ಬಾಲಿವುಡ್​ನಲ್ಲಿ ಧೂಳೆಬ್ಬಿಸಲು ರೆಡಿಯಾದ ‘ಕಬ್ಜ’; ಹಿಂದಿ ವರ್ಷನ್ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2022 | 6:47 PM

ನಟ ಉಪೇಂದ್ರ ಅಭಿನಯನದ 'ಕಬ್ಜ' ಸಿನಿಮಾದ ಹಿಂದಿ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಈ ಕುರಿತಾಗಿ ನಿರ್ದೇಶಕ ಆರ್​. ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಧೂಳೆಬ್ಬಿಸಲು ರೆಡಿಯಾದ ಕಬ್ಜ; ಹಿಂದಿ ವರ್ಷನ್ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್
Kabza
Follow us on

ನಿರ್ದೇಶಕ ಆರ್​.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ (Kabza Movie) ಒಂದಿಲ್ಲೊಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಈಗ ಅದೇ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಬಂದಿದೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಸೇರಿ ಒಟ್ಟು 7 ಭಾಷೆಗಳಲ್ಲಿ ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ‘ಕಬ್ಜ’ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಸಿನಿಮಾದ ಮೇಕಿಂಗ್ ಎಲ್ಲರ ಗಮನ ಸೆಳೆದಿತ್ತು. ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಎರಡು ಕೋಟಿ ವೀವ್ಸ್​ ಪಡೆದುಕೊಂಡಿತ್ತು. ಈಗ ಹಿಂದಿ ಭಾಷೆಯ ಸರದಿಯಿದ್ದು, ನಾಳೆ ಹಿಂದಿಯಲ್ಲಿ ‘ಕಬ್ಜ’ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತಾಗಿ ನಿರ್ದೇಶಕ ಆರ್​.ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.

ರೆಟ್ರೋ ಕಾಲದ ಭೂಗತ ಲೋಕದ ಕಥೆಯನ್ನು ‘ಕಬ್ಜ’ ಸಿನಿಮಾ ಹೊಂದಿರಲಿದೆ. ‘ಕಬ್ಜ’ ಸಿನಿಮಾದ ಹಿಂದಿ ಟೀಸರ್ ಬಿಡುಗಡೆ ಕುರಿತಾಗಿ ನಿರ್ದೇಶಕ ಮತ್ತು ನಿರ್ಮಾಪಕರಾದ ಆರ್​.ಚಂದ್ರು ಮಾಹಿತಿ ನೀಡಿದ್ದಾರೆ. ಮಾಫಿಯಾ ಹಾಗೂ ಭೂಗತ ಲೋಕದ ಮತ್ತು ಆ್ಯಕ್ಷನ್ ಪ್ಯಾಕ್ಡ್ ‘ಕಬ್ಜ’ ಟೀಸರ್ ಹಿಂದಿ ಭಾಷೆಯಲ್ಲಿ ನಾಳೆ(ಡಿ.1) ಬಿಡುಗಡೆಯಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರ್​.ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.

‘ಕಬ್ಜ’ ಚಿತ್ರ ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಇತ್ತೀಚೆಗೆ ‘ಕಬ್ಜ’ ಹಿಂದಿ ವರ್ಷನ್​ಗೆ ಸಾಕಷ್ಟು ಬೇಡಿಕೆ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್​ ಪಂಡಿತ್​ ಮುಂದೆ ಬಂದಿದ್ದು, ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕುಗಳು ಅವರ ಪಾಲಾಗಿವೆ. ‘ಕಬ್ಜ’ ಸಿನಿಮಾದ ಹಿಂದಿ ವಿತರಣೆ ಹಕ್ಕುಗಳನ್ನು ಅವರು ಪಡೆದುಕೊಂಡಿರುವುದರಿಂದ ಬಾಲಿವುಡ್​ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​

ಉಪೇಂದ್ರ ಜೊತೆ ‘ಕಬ್ಜ’ ಚಿತ್ರದಲ್ಲಿ ಕಿಚ್ಚ ಸುದೀಪ್​ ಕೂಡ ಈ ನಟಿಸಿದ್ದು, ಸಹಜವಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ನಾಯಕಿಯಾಗಿ ಶ್ರೀಯಾ ಶರಣ್​ ನಟಿಸಿದ್ದಾರೆ. ಈ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ರಿಲೀಸ್​ ಡೇಟ್​ ಅನೌನ್ಸ್​ ಆಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.