‘ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೊಡಿ’; ಕೋರ್ಟ್​ನಲ್ಲಿ ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ

ಜಯಂ ರವಿ ಮತ್ತು ಅವರ ಪತ್ನಿ ಆರತಿ ಅವರ ವಿಚ್ಛೇದನ ಪ್ರಕ್ರಿಯೆ ಚುರುಕಾಗಿದೆ. ಆರತಿ ಅವರು ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶವನ್ನು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೇ 21 ರಂದು ಇಬ್ಬರೂ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರಾಗಿದ್ದು, ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

‘ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೊಡಿ’; ಕೋರ್ಟ್​ನಲ್ಲಿ ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ
ಜಯಮ್ ರವಿ

Updated on: May 22, 2025 | 7:35 AM

ಇತ್ತೀಚೆಗೆ ಜಯಮ್ ರವಿ (Jayam Ravi) ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು. ನನಗೆ ಈ ವಿಚಾರ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಎಡೆ ಮಾಡಿಕೊಟ್ಟರು. ಈಗ ಫ್ಯಾಮಿಲಿ ಕೋರ್ಟ್​ನಲ್ಲಿ ಇಬ್ಬರ ವಿಚ್ಛೇದನಕ್ಕೆ ಶೀಘ್ರವೇ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲ, ಆರತಿ (Arati Ravi) ಅವರು ಜಯಮ್ ರವಿ ಬಳಿ ತಿಂಗಳಿಗೆ 40 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟ ಬಗ್ಗೆಯೂ ವರದಿ ಆಗಿದೆ. ಈ ವಿಚಾರ ಸಾಕಷ್ಟು ಶಾಕಿಂಗ್ ಎನಿಸಿದೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ವಿಚ್ಛೇದನ ಪಡೆಯುತ್ತಾರೆ ಎಂದಾಗ ಅವರು ಮಾಜಿ ಪತ್ನಿಯರಿಗೆ ಎಷ್ಟು ಜೀವನಾಂಶ ನೀಡಿದರು ಎನ್ನುವ ವಿಚಾರ ಚರ್ಚೆ ಆಗುತ್ತದೆ. ಇತ್ತೀಚೆಗೆ ಕ್ರಿಕೆಟರ್ ಯಜುವೇಂದ್ರ ಚಹಾಲ್ ಬಳಿ ಡ್ಯಾನ್ಸರ್ ಧನಶ್ರೀ ವರ್ಮಾ ಅವರು 4.75 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದು ಸುದ್ದಿ ಆಗಿತ್ತು. ಈಗ ಜಯಮ್ ರವಿ ಅವರ ಸರದಿ.

ಮೇ 21ರಂದು ಜಯಮ್ ರವಿ ಹಾಗೂ ಆರತಿ ಚೆನ್ನೈನಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಿ ಹಾಕಿದ್ದಾರೆ. ಮತ್ತೆ ಸಂಬಂಧವನ್ನು ಸರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಪರಸ್ಪರ ವಿಚ್ಛೇದನ ಕೊಡಲು ಇಬ್ಬರೂ ಒಪ್ಪಿದ್ದಾರೆ. ಈ ವೇಳೆ ಆರತಿ ಅವರು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಆರತಿ ಆಗ್ರಹಿಸಿದ್ದಾರೆ. ಅಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿ ಆಗಲಿದೆ.

ಇದನ್ನೂ ಓದಿ
‘ಸೀತಾ ರಾಮ’ಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ
3.5 ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಇದನ್ನೂ ಓದಿ: ‘ಇದು ರಾಜಿ ಸಂಧಾನ ಮಾಡಿಕೊಳ್ಳುವವರ ಲಕ್ಷಣವೇ?’ ಬೀದಿಗೆ ಬಂತು ಜಯಂ-ಆರತಿ ಜಗಳ

ಜೀವನಾಂಶದ ವಿಚಾರವನ್ನು ರವಿ ಎದುರು ಕೋರ್ಟ್ ಇಟ್ಟಿದ್ದು, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ. ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ನೀಡೋದು ನಿಜಕ್ಕೂ ಚಾಲೆಂಜಿಂಗ್. ಹೀಗಾಗಿ, ರವಿ ಅವರು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರವಿ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಸುತ್ತಾಡುತ್ತಿದ್ದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.