ಅನು ಸಿರಿಮನೆ ಬಗ್ಗೆ ಸಂಜು ತೋರಿದ ಕಾಳಜಿ ನೋಡಿ ಶಾರದಾದೇವಿಗೆ ಮೂಡಿತು ಅನುಮಾನ

| Updated By: ರಾಜೇಶ್ ದುಗ್ಗುಮನೆ

Updated on: Oct 25, 2022 | 4:35 PM

ಆರ್ಯವರ್ಧನ್ ಸಹೋದರ ಹರ್ಷವರ್ಧನ್ ಅವರು ಸಂಜುನ ತುಂಬಾ ಹತ್ತಿರದಿಂದ ನೋಡಿದ್ದಾನೆ. ಆರ್ಯವರ್ಧನ್​ಗೆ ಪದೇಪದೇ ಹರ್ಷನನ್ನು ನೆನಪು ಮಾಡುತ್ತಿದ್ದಾನೆ ಸಂಜು. ಈ ಬಗ್ಗೆ ಸಂಜು ಬಳಿ ಮಾತನಾಡಿಕೊಂಡಿದ್ದಾನೆ.

ಅನು ಸಿರಿಮನೆ ಬಗ್ಗೆ ಸಂಜು ತೋರಿದ ಕಾಳಜಿ ನೋಡಿ ಶಾರದಾದೇವಿಗೆ ಮೂಡಿತು ಅನುಮಾನ
ಆರ್ಯವರ್ಧನ್-ಅನು
Follow us on

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ತುಂಬಾನೇ ಪ್ರಮುಖವಾಗಿದೆ. ಈಗ ಪಾತ್ರಧಾರಿ ಬದಲಾಗಿದ್ದಾರೆ. ಈ ಮೊದಲು ಅನಿರುದ್ಧ ಜತ್ಕರ್ ಅವರು ಮಾಡುತ್ತಿದ್ದ ಪಾತ್ರವನ್ನು ಹರೀಶ್ ರಾಜ್ (Hareesh Raj) ಅವರು ಮಾಡುತ್ತಿದ್ದಾರೆ. ನಿಧಾನವಾಗಿ ವೀಕ್ಷಕರು ಹೊಸ ಪಾತ್ರಧಾರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಆರ್ಯವರ್ಧನ್​ನ ಸಂಜು ಎಂದು ಪರಿಚಯಿಸಲಾಗಿದೆ. ಅಚ್ಚರಿ ಎಂದರೆ ಸಂಜು ನೋಡಿದ ಎಲ್ಲರಿಗೂ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಹೀಗೇಕೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಆರ್ಯವರ್ಧನ್​ಗೆ ಅಪಘಾತವಾಯಿತು ಎಂದು ತೋರಿಸಲಾಗಿದೆ. ಆತನಿಗೆ ನೆನಪೆಲ್ಲವೂ ಮರೆತೇ ಹೋಗಿದೆ. ಪ್ಲಾಸ್ಟಿಕ್ ಸರ್ಜರಿ ಬದಲಾದ್ದರಿಂದ ಮುಖಚರ್ಯೆ ಬದಲಾಗಿದೆ. ಸಂಜು ಆಗಿ ಎಲ್ಲರಿಗೂ ಪರಿಚಯಿಸಲಾಗಿದೆ. ಸಂಜುಗೆ ತಾನು ಯಾರು ಎಂಬ ವಿಚಾರವನ್ನು ರಿವೀಲ್ ಮಾಡಿಲ್ಲ. ಆತನಿಗೆ ನಿಧಾನವಾಗಿ ನೆನಪು ಮರಳುತ್ತಿದೆ. ಆತ ಆರ್ಯವರ್ಧನ್​ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾನೆ. ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಹರ್ಷನಿಗೆ ನೆನಪಾದ ಆರ್ಯವರ್ಧನ್

ಇದನ್ನೂ ಓದಿ
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಆರ್ಯವರ್ಧನ್ ಸಹೋದರ ಹರ್ಷವರ್ಧನ್ ಅವರು ಸಂಜುನ ತುಂಬಾ ಹತ್ತಿರದಿಂದ ನೋಡಿದ್ದಾನೆ. ಆರ್ಯವರ್ಧನ್​ಗೆ ಪದೇಪದೇ ಹರ್ಷನನ್ನು ನೆನಪು ಮಾಡುತ್ತಿದ್ದಾನೆ ಸಂಜು. ಈ ಬಗ್ಗೆ ಸಂಜು ಬಳಿ ಮಾತನಾಡಿಕೊಂಡಿದ್ದಾನೆ. ‘ನನ್ನ ಲೈಫ್​ಗೆ ಬಂದಿದ್ದಕ್ಕೆ ಥ್ಯಾಂಕ್ಸ್​. ದಾದಾ ನನ್ನ ಶಕ್ತಿ ಹಾಗೂ ವೀಕ್​ನೆಸ್ ಎರಡೂ ಆಗಿದ್ದರು. ಅವರು ಇಲ್ಲೆ ಎಲ್ಲೋ ಇದ್ದಾರೆ ಎಂಬ ಫೀಲ್ ಬರುತ್ತಿದೆ. ನನ್ನ ನಂಬಿಕೆನ ನುಚ್ಚು ನೂರು ಮಾಡಿದ ವ್ಯಕ್ತಿಗಳಲ್ಲಿ ಅವರು ಮೊದಲಿಗರು. ಆ ನೋವನ್ನು ನೀವು ಮರೆಸ್ತಾ ಇದೀರಿ. ಧನ್ಯವಾದ ಬ್ರದರ್’ ಎಂದಿದ್ದಾರೆ ಹರ್ಷ.

‘ನಿಮ್ಮಿಂದ ನನಗೆ ಆ ನಂಬಿಕೆ ಮರಳಿ ಸಿಗುತ್ತಿದೆ’ ಎಂದು ಹೇಳುವ ಮೂಲಕ ಹರ್ಷ ಖುಷಿಪಟ್ಟಿದ್ದಾನೆ. ಈ ಮಾತನ್ನು ಕೇಳಿ ಸಂಜು ಕೂಡ ಖುಷಿಯಾಗಿದ್ದಾನೆ. ಸಂಜು ತಾನು ಪದೇಪದೇ ಸ್ಟ್ರಾಂಗ್ ಎಂಬುದನ್ನು ಪ್ರೂವ್ ಮಾಡುತ್ತಿದ್ದಾನೆ. ಕಚೇರಿಯಲ್ಲಿ 22 ವರ್ಷಗಳ ಲೆಕ್ಕವನ್ನು ಕೇವಲ ಒಂದೇ ಸಂಜು ದಿನದಲ್ಲಿ ಸಂಜು ನೋಡಿ ಮುಗಿಸಿದ್ದ. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಅದು ಹೇಗೆ ಸಾಧ್ಯ ಎಂದು ಎಲ್ಲರೂ ಅಚ್ಚರಿ ಹೊರಹಾಕಿದ್ದರು. ಆದರೆ, ಹರ್ಷ ಮಾತ್ರ ಸಂಜುನ ಹೊಗಳಿದ್ದ. ಇದು ನಿಜಕ್ಕೂ ಗ್ರೇಟ್ ಎಂದು ಮೆಚ್ಚುಗೆ ಸೂಚಿಸಿದ್ದ.

ಶಾರದಾ ದೇವಿಗೆ ಮೂಡಿದೆ ಅನುಮಾನ

ಸಂಜು ನಡೆ ಶಾರದಾ ದೇವಿಗೆ ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಸಂಜು ಕಚೇರಿಯಿಂದ ಬಂದವನೇ ಅನು ಬಗ್ಗೆ ಶಾರದಾ ದೇವಿ ಬಳಿ ಕೇಳಿದ್ದಾನೆ. ‘ಕಚೇರಿಗೆ ಹೋಗಿದ್ದೆ. ಅನು ಅವರು ಬಂದಿದ್ದರು. ಅವರು ಸೇಫ್ ಆಗಿ ಮನೆ ತಲುಪಿದರೋ ಅಥವಾ ಇಲ್ಲವೋ ಎಂಬುದು ನನಗೆ ಗೊತ್ತಾಗಿಲ್ಲ. ನನ್ನ ಬಳಿ ಮೊಬೈಲ್ ಇಲ್ಲ. ಒಂದೊಮ್ಮೆ ಇದ್ದಿದ್ದರೆ ನಾನೇ ಕೇಳುತ್ತಿದ್ದೆ’ ಎಂಬ ಮಾತನ್ನು ಸಂಜು ಹೇಳಿದ್ದಾನೆ. ಇದನ್ನು ಕೇಳಿ ಶಾರದಾ ದೇವಿಗೆ ಅಚ್ಚರಿ ಆಗಿದೆ. ‘ಎಲ್ಲರೂ ಅನು ಕಚೇರಿಗೆ ಬಂದ ವಿಚಾರ ಮಾತ್ರ ಹೇಳಿದರು. ಆದರೆ ಯಾರೊಬ್ಬರೂ ಅವಳು ಮನೆಗೆ ಹೋಗಿ ತಲುಪಿದ ಬಗ್ಗೆ ಕೇಳಿಲ್ಲ. ಸಂಜುಗೆ ಮಾತ್ರ ಅನು ಬಗ್ಗೆ ಎಂತಹ ಕಾಳಜಿ’ ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದಾಳೆ.

ಬದಲಾಯ್ತು ಜೊತೆ ಜೊತೆಯಲಿ ಸಮಯ

‘ಜೊತೆ ಜೊತೆಯಲಿ’ ಧಾರಾವಾಹಿ ಇಷ್ಟು ದಿನ ರಾತ್ರಿ 8.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. ಆದರೆ, ಈಗ ಸಮಯ ಬದಲಾಗಿದೆ. ಅಕ್ಟೋಬರ್ 31ರಿಂದ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣಲಿದೆ. ಈ ಬಗ್ಗೆ ವಾಹಿನಿಯವರು ಹಾಗೂ ಧಾರಾವಾಹಿ ತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಇನ್ಮುಂದೆ ಬದಲಾದ ಸಮಯದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರ ಕಾಣಲಿದೆ. ನಿಮ್ಮ ಬೆಂಬಲ ಹೀಗೆಯೇ ಮುಂದುವರಿಯಲಿ’ ಎಂದು ಮೇಘಾ ಶೆಟ್ಟಿ ಕೋರಿದ್ದಾರೆ.

ಶ್ರೀಲಕ್ಷ್ಮಿ ಎಚ್.

Published On - 7:00 am, Tue, 25 October 22