‘ಹೌಸ್ ಆಫ್ ದಿ ಡ್ರಾಗನ್ಸ್’ ವೀಕ್ಷಕರಿಗೆ ಖುಷಿ ಸುದ್ದಿ, ಸೀಸನ್ 2 ಬಿಡುಗಡೆ ಶೀಘ್ರ

House of the Dragons: ವಿಶ್ವದ ಜನಪ್ರಿಯ ವೆಬ್ ಸೀರಿಸ್ 'ಗೇಮ್ ಆಫ್ ಥ್ರೋನ್ಸ್' ನ ಪ್ರೀಕ್ವೆಲ್ 'ಹೌಸ್ ಆಫ್ ದಿ ಡ್ರ್ಯಾಗನ್ 2 ' ಎರಡನೇ ಸೀಸನ್ ಬಿಡುಗಡೆ ಘೋಷಿಸಲಾಗಿದೆ.

‘ಹೌಸ್ ಆಫ್ ದಿ ಡ್ರಾಗನ್ಸ್’ ವೀಕ್ಷಕರಿಗೆ ಖುಷಿ ಸುದ್ದಿ, ಸೀಸನ್ 2 ಬಿಡುಗಡೆ ಶೀಘ್ರ
Follow us
ಮಂಜುನಾಥ ಸಿ.
|

Updated on: Mar 06, 2024 | 3:48 PM

ಗೇಮ್ ಆಫ್ ಥ್ರೋನ್ಸ್’ (Game Of Thrones) ವಿಶ್ವದ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಒಂದೆಂಬ ಸ್ಥಾನ-ಮಾನ ಪಡೆದುಕೊಂಡಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿ ಹೊಂದಿದೆ. ಈ ವೆಬ್ ಸರಣಿ 2019 ರಲ್ಲಿ ಅಂತ್ಯವಾಗಿತ್ತು. 2022 ರಲ್ಲಿ ‘ಗೇಮ್ ಆಫ್ ಥ್ರೋನ್ಸ್’ ಪ್ರೀಕ್ವೆಲ್, ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಇದೀಗ ಈ ಸರಣಿಯ ಎರಡನೇ ಭಾಗ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.

ವಾರ್ನರ್ಸ್ ಬ್ರದರ್ಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಜೆಬಿ ಪೆರ್ರೆಟಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದಿದ್ದಾರೆ. ಜೂನ್ ತಿಂಗಳ ಯಾವ ದಿನಂದು ಶೋ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಇನ್ನಷ್ಟೆ ಖಾತ್ರಿ ಸಿಗಬೇಕಿದೆ. ಶೋನ ಎರಡನೇ ಸೀಸನ್​ಗಾಗಿ ಎರಡು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ತಂದಿದೆ.

ಇದನ್ನೂ ಓದಿ:ಸಿಟಾಡೆಲ್ ಪ್ರೀಮಿಯರ್​ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ

‘ಗೇಮ್ ಆಫ್ ಥ್ರೋನ್ಸ್’ ಮಾದರಿಯಲ್ಲಿಯೇ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಸಹ ಜೆಜೆ ಮಾರ್ಟಿನ್ ರ ‘ಸಾಂಗ್ ಆಫ್ ಐಸ್ ಆಡ್ ಫೈರ್’ ಕಾದಂಬರಿಯನ್ನು ಆಧರಿಸಿದೆ. ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆದ 200 ವರ್ಷಗಳ‌ ಹಿಂದನ ಕತೆಯನ್ನು ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಹೊಂದಿದೆ.’ಹೌಸ್ ಆಫ್ ದಿ ಡ್ರ್ಯಾಗನ್ಸ್’ ಸೀಸನ್ 1 ಅದ್ಭುತ ಪ್ಲಾಟ್ ಪಾಯಿಂಟ್ ನಲ್ಲಿ ಕೊನೆಯಾಗಿದೆ. ರಾಜ ವಿಸೆರಸ್ ಟಾಗೇರಿಯನ್ ನಿಧನದ ಬಳಿಕ ಆತನ ಪತ್ನಿ ಅಲಿಸಾ ತನ್ನ ಮಗ ಏಗಾನ್ ಟಾಗೇರಿಯನ್ ಅನ್ನು ಹೊಸ ರಾಜನೆಂದು ಘೋಷಿಸಿದ್ದರೆ, ಇತ್ತ ವಿಸೆರಸ್ ನ ಪುತ್ರಿ ರೆನೆರಿಯಾ ಟಾಗೇರಿಯನ್ ತನ್ನನ್ನು ತಾನು ರಾಣಿಯೆಂದು ಘೋಷಿಸಿಕೊಂಡಿದ್ದಾಳೆ.

ಎರಡೂ ಗುಂಪುಗಳ ನಡುವೆ ಯುದ್ಧ ಪ್ರಾರಂಭವಾಗುವ ಭೀತಿಯಿದ್ದು, ಎರಡೂ ಗುಂಪುಗಳು ತಮ್ಮ-ತಮ್ಮ ಜೊತೆಗಾರ ಪಾಳೆಗಾರರನ್ನು ಗುರುತಿಸಿ ಅವರೊಟ್ಟಿಗೆ ಯುದ್ಧದ ಯೋಜನೆಗಳನ್ನು ಮಾಡುತ್ತಿರುವಾಗಲೇ ರೆನೆರಿಯಾ ಮಗನನ್ನು ಅಲಿಸಾಳ ಎರಡನೇ ಪುತ್ರ ಕೊಂದ ಸುದ್ದಿ ಬರುತ್ತದೆ. ಮಗನ ಕಳೆದುಕೊಂಡಿರುವ ರೆನೆರಿಯಾ ಯುದ್ಧ ಪ್ರಾರಂಭಿಸುವಲ್ಲಿಗೆ ಮೊದಲ‌‌ ಸೀಸನ್ ಕೊನೆಯಾಗಿದೆ. ಇದೀಗ ಎರಡನೇ ಸೀಸನ್​ನಲ್ಲಿ ಅಲಿಸಾ ಹಾಗೂ ರಿಹಾನಾ ಟಾಗೇರಿಯನ್ ಪರಸ್ಪರ ಕಿತ್ತಾಡಲಿದ್ದಾರೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?