Shankar Nag: ಸ್ಯಾಂಡಲ್ವುಡ್ ಸಾಧನೆಯನ್ನು ಹೆಮ್ಮೆಯಿಂದ ನೋಡ್ತಿರುವ ಶಂಕರ್ ನಾಗ್; ಇದು ‘ಅಬ ಜಬ ದಬ’ ವಿಶೇಷ
Aba Jaba Daba | Shankar Nag Birthday: ‘ಅಬ ಜಬ ದಬ’ ಚಿತ್ರದಲ್ಲಿ ಹಲವು ವಿಶೇಷಗಳು ಇರಲಿವೆ. ಎಲ್ಲರ ನೆಚ್ಚಿನ ಶಂಕರ್ ನಾಗ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಟ ಶಂಕರ್ ನಾಗ್ (Shankar Nag) ಅವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯುವಂತಿಲ್ಲ. ಕಡಿಮೆ ಸಮಯದಲ್ಲೇ ಅವರು ಮಾಡಿದ ಸಾಧನೆ ಅಪಾರ. ಕರುನಾಡು ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಅವರು ಕಂಡಿದ್ದು ಕನಸುಗಳಿಗೆ ಲೆಕ್ಕವಿಲ್ಲ. ಆ ಪೈಕಿ ಕೆಲವು ಕನಸುಗಳು ನನಸಾಗಿವೆ. ಸ್ಯಾಂಡಲ್ವುಡ್ (Sandalwood) ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಒಂದು ವೇಳೆ ಇಂದು ಶಂಕರ್ ನಾಗ್ ಅವರು ಇದ್ದಿದ್ದರೆ ಅವರು ಹೆಮ್ಮೆಯಿಂದ ಸ್ಯಾಂಡಲ್ವುಡ್ ಅನ್ನು ನೋಡುತ್ತಿದ್ದರು. ಆ ರೀತಿಯ ಕಲ್ಪನೆಯಲ್ಲಿ ‘ಅಬ ಜಬ ದಬ’ (Aba Jaba Daba) ಚಿತ್ರದ ಪೋಸ್ಟರ್ ಮೂಡಿಬಂದಿದೆ. ಇಂದು (ನ.9) ಶಂಕರ್ ನಾಗ್ ಜನ್ಮದಿನ. ಆ ಪ್ರಯುಕ್ತ ಈ ವಿಶೇಷ ಪೋಸ್ಟರ್ ಹಂಚಿಕೊಳ್ಳಲಾಗಿದೆ. ‘ಅಬ ಜಬ ದಬ’ ಚಿತ್ರದಲ್ಲಿ ಶಂಕರ್ ನಾಗ್ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಚಿತ್ರತಂಡ ಸಖತ್ ನಿರೀಕ್ಷೆ ಹುಟ್ಟುಹಾಕಿದೆ.
ಶೀರ್ಷಿಕೆಯ ಕಾರಣದಿಂದಲೇ ‘ಅಬ ಜಬ ದಬ’ ಚಿತ್ರ ಗಮನ ಸೆಳೆಯುತ್ತಿದೆ. ಎಸ್. ರಾಮ್ ಪ್ರೊಡ್ಯೂಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೇಕಡ 80ರಷ್ಟು ಶೂಟಿಂಗ್ ಮುಗಿದಿದೆ. ಇನ್ನು 2 ಹಾಡು ಹಾಗೂ ಒಂದು ಸಾಹಸ ದೃಶ್ಯವನ್ನು ಶೀಘ್ರದಲ್ಲೇ ಚಿತ್ರೀಕರಿಸಲಾಗುವುದು.
‘ಅಬ ಜಬ ದಬ’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರಲಿವೆ. ಎಲ್ಲರ ನೆಚ್ಚಿನ ಶಂಕರ್ ನಾಗ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದು ಹೇಗೆ ಎಂಬುದು ಮಾತ್ರ ಇನ್ನೂ ಬಹಿರಂಗ ಆಗಿಲ್ಲ. ‘ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸಗಳು ಪ್ರಾರಂಭ ಆಗಿದೆ. ಮುಂದಿನ ವರ್ಷ ನಮ್ಮ ಶಂಕರಣ್ಣನನ್ನು ತೆರೆ ಮೇಲೆ ನೋಡಿ ಆನಂಧಿಸಬಹುದು’ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
Best wishes to team #Abajabadaba and happy birthday to our #Shankaranna ❤️@RjMayuraa @AmbarPruthvi pic.twitter.com/Kkp6GoaaVo
— Dhananjaya (@Dhananjayaka) November 9, 2022
ಈ ಸಿನಿಮಾದಲ್ಲಿ ಪೃಥ್ವಿ ಅಂಬರ್, ಅಂಕಿತಾ ಅಮರ್, ಸಂಗೀತಾ ಭಟ್, ಊರ್ವಶಿ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕ ಮಯೂರ ರಾಘವೇಂದ್ರ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅನಂತ ಕೃಷ್ಣ ಅವರು ಬಂಡವಾಳ ಹೂಡುತ್ತಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ, ಸತೀಶ್ ರಘುನಾಥನ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.