‘ಕಾಟೇರ’ ಸಿನಿಮಾ (Kaatera Movie) ಅಬ್ಬರದ ಕಲೆಕ್ಷನ್ ಮಾಡಿದೆ. ದರ್ಶನ್ ಅವರ ಪವರ್ಫುಲ್ ಆ್ಯಕ್ಟಿಂಗ್ ನೊಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರ ರಿಲೀಸ್ ಆಗಿ ಮೂರು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಸಿನಿಮಾದ ಗಳಿಕೆ ತಗ್ಗುತ್ತಿಲ್ಲ. ಅಚ್ಚರಿ ವಿಚಾರ ಏನೆಂದರೆ ಸಂಕ್ರಾಂತಿ ಪ್ರಯುಕ್ತ ‘ಕಾಟೇರ’ ಸಿನಿಮಾಗೆ ಮಧ್ಯರಾತ್ರಿ ಎರಡು ಗಂಟೆ ಶೋ ಇಡಲಾಗಿತ್ತು. ಇದು ಕೂಡ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈ ಬಗ್ಗೆ ಫ್ಯಾನ್ ಪೇಜ್ಗಳಲ್ಲಿ ಸುದ್ದಿ ಹರಿದಾಡುತ್ತಿದೆ.
‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಒಂದು ವಾರ ಮೊದಲು ರಿಲೀಸ್ ಆದ ‘ಸಲಾರ್’ ಹಾಗೂ ‘ಡಂಕಿ’ ಸಿನಿಮಾಗಳ ಅಬ್ಬರದ ನಡುವೆಯೂ ‘ಕಾಟೇರ’ ಉತ್ತಮ ಗಳಿಕೆ ಮಾಡಿತು. ಈಗಾಗಲೇ ಸಿನಿಮಾದ ಗಳಿಕೆ 200 ಕೋಟಿ ರೂಪಾಯಿ ಸಮೀಪಿಸಿದೆ. ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ನೋಡಿದ್ದಾರೆ. ‘ಸಂಕ್ರಾಂತಿಗೆ ಮತ್ತೊಮ್ಮೆ ಕಾಟೇರ’ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.
ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ಇತ್ತೀಚೆಗೆ ಮಧ್ಯರಾತ್ರಿ 2 ಗಂಟೆಗೆ ‘ಕಾಟೇರ’ ಶೋ ಪ್ರದರ್ಶಿಸಲಾಗಿದೆ. ಸಾಮಾನ್ಯವಾಗಿ ರಿಲೀಸ್ ದಿನ ಈ ರೀತಿ ಶೋ ಇಟ್ಟರೆ ಫ್ಯಾನ್ಸ್ ಬಂದು ವೀಕ್ಷಿಸುತ್ತಾರೆ. ಆದರೆ, ಸಿನಿಮಾ ರಿಲೀಸ್ ಆಗಿ 18 ದಿನ ಕಳೆದ ಬಳಿಕವೂ ಮಧ್ಯರಾತ್ರಿ ಶೋ ಹೌಸ್ ಫುಲ್ ಆಗಿದೆ ಅನ್ನೋದು ವಿಶೇಷ. ಇದು ‘ಕಾಟೇರ’ ಸಿನಿಮಾದ ಕ್ರೇಜ್ ತೋರಿಸುತ್ತದೆ.
Shahapur night 2AM show house Full 🔥🥵💥😱#KaateraEnorMassBlockBuster #KaateraStormHits150Cr pic.twitter.com/fbfUwkglGN
— DBOSS TREND™ (@DBoss_trend7999) January 16, 2024
ಇದನ್ನೂ ಓದಿ: ‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್ ಬಗ್ಗೆ ರಾಕ್ಲೈನ್ ಮೊದಲ ಪ್ರತಿಕ್ರಿಯೆ
‘ಕಾಟೇರ’ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ದರ್ಶನ್ಗೆ ಮಾಲಾಶ್ರೀ ಮಗಳು ಆರಾಧನಾ ರಾಮ್ ಜೊತೆಯಾಗಿದ್ದಾರೆ. ಅಚ್ಯುತ್ ಕುಮಾರ್, ಜಗಪತಿ ಬಾಬು, ವೈಜನಾಥ್ ಬಿರಾದಾರ್, ಶ್ರುತಿ ಸೇರಿ ಅನೇಕರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ರೆಟ್ರೋ ಕಾಲದ ಕಥೆಯನ್ನು ತರುಣ್ ಉತ್ತಮವಾಗಿ ತೆರೆಮೇಲೆ ತಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ