Jr NTR: ಜಪಾನ್​ ವಿದೇಶಾಂಗ ಮಂತ್ರಿಗೆ ಜೂ ಎನ್​ಟಿಆರ್ ಅಚ್ಚುಮೆಚ್ಚು

|

Updated on: Jul 28, 2023 | 9:55 PM

Jr NTR-Ram Charan: ಎರಡು ದಿನಗಳ ಭಾರತದ ಭೇಟಿಗೆ ಬಂದಿರುವ ಜಪಾನಿನ ವಿದೇಶಾಂಗ ಸಚಿವನಿಗೆ ಆರ್​ಆರ್​ಆರ್ ಸಿನಿಮಾ ಅಚ್ಚುಮೆಚ್ಚು.

Jr NTR: ಜಪಾನ್​ ವಿದೇಶಾಂಗ ಮಂತ್ರಿಗೆ ಜೂ ಎನ್​ಟಿಆರ್ ಅಚ್ಚುಮೆಚ್ಚು
ಜೂ ಎನ್​ಟಿಆರ್
Follow us on

ಆರ್​ಆರ್​ಆರ್ (RRR) ಸಿನಿಮಾ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಸಿನಿಮಾದ ಇಬ್ಬರು ನಾಯಕರಾದ ಜೂ ಎನ್​ಟಿಆರ್ (Jr NTR) ಹಾಗೂ ರಾಮ್ ಚರಣ್ (Ram Charan) ಈಗ ಪ್ಯಾನ್ ಇಂಡಿಯಾ ಸ್ಟಾರ್​ಗಳು ಮಾತ್ರವಲ್ಲ ಪ್ಯಾನ್ ವರ್ಲ್ಡ್​ ಸ್ಟಾರ್​ಗಳಾಗಿದ್ದಾರೆ. ಜೂ ಎನ್​ಟಿಆರ್ ಹಾಗೂ ರಾಮ್ ಚರಣ್ ನಟನೆಯನ್ನು ಹಾಲಿವುಡ್ ಸೇರಿದಂತೆ ವಿಶ್ವದ ಹಲವ ದೇಶಗಳ ಸಿನಿಮಾ ಪಂಡಿತರು, ವಿಶ್ಲೇಷಕರು ಮೆಚ್ಚಿಕೊಂಡಿದ್ದರು. ಜಪಾನ್​ನಲ್ಲಂತೂ ಆರ್​ಆರ್​ಆರ್​ ಸಿನಿಮಾ ಭಾರಿ ವೈರಲ್ ಆಗಿದ್ದು, ಅಲ್ಲಿನ ಸರ್ಕಾರದ ಉನ್ನತ ಮಂತ್ರಿಗಳಿಗೂ ಸಹ ಆರ್​ಆರ್​ಆರ್ ಮೋಡಿ ಮಾಡಿದೆ.

ಇದೀಗ ಜಪಾನ್​ನ ವಿದೇಶಾಂಗ ಸಚಿವ ಯೋಷಿಮಾಸ ಹಯಾಷಿ ಎರಡು ದಿನಗಳ ಭಾರತದ ಭೇಟಿಗೆ ಬಂದಿದ್ದು, ಭಾರತದ ವಿದೇಶಾಂಗ ಸಚಿವ ಜಯಶಂಖರ್ ಜೊತೆಗೆ ಸಂವಾದವೊಂದರಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಆರ್​ಆರ್​ಆರ್ ಸಿನಿಮಾದ ಬಗ್ಗೆ ಸಚಿವ ಯೋಷಿಮಾಸ ಹಯಾಷಿ ಪ್ರಸ್ತಾಪಿಸಿದ್ದಾರೆ. ”ಆರ್​ಆರ್​ಆರ್’ ಸಿನಿಮಾ ಅದ್ಭುತವಾಗಿದೆ. ಅದು ನನ್ನ ಮೆಚ್ಚಿನ ಸಿನಿಮಾ. ಅದರಲ್ಲಿ ಹಲವು ನಟರಿದ್ದಾರೆ. ಆದರೆ ನನಗೆ ಬಹಳ ಇಷ್ಟವಾಗಿದ್ದು ರಾಮ್ ಜೂನಿಯರ್ ಎಂದಿದ್ದಾರೆ ಸಚಿವ ಯೋಷಿಮಾಸ ಹಯಾಷಿ.

ಇದನ್ನೂ ಓದಿ:ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು

ಯೋಷಿಮಾಸ ಹಯಾಷಿ, ಜೂ ಎನ್​ಟಿಆರ್, ತಾರಕ ರಾಮ್ ಜೂನಿಯರ್ ಇಷ್ಟ ಎಂದು ಹೇಳಿದ್ದಾರೆ. ಆದರೆ ರಾಮ್ ಚರಣ್ ಅಭಿಮಾನಿಗಳು, ಯೋಷಿಮಾಸ ಹಯಾಷಿ, ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಇಬ್ಬರ ಹೆಸರೂ ಹೇಳಿದ್ದಾರೆ ಎಂದು ವಾದಿಸುತ್ತಿದ್ದಾರೆ. ಏನಾದರಾಗಲಿ ಜಪಾನಿನಲ್ಲಿ ಆರ್​ಆರ್​ಆರ್ ಹವಾ ಎಬ್ಬಿಸಿದೆ. ಅದರಲ್ಲಿಯೂ ನಾಟು-ನಾಟು ಹಾಡಂತೂ ಜಪಾನಿನಲ್ಲಿ ಇನ್ನಿಲ್ಲದಂತೆ ವೈರಲ್ ಆಗಿದೆ. ಭಾರತದ ಜಪಾನಿನ ರಾಯಭಾರಿ ಕಚೇರಿಯವರು ಸಹ ಆರ್​ಆರ್​ಆರ್​ ಸಿನಿಮಾದ ನಾಟು-ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಸಚಿವ ಯೋಷಿಮಾಸ ಹಯಾಷಿ, ಆರ್​ಆರ್​ಆರ್ ಸಿನಿಮಾ ಬಗ್ಗೆ ಮಾತ್ರವೇ ಅಲ್ಲದೆ ಭಾರತದ ಬಿರಿಯಾನಿಯನ್ನೂ ಹೊಗಳಿದ್ದಾರೆ. ಬಿರಿಯಾನಿ ಈಗ ಜಪಾನಿನ ರಾಷ್ಟ್ರೀಯ ಊಟವಾಗಿದೆ. ನನಗಂತೂ ಬಿರಿಯಾನಿ ಎಂದರೆ ಬಹಳ ಇಷ್ಟ ಎಂದು ಕೊಂಡಾಡಿದ್ದಾರೆ.

ಜಪಾನಿನಲ್ಲಿ ‘ಆರ್​ಆರ್​ಆರ್’ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ. ರಾಮ್ ಚರಣ್ ಹಾಗೂ ಇತರರು ಜಪಾನ್​ಗೆ ತೆರಳಿ ತಮ್ಮ ಸಿನಿಮಾದ ಪ್ರಚಾರ ಮಾಡಿದ್ದರು. ಅದಕ್ಕೆ ತಕ್ಕಂತೆ ಜಪಾನ್​ನಲ್ಲಿ ಆರ್​ಆರ್​ಆರ್ ಸಿನಿಮಾ ಸೂಪರ್ ಹಿಟ್ ಆಯಿತು. ಆರ್​ಆರ್​ಆರ್ ಮಾತ್ರವೇ ಅಲ್ಲದೆ ‘ಕೆಜಿಎಫ್ 2’ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಒಳ್ಳೆಯ ಮೊತ್ತವನ್ನು ಜಪಾನ್​ ದೇಶದಲ್ಲಿ ‘ಕೆಜಿಎಫ್ 2’ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ