ಪಠಾಣ್(pathan) ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು . ಮಸ್ತ್ ಆ್ಯಕ್ಷನ್ನೊಂದಿಗೆ ಸಿಕ್ಸ್ ಪ್ಯಾಕ್ ಬಾಡಿಯೊಂದಿಗೆ ಶಾರುಖ್ ಖಾನ್(shahrukh khan) ಕಾಣಿಸಿಕೊಂಡಿದ್ದಾರೆ.ಈ ಚಿತ್ರದ ಮೂಲಕ ಶಾರುಖ್ ಒಳ್ಳೆಯ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಶಾರುಖ್ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಸಿನಿಮಾ ಪಾತ್ರಗಳ ಬಗ್ಗೆ ಮಾತನಾಡುತ್ತಾ ನಿರ್ದೇಶಕ ಸಿದ್ಧಾರ್ಥ ಆನಂದ್ ‘ಪಠಾಣ್ಗೆ ಸಮಾನವಾದ ಎತ್ತರದ ವಿಲನ್ ಬೇಕಾಗಿತ್ತು ಅದಕ್ಕೆ ಸೂಟ್ ಆಗುವಂತಹ ವಿಲನ್ ಜಾನ್ ಅಬ್ರಹಾಂ‘(john abraham)ನನ್ನು ತಲೆಯಲ್ಲಿಟ್ಟುಕೊಂಡು ವಿಲನ್ ಪಾತ್ರವನ್ನ ಬರೆಯಲಾಗಿದೆ ಎಂದಿದ್ದಾರೆ.
ಪಠಾಣ್ ಚಿತ್ರಕ್ಕೆ ವಿಲನ್ ರೋಲ್ಗಾಗಿ ಜಾನ್ ಅಬ್ರಹಾಂನನ್ನು ತೆಗೆದುಕೊಳ್ಳುವಾಗ ಜನರು ಜಾನ್ಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಸಿನಿಮಾದಲ್ಲಿ ಅವರಿಬ್ಬರ ಫೈಟ್ ಸಿಕ್ವೇನ್ಸ್ ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು ಪ್ರೇಕ್ಷಕರಿಗೆ ರೋಮಾಂಚಕವಾಗಲಿದೆ ಎಂದಿದ್ದಾರೆ. ಜನವರಿ 25 ರಂದು ಪಠಾಣ್ ಸಿನಿಮಾವು ರಿಲೀಸ್ ಆಗುತ್ತಿದೆ. ಈ ಚಿತ್ರವು ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರುವಾಗಿದೆ.
ಇನ್ನು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರ 4ನೇ ಚಿತ್ರ ಇದಾಗಿದೆ. ದೀಪಿಕಾ 2007 ರಲ್ಲಿ ಶಾರುಖ್ ಜೊತೆಯಾಗಿ ‘ಓಂ ಶಾಂತಿ ಓಂ‘ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಇದಾದ ಮೇಲೆ ‘ಹ್ಯಾಪಿ ನ್ಯೂ ಇಯರ್‘ ಹಾಗೂ ‘ಚೆನ್ನೈ ಎಕ್ಸ್ಪ್ರೆಸ್‘ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದು ಎಲ್ಲಾ 3 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದವು, ಇನ್ನು ಜಾನ್ ಅಬ್ರಹಾಂ ಇದೇ ಮೊದಲ ಬಾರಿಗೆ ಶಾರುಖ್ ಖಾನ್ನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಹೆಚ್ಚಿನ ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ