AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಜಲ್​ ಸಂಸಾರದಲ್ಲಿ ಸಹೋದರಿಯ ಸ್ವಾರ್ಥ; ಬಹಿರಂಗವಾಗಿಯೇ ಹೇಳಿಕೊಂಡ ನಟಿ

ಕಾಜಲ್ ಅಗರ್​ವಾಲ್​ ಮತ್ತು ಗೌತಮ್​ ಕಿಚಲು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು ಎಂದು ಕಾಜಲ್​ ಸಹೋದರಿ ನಿಶಾ ಅಗರ್​ವಾಲ್​ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ.

ಕಾಜಲ್​ ಸಂಸಾರದಲ್ಲಿ ಸಹೋದರಿಯ ಸ್ವಾರ್ಥ; ಬಹಿರಂಗವಾಗಿಯೇ ಹೇಳಿಕೊಂಡ ನಟಿ
ಕಾಜಲ್​ ಅಗರ್​ವಾಲ್​, ಗೌತಮ್​ ಕಿಚಲು, ನಿಶಾ
TV9 Web
| Edited By: |

Updated on: Jun 19, 2021 | 1:01 PM

Share

ನಟಿ ಕಾಜಲ್​ ಅಗರ್​ವಾಲ್​ ಅವರು ಬಹುಭಾಷೆಯಲ್ಲಿ ಹೀರೋಯಿನ್​ ಆಗಿ ಮಿಂಚುತ್ತಿರುವಾಗಲೇ ಕಳೆದ ವರ್ಷ ಮದುವೆ ಮಾಡಿಕೊಂಡರು. ಇದು ಅವರ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಮೂಡಿಸಿದ ಸಂಗತಿ. ಗೆಳಯ ಗೌತಮ್​ ಕಿಚಲು ಜೊತೆ ಅವರು ಈಗ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಪತಿ ಒಪ್ಪಿಗೆ ಕೊಟ್ಟರೆ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದು ಕೂಡ ಅನಿರೀಕ್ಷಿತವಾಗಿತ್ತು. ಈಗ ಅವರ ಬಗ್ಗೆ ಸಹೋದರಿ ನಿಶಾ ಅಗರ್​ವಾಲ್ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.

2020ರ ಅಕ್ಟೋಬರ್ 30ರಂದು ಕಾಜಲ್ ಅಗರ್​ವಾಲ್​ ಮತ್ತು ಗೌತಮ್​ ಕಿಚಲು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟರು. ಆದಷ್ಟು ಬೇಗ ಈ ದಂಪತಿ ಮಗು ಮಾಡಿಕೊಳ್ಳಬೇಕು ಎಂದು ಕಾಜಲ್​ ಸಹೋದರಿ ನಿಶಾ ಅಗರ್​ವಾಲ್​ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಾಜಲ್​ ಅಗರ್​ವಾಲ್​ ಮಗು ಮಾಡಿಕೊಳ್ಳಬೇಕು ಎಂದು ನಿಶಾ ಒತ್ತಾಯಿಸುತ್ತಿರುವುದರ ಹಿಂದೆ ಅವರ ಸ್ವಾರ್ಥ ಇದೆ. ‘ಅವಳು ಆದಷ್ಟು ಬೇಗ ಮಗುವಿಗೆ ಜನ್ಮ ನೀಡಲಿ ಎಂದು ನಾನು ಹೇಳುವುದಕ್ಕೆ ಒಂದು ಸ್ವಾರ್ಥದ ಕಾರಣ ಇದೆ. ಅವಳು ಮದುವೆ ಆದ ದಿನದಿಂದಲೂ ನಾನು ಇದನ್ನು ಹೇಳುತ್ತಲೇ ಇದ್ದೇನೆ. ಅವರು ಮಕ್ಕಳು ಪಡೆಯುವುದನ್ನು ವಿಳಂಬ ಮಾಡಿದರೆ ನನ್ನ ಮಗನಿಗೆ ಆಟವಾಡಲು ಯಾರೂ ಸಿಗುವುದಿಲ್ಲ. ಕಾಜಲ್​ ಮಗು ಮತ್ತು ನನ್ನ ಮಗನ ನಡುವೆ ವಯಸ್ಸಿನ ಅಂತರ ಆಗಿಬಿಡುತ್ತದೆ. ಅವನಿಗೆ ಈಗಾಗಲೇ 3 ವರ್ಷ ಆಗಿದೆ. ಈ ದಂಪತಿ ಸ್ವಲ್ಪ ಗಡಿಬಿಡಿ ಮಾಡಬೇಕು’ ಎಂದು ನಿಶಾ ಅಗರ್​ವಾಲ್​ ಹೇಳಿದ್ದಾರೆ.

‘ಅಮ್ಮ.. ನನಗೆ ತಂಗಿ ಅಥವಾ ತಮ್ಮ ಬೇಕು ಎಂದು ನನ್ನ ಮಗ ಇಶಾನ್​ ಹೇಳುತ್ತಿರುತ್ತಾನೆ. ಹೋಗಿ ನಿನ್ನ ಆಂಟಿಗೆ ಮನವೊಲಿಸು ಅಂತ ನಾನು ಅವನಿಗೆ ಹೇಳುತ್ತೇನೆ’ ಎಂದಿದ್ದಾರೆ ನಿಶಾ. ನಿಶಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಕೆಲವು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು 2014ರ ಬಳಿಕ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ:

Kajal Aggarwal: ಪತಿಗಾಗಿ ಚಿತ್ರರಂಗ ತೊರೆಯೋ ನಿರ್ಧಾರಕ್ಕೆ ಬಂದ ಕಾಜಲ್​ ಅಗರ್​ವಾಲ್​

ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ