ತಮಿಳು ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ (Jyothika) ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಿನಿಮಾ ಕೆಲಸಗಳ ಜೊತೆ ವೈಯಕ್ತಿಕ ಜೀವನಕ್ಕೂ ಸಾಕಷ್ಟು ಸಮಯ ನೀಡುತ್ತಾರೆ. ಈ ದಂಪತಿ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿಯನ್ನು ಕೆಲವು ಕಿಡಿಗೇಡಿಗಳು ಹಬ್ಬಿಸಿದ್ದರು. ಇದಕ್ಕೆ ಇಬ್ಬರೂ ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ. ಇಬ್ಬರೂ ವಿದೇಶ ಪ್ರಯಾಣ ಮಾಡಿದ್ದಾರೆ. ಅಲ್ಲಿ ಕಳೆದ ಸುಮಧುರ ಕ್ಷಣಗಳ ವಿಡಿಯೋ ಅನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ದಂಪತಿ ಹೀಗೆಯೇ ಸುಖವಾಗಿ ಸಂಸಾರ ನಡೆಸಿಕೊಂಡು ಹೋಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
ಜ್ಯೋತಿಕಾ ಹಾಗೂ ಸೂರ್ಯ ಫಿನ್ಲ್ಯಾಂಡ್ಗೆ ಪ್ರವಾಸ ತೆರಳಿದ್ದಾರೆ. ಅಲ್ಲಿ ಹಿಮದಲ್ಲಿ ಖುಷಿಖುಷಿಯಿಂದ ಸಮಯ ಕಳೆದಿದ್ದಾರೆ. ಜನವರಿ ತಿಂಗಳಲ್ಲಿ ಈ ದಂಪತಿ ಅಲ್ಲಿಗೆ ತೆರಳಿದ್ದರು. ‘ಜೀವನ ಕಾಮನ ಬಿಲ್ಲಿನಂತೆ. ಆ ಬಣ್ಣಗಳನ್ನು ಅನ್ವೇಷಿಸೋಣ. ನನಗೆ ಈಗ ಬಿಳಿ ಬಣ್ಣ ಸಿಕ್ಕಿದೆ’ ಎಂದು ಜ್ಯೋತಿಕಾ ಅವರು ಅಡಿಬರಹ ನೀಡಿದ್ದಾರೆ.
ಜ್ಯೋತಿಕಾ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ಸೂರ್ಯ ಚೆನ್ನೈನಲ್ಲೇ ಇದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಇದನ್ನು ಜ್ಯೋತಿಕಾ ಅಲ್ಲಗಳೆದಿದ್ದರು. ಜ್ಯೋತಿಕಾ ಹಾಗೂ ಸೂರ್ಯ ಮಕ್ಕಳು ಮುಂಬೈನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಜ್ಯೋತಿಕಾ ಇಲ್ಲಿಗೆ ಶಿಫ್ಟ್ ಆಗಿದ್ದಾರೆ. ಸೂರ್ಯ ಕೂಡ ಆಗಾಗ ಮುಂಬೈಗೆ ಭೇಟಿ ನೀಡುತ್ತಾರೆ. ಇದರ ಜೊತೆಗೆ ಜ್ಯೋತಿಕಾ ಹಿಂದಿ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಮುಂಬೈನಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಮೊದಲು ಸೂರ್ಯ ಅವರು ಹಲವು ಬಾರಿ ಮುಂಬೈಗೆ ತೆರಳಿದ್ದರು. ಈ ವೇಳೆಯೂ ಕೆಲವು ವದಂತಿ ಹುಟ್ಟಿತ್ತು. ಸೂರ್ಯ ಅವರು ಮುಂಬೈನಲ್ಲೇ ಸೆಟಲ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಸೂರ್ಯ ಅಲ್ಲಗಳೆದಿದ್ದರು. ಮಕ್ಕಳಿಗಾಗಿ ಮುಂಬೈಗೆ ತೆರಳುತ್ತಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದರು.
ಸೂರ್ಯ ಅವರು ಕಾಲಿವುಡ್ನ ಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಶಿವ ನಿರ್ದೇಶನದ ‘ಕಂಗುವ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸೂರ್ಯ ಅವರ ಲುಕ್ ಗಮನ ಸೆಳೆದಿದೆ. ಹಲವು ಗೆಟಪ್ನಲ್ಲಿ ಅವರು ಪ್ರೇಕ್ಷಕರ ಎದುರು ಬರಲಿದ್ದಾರೆ. ಇದರ ಜೊತೆ ‘ಸೂರರೈ ಪೋಟ್ರು’ ನಿರ್ದೇಶಕಿ ಸುಧಾ ಕೊಂಗರ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಸೂರ್ಯ ಅವರ ಪತ್ನಿ, ಖ್ಯಾತ ನಟಿ ಜ್ಯೋತಿಕಾಗೆ ಈಗ ವಯಸ್ಸು ಎಷ್ಟು?
ಜ್ಯೋತಿಕಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಮಮ್ಮೂಟಿ ನಟನೆಯ ‘ಕಾದಲ್’ ಸಿನಿಮಾದಲ್ಲಿ ನಟಿಸಿ ಅವರು ಗಮನ ಸೆಳೆದಿದ್ದರು. ಅವರು ಹಿಂದಿಯಲ್ಲಿ ‘ಶೈತಾನ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Thu, 1 February 24