ಶಿವರಾಜ್ ಕುಮಾರ್ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ: ಯಾವುದು ಆ ಸಿನಿಮಾ?

|

Updated on: Mar 06, 2024 | 2:36 PM

Janhvi Kapoor: ಶಿವರಾಜ್ ಕುಮಾರ್ ನಟಿಸಲಿರುವ ಹೊಸ ತೆಲುಗು ಸಿನಿಮಾಕ್ಕೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿ! ಯಾವುದು ಆ ಸಿನಿಮಾ?

ಶಿವರಾಜ್ ಕುಮಾರ್ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ: ಯಾವುದು ಆ ಸಿನಿಮಾ?
Follow us on

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ (Janhvi Kapoor) ಒಂದರ ಹಿಂದೊಂದು ದಕ್ಷಿಣ ಭಾರತ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜಾನ್ಹವಿ ನಟಿಸಿರುವ ಒಂದೂ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾ ಬಿಡುಗಡೆ ಆಗಿಲ್ಲ, ಆದರೆ ಈಗಲೇ ಜಾನ್ಹವಿ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ವರ್ಲ್ಡ್ ಸ್ಟಾರ್ ಆದ ಜೂ ಎನ್​ಟಿಆರ್ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಇದು ಅವರ ಮೊದಲ ದಕ್ಷಿಣ ಭಾರತ ಸಿನಿಮಾ. ಇದೀಗ ಶಿವರಾಜ್ ಕುಮಾರ್ ನಟಿಸಲಿರುವ ತೆಲುಗಿನ ಮತ್ತೊಂದು ಸಿನಿಮಾಕ್ಕೂ ಜಾನ್ಹವಿ ಕಪೂರ್ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ‘ಆರ್​ಆರ್​ಆರ್​’ನ ಮತ್ತೊಬ್ಬ ಸ್ಟಾರ್ ರಾಮ್ ಚರಣ್ ನಾಯಕ.

ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ನಾಯಕಿಯಾಗಿ ಜಾನ್ಹವಿ ಕಪೂರ್ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಗೆ ಗಟ್ಟಿಯಾದ ಪಾತ್ರವಿದ್ದು ಹಾಗಾಗಿ ಗ್ಲಾಮರ್ ಜೊತೆಗೆ ನಟನೆಯನ್ನೂ ಬಲ್ಲ ಜಾನ್ಹವಿ ಕಪೂರ್ ಅವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:ಅಂಬಾನಿ ಮದುವೆಯಲ್ಲಿ ‘ಆರತಿ ಗರ್ಲ್’ ಆದ ನಟಿ ಜಾನ್ಹವಿ ಕಪೂರ್, ಸಖತ್ ಟ್ರೋಲ್

ಇಂದು (ಮಾರ್ಚ್ 06) ಜಾನ್ಹವಿ ಕಪೂರ್ ಹುಟ್ಟುಹಬ್ಬವಾಗಿದ್ದು, ಇದೇ ದಿನ ಜಾನ್ಹವಿಯನ್ನು ತಮ್ಮ ಸಿನಿಮಾಕ್ಕೆ ಚಿತ್ರತಂಡ ಸ್ವಾಗತಿಸಿದೆ. ಬುಚ್ಚಿಬಾಬು ನಿರ್ದೇಶಿಸುತ್ತಿರುವ ರಾಮ್ ಚರಣ್​ರ 16ನೇ ಸಿನಿಮಾವನ್ನು ವೃದ್ಧಿ ಸಿನಿಮಾಸ್ ನಿರ್ಮಾಣ ಮಾಡುತ್ತಿದ್ದು, ಜಾನ್ಹವಿಯನ್ನು ತಮ್ಮ ಸಿನಿಮಾಕ್ಕೆ ಸ್ವಾಗತಿಸಿ ವೃದ್ಧಿ ಸಿನಿಮಾಸ್ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಆರ್​ಸಿ 16ಕ್ಕೆ ನಾವು ಜಾನ್ಹವಿ ಕಪೂರ್​ಗೆ ಸ್ವಾಗತಿಸುತ್ತಿದ್ದೇವೆ ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ.

ರಾಮ್ ಚರಣ್ ನಟಿಸುತ್ತಿರುವ 16ನೇ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಕೆಲ ತಿಂಗಳ ಹಿಂದೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಬೆಂಗಳೂರಿಗೆ ಬಂದು ಶಿವರಾಜ್ ಕುಮಾರ್ ಅವರಿಗೆ ಕತೆ ಹೇಳಿ ಹೋಗಿದ್ದಾರೆ. ಶಿವರಾಜ್ ಕುಮಾರ್ ಅವರಿಗೂ ಕತೆ ಬಹುವಾಗಿ ಮೆಚ್ಚುಗೆಯಾಗಿದೆ ಎನ್ನಲಾಗುತ್ತಿದ್ದು, ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿದ್ದು ಭಾವನಾತ್ಮಕ ಅಂಶಗಳೂ ಸಹ ಸಿನಿಮಾದಲ್ಲಿವೆ ಎನ್ನಲಾಗುತ್ತಿದೆ.

ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿನ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಸಿನಿಮಾ ಒಂದರಲ್ಲಿ ಸಹ ನಟಿಸಲಿದ್ದಾರೆ. ತೆಲುಗಿನ ಮತ್ತೊಂದು ಸಿನಿಮಾವನ್ನು ಸಹ ಜಾನ್ಹವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಾಲಿವುಡ್​ನಲ್ಲಿ ಸಹ ಜಾನ್ಹವಿ ಕಪೂರ್ ಬ್ಯುಸಿಯಾಗಿದ್ದಾರೆ. ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಹಾಗೂ ‘ಉಲ್ಜಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ವರುಣ್ ಧವನ್ ಜೊತೆಗೆ ಮತ್ತೊಂದು ಸಿನಿಮಾಕ್ಕೂ ಸಹಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ