ಬಿಗ್ ಬಾಸ್ ಫಿನಾಲೆ ಯಾವಾಗ? ಇನ್ನೂ ಎಷ್ಟು ಎಲಿಮಿನೇಷನ್ ನಡೆಯುತ್ತೆ?
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ. 8 ಸ್ಪರ್ಧಿಗಳ ಪೈಕಿ 5-6 ಮಂದಿ ಮಾತ್ರ ಫಿನಾಲೆಗೆ ಹೋಗಲಿದ್ದು, ಅದಕ್ಕೂ ಮುನ್ನ ಎಲಿಮಿನೇಷನ್‌ಗಳು ನಡೆಯಲಿವೆ. ವಿನ್ನರ್‌ಗೆ 50 ಲಕ್ಷ ರೂ. ನಗದು ಮತ್ತು ಟ್ರೋಫಿ ಸಿಗಲಿದೆ. ಯಾರು ಕಪ್ ಎತ್ತುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತ ತಲುಪಿದೆ. ಕಳೆದ ಕೆಲವು ವಾರಗಳಿಂದ ಈ ಶೋ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬರುತ್ತಿದೆ. ಈಗ ಶೋ ಕೊನೆ ಆಗುವ ಹಂತ ತಲುಪಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್ ನಡೆಯುತ್ತದೆ? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ 15ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ದೊಡ್ಮನೆಯಲ್ಲಿ ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ಕಾವ್ಯಾ ಶೈವ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಹಾಗೂ ಧನುಷ್ ಇದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಅದಕ್ಕೂ ಮೊದಲು ಕೆಲವು ಎಲಿಮಿನೇಷನ್ ನಡೆಯಲಿದೆ.
ಸದ್ಯ ದೊಡ್ಮನೆಯಲ್ಲಿ 8 ಮಂದಿ ಇದ್ದಾರೆ. ಇವರ ಪೈಕಿ ಫಿನಾಲೆಗೆ ಉಳಿಯೋದು ಆರು ಅಥವಾ ಐದು ಮಂದಿ ಮಾತ್ರ. ಕಳೆದ ಎರಡು ಸೀಸನ್ಗಳಿಂದ ಫಿನಾಲೆಗೆ ಆರು ಜನರನ್ನು ಉಳಿಸಿಕೊಳ್ಳಲಾಗಿತ್ತು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಲ್ಲಿ, ಈ ವಾರ ಅಥವಾ ಮುಂದಿನ ವಾರ ಮಧ್ಯವಾರದ ಎಲಿಮಿನೇಷನ್ ಇರಲಿದೆ. ಈ ವಾರಾಂತ್ಯದಲ್ಲಿ ಒಂದು ಎಲಿಮಿನೇಷನ್ ಆಗಲಿದೆ.
ಆರು ಮಂದಿಯನ್ನು ಫಿನಾಲೆಗೆ ಕರೆದುಕೊಂಡು ಹೋದರೆ ಜನವರಿ 17ರಂದು ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಜನವರಿ 18ರಂದು ಹಂತ ಹಂತವಾಗಿ ಎಲಿಮಿನೇಷನ್ ಮಾಡಿ, ಇಬ್ಬರನ್ನು ಉಳಿಸಿಕೊಳ್ಳಲಾಗುತ್ತದೆ. ಫಿನಾಲೆ ಸಂಜೆ 6 ಗಂಟೆಗೆ ಆರಂಭ ಆಗುವ ಸಾಧ್ಯತೆ ಇದೆ. ವಿವಿಧ ಸ್ಪರ್ಧಿಗಳು ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಬಾರಿ ಎಲಿಮಿನೇಟ್ ಆದ ಸ್ಪರ್ಧಿಗಳು ಫಿನಾಲೆಯಲ್ಲಿ ಇರಲಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಕ್ಯಾಶ್ ಹಾಗೂ ಆಕರ್ಷಕ ಟ್ರೋಫಿ ಸಿಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಇಬ್ಬರಿಗೆ ರೆಡ್ ಕಾರ್ಡ್; ಮೂರು ತಿಂಗಳ ಸಂಬಳ ಕಟ್, ಫಿನಾಲೆಗೂ ಇಲ್ಲ ಅವಕಾಶ
ಈ ವಾರ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




