
ದಳಪತಿ ವಿಜಯ್ (Thalapathy Vijay) ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಇಂದು (ಜುಲೈ 23) ರಿಲೀಸ್ ಆಗಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮುಂಜಾನೆ 6 ಗಂಟೆಗೆ ಶೋ ಆಯೋಜನೆ ಮಾಡಲಾಗಿದೆ. ಈ ಸಿನಿಮಾ ಸ್ವಾಗತ ಜೋರಾಗಿದೆ. ವಿಜಯ್ ಅವರ ಕೊನೆಯ ಸಿನಿಮಾ ಇದು. ಅಲ್ಲದೆ, ಈಗ ವಿಜಯ್ ಸಿಎಂ ಆಗಿರುವುದರಿಂದ ಫ್ಯಾನ್ಸ್ ಚಿತ್ರವನ್ನು ಭರ್ಜರಿ ಸ್ವಾಗತ ಮಾಡಿದ್ದು, ಥಿಯೇಟರ್ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ.
‘ಜನ ನಾಯಗನ್’ ಸಿನಿಮಾ ತೆರೆಗೆ ಬರಲು ಸಾಕಷ್ಟು ಸಮಯ ತಗೆದುಕೊಂಡಿದೆ. ಈ ಚಿತ್ರಕ್ಕೆ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಸೆನ್ಸಾರ್ ಮಂಡಳಿ ಸಮಸ್ಯೆ ಮತ್ತು ಆನ್ಲೈನ್ ಸೋರಿಕೆಯಂತಹ ಹಲವು ಅಡೆತಡೆಗಳಿಂದ ಸಿನಿಮಾ ತಡವಾಗಿತ್ತು. ಆದರೆ ಈಗ ಎಲ್ಲಾ ಕಷ್ಟಗಳು ಮುಗಿದಿವೆ. ಸಿನಿಮಾ ಎ ಪ್ರಮಾಣಪತ್ರ ಪಡೆದು ಅದ್ಧೂರಿಯಾಗಿ ರಿಲೀಸ್ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಮೊದಲಾದ ಕಡೆಯಲ್ಲಿ ಈಗಲೇ ಹಬ್ಬದ ಸಂಭ್ರಮ ಶುರುವಾಗಿದೆ. ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪ್ರಮುಖ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಮುಂದೆ ವಿಜಯ್ ಅವರ ಬೃಹತ್ ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಬ್ಯಾನರ್ಗಳು ಮತ್ತು ತಳಿರು ತೋರಣಗಳಿಂದ ಚಿತ್ರಮಂದಿರಗಳನ್ನು ಅಲಂಕರಿಸಲಾಗಿದೆ.
ಸಿನಿಮಾದ ಅಡ್ವಾನ್ಸ್ ಬುಕಿಂಗ್ ತುಂಬಾ ಚೆನ್ನಾಗಿ ನಡೆದಿದೆ. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೆ ಮೊದಲ ದಿನವೇ ದಾಖಲೆ ಕಲೆಕ್ಷನ್ ಮಾಡುವುದು ಗ್ಯಾರಂಟಿ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಥಿಯೇಟರ್ನಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಜನ ನಾಯಗನ್’ ಪ್ರಚಾರ ಮಾಡದ ಸಿಎಂ ವಿಜಯ್; ಆದರೂ ಹೇಗಿದೆ ಅಭಿಮಾನಿಗಳ ಕ್ರೇಜ್?
ಎಚ್. ವಿನೋದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಮಿತಾ ಬೈಜು ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪ್ರಶ್ನೆ: ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ?
ಉತ್ತರ: ಜುಲೈ 23
ಪ್ರಶ್ನೆ: ಇದು ವಿಜಯ್ ಕೊನೆ ಚಿತ್ರವೇ?
ಉತ್ತರ: ಹೌದು
ಪ್ರಶ್ನೆ: ಚಿತ್ರಕ್ಕೆ ಯಾವ ಪ್ರಮಾಣ ಪತ್ರ ನೀಡಲಾಗಿದೆ?
ಉತ್ತರ: ಎ ಪ್ರಮಾಣಪತ್ರ
Published On - 7:36 am, Thu, 23 July 26