರಾಜಕೀಯ ಮತ್ತು ಧಾರ್ಮಿಕ ವಿಷಯಗಳಿರುವ ಕಾರಣ ಸೆನ್ಸಾರ್ ಕಠಿಣವಾಗಿದೆ. ಬದಲಾವಣೆಗಳ ನಂತರವೂ ಅನುಮತಿ ಸಿಗದ ಕಾರಣ ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 9ರಂದು ರಿಲೀಸ್ ಆಗಲಿದೆ. ಈ ವಾಕ್ಯವನ್ನು ಹೇಳಲು ಒಂದು ಕಾರಣವೂ ಇದೆ. ಸದ್ಯ ‘ಜನ ನಾಯಗನ್’ ತಂಡಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಡಿಸೆಂಬರ್ 19ರಂದು ಸೆನ್ಸಾರ್ ತಂಡ ಸಿನಿಮಾ ವೀಕ್ಷಿಸಿದೆ. ಸಿನಿಮಾ ರಿಲೀಸ್ ಹತ್ತಿರವಾದರೂ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ವಿಷಯ ಚರ್ಚೆ ಹುಟ್ಟುಹಾಕಿದೆ. ಇದನ್ನು ಪ್ರಶ್ನಿಸಿ ತಂಡದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ರಾಜಕೀಯ ಕಥಾ ಹಂದರದ ಕಥೆ, ಧರ್ಮದ ವಿಷಯಗಳ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಇರಬೇಕು. ಒಂದು ದೃಶ್ಯ, ಡೈಲಾಗ್ ಸಮಾಜದಲ್ಲಿ ಕಾಡ್ಗಿಚ್ಚು ಹೊತ್ತಿಸಬಹುದು. ಹೀಗಾಗಿ, ಈ ರೀತಿಯ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ವೀಕ್ಷಿಸುತ್ತಾರೆ. ‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವು ಪದಗಳಿಗೆ ಮ್ಯೂಟ್ ಮಾಡುವಂತೆ ನಿರ್ದೇಶಿಸಿದೆ.
ಈ ಬದಲಾವಣೆಗಳನ್ನು ಮಾಡಿ ತಂಡದವರು ಸಿನಿಮಾನ ಸೆನ್ಸಾರ್ ಮಂಡಳಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರ ಕಡೆಯಿಂದ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಪತ್ರ ಇಲ್ಲದೆಯೇ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ರಿಲೀಸ್ಗೆ ಇನ್ನು ಕೆಲವೇ ದಿನ ಬಾಕಿ ಇದೆ. ಹೀಗಾಗಿ, ತಂಡದವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.
ಈಗಾಗಲೇ ಏಕ ಪರದೆ ಚಿತ್ರಮಂದಿರಗಳಿಗೆ ಬುಕಿಂಗ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಏಕಪರದೆಗಳಲ್ಲಿ ಮುಂಜಾನೆ ಶೋಗೆ ಸಾವಿರ ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆದಾಗ್ಯೂ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇದು ಚರ್ಚೆಗೆ ಕಾರಣ ಆಗಿದೆ. ಇಷ್ಟು ದುಬಾರಿ ಟಿಕೆಟ್ ದರ ನಿಗದಿ ಮಾಡಿದ ಬಗ್ಗೆಯೂ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ‘ಜನ ನಾಯಗನ್’ ರಿಲೀಸ್ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ ಎಚ್. ವಿನೋದ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ವಿಜಯ್ ಮುಖ್ಯ ಭೂಮಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಲಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




