ಟಾಲಿವುಡ್ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದಾರೆ. ಈ ಗೆಲುವಿಗಾಗಿ ಅನೇಕರು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ನಟಿ ಕಾಜಲ್ ಅಗರ್ವಾಲ್ (Kajal Aggarwal) ಕೂಡ ಬಾಲಯ್ಯ ಅವರಿಗೆ ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾಲಯ್ಯ (Balayya) ಬಗ್ಗೆ ಕಾಜಲ್ ಅಗರ್ವಾಲ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಮಾಡಿರುವ ಕೆಲವರು ಕಟು ಟೀಕೆ ಮಾಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇತ್ತೀಚಿನ ಘಟನೆ.
ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟಿ ಅಂಜಲಿ ಅವರನ್ನು ನಂದಮೂರಿ ಬಾಲಕೃಷ್ಣ ತಳ್ಳಿದ್ದರು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಾಲಯ್ಯ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ತುಂಬ ಜನರು ಕ್ಲಾಸ್ ತೆಗೆದುಕೊಂಡಿದ್ದರು. ಅದರಲ್ಲೂ ಉತ್ತರ ಭಾರತದ ನೆಟ್ಟಿಗರು ತುಂಬಾನೇ ಗರಂ ಆಗಿದ್ದರು. ಈಗ ಕಾಜಲ್ ಅಗರ್ವಾಲ್ ಅವರು ಬಾಲಯ್ಯ ಕುರಿತು ಮಾಡಿರುವ ಪೋಸ್ಟ್ಗೂ ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.
Congratulations #NandamuriBalaKrishna Garu For Landslide Victory, Your Hard Work, Dedication & Vision Have Earned You This Unparalleled Love In Masses.
— Kajal Aggarwal (@MsKajalAggarwal) June 4, 2024
‘ಬಾಲಯ್ಯ ಅವರೇ.. ನಿಮ್ಮ ಅಮೋಘ ಯಶಸ್ಸಿಗೆ ಧನ್ಯವಾದಗಳು. ನಿಮ್ಮ ಪರಿಶ್ರಮ, ಬದ್ಧತೆ, ದೂರದೃಷ್ಟಿಯ ಕಾರಣದಿಂದಾಗಿ ನಿಮಗೆ ಜನರಿಂದ ಈ ಪರಿ ಪ್ರೀತಿ ಸಿಕ್ಕಿದೆ’ ಎಂದು ಕಾಜಲ್ ಅಗರ್ವಾಲ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ವೈರಲ್ ಆಗಿದೆ.
ಇದನ್ನೂ ಓದಿ: ‘ಬಾಲಯ್ಯಗೆ ಧನ್ಯವಾದ’; ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ ನಟಿ ಅಂಜಲಿ
ನಂದಮೂರಿ ಬಾಲಕೃಷ್ಣ ಅವರ ಅಪ್ಪಟ ಅಭಿಮಾನಿಗಳು ಈ ಪೋಸ್ಟ್ಗೆ ಲೈಕ್ ಮಾಡಿದ್ದಾರೆ. ‘ನಮ್ಮ ನಾಯಕನಿಗೆ ಅಭಿನಂದನೆ ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂದು ಕಾಜಲ್ ಪೋಸ್ಟ್ಗೆ ಬಾಲಯ್ಯ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ತಕರಾರು ತೆಗೆದಿದ್ದಾರೆ. ‘ಓಹ್ ಇದು ಆ ಮನುಷ್ಯ ಅಲ್ಲವೇ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಎಂಥ ವ್ಯರ್ಥ’ ಎಂಬ ಕಮೆಂಟ್ ಕೂಡ ಬಂದಿದೆ.
Congratulations On Your Well Deserved Victory @PawanKalyan Garu. Your Tireless Effort & Unwavering Commitment Have Truly Paid off.
— Kajal Aggarwal (@MsKajalAggarwal) June 4, 2024
ಆಂಧ್ರ ಪ್ರದೇಶ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಕೂಡ ಜಯ ಸಾಧಿಸಿದ್ದಾರೆ. ಅವರಿಗೂ ಕಾಜಲ್ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.