Kalki 2898 AD Collection: ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಾ ‘ಕಲ್ಕಿ 2898 ಎಡಿ’ ಸಿನಿಮಾ?

|

Updated on: Jun 26, 2024 | 7:59 PM

ಪ್ರಭಾಸ್​ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದ ಬಜೆಟ್​ ಅಂದಾಜು 600 ಕೋಟಿ ರೂಪಾಯಿ. ಈ ಸಿನಿಮಾದಲ್ಲಿ ಪ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್​ ಮುಂತಾದ ಸ್ಟಾರ್​ ಕಲಾವಿದರ ಸಂಭಾವನೆಗೆ ಸಿಕ್ಕಾಪಟ್ಟೆ ಖರ್ಚಾಗಿದೆ. ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗಬೇಕು ಎಂದರೆ ‘ಕಲ್ಕಿ 2898 ಎಡಿ’ ಸಿನಿಮಾ 1000 ಕೋಟಿ ರೂಪಾಯಿ ಕಮಾಯಿ ಮಾಡಬೇಕು.

Kalki 2898 AD Collection: ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಾ ‘ಕಲ್ಕಿ 2898 ಎಡಿ’ ಸಿನಿಮಾ?
ಕಲ್ಕಿ 2898 ಎಡಿ
Follow us on

ಬಹುನಿರೀಕ್ಷಿತ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್​ 27ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಿಂದ ಬಾಕ್ಸ್​ ಆಫೀಸ್​ನಲ್ಲಿ ಜಾದೂ ಆಗಲಿದೆ ಎಂದು ಬಹುತೇಕರು ಊಹಿಸಿದ್ದಾರೆ. ಆ ಊಹೆ ನಿಜವಾಗುವ ಲಕ್ಷಣಗಳು ಕೂಡ ಗೋಚರಿಸುತ್ತಿವೆ. ಪ್ರಭಾಸ್​ (Prabhas) ಮತ್ತು ದೀಪಿಕಾ ಪಡುಕೋಣೆ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಜೊತೆಗೆ ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್​ ಅವರಂತಹ ಹಿರಿಯ ನಟರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಕಲೆಕ್ಷನ್​ (Kalki 2898 AD Box Office Collection) ಎಷ್ಟಾಗಲಿದೆ ಎಂಬ ಕೌತುಕ ಮೂಡಿದೆ. ಈ ಸಿನಿಮಾ 1000 ಕೋಟಿ ರೂಪಾಯಿ ಕಮಾಯಿ ಮಾಡುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

‘ಕಲ್ಕಿ 2898 ಎಡಿ’ ಸಿನಿಮಾದ ಬಿಡುಗಡೆಗೆ ಕೆಲವು ದಿನಗಳ ಬಾಕಿ ಇರುವಾಗಲೇ ಮುಂಗಡ ಟಿಕೆಟ್​ ಬುಕಿಂಗ್​ ಶುರುವಾಯಿತು. ರಿಲೀಸ್​ಗಿಂತ ಮೊದಲೇ ಈ ಸಿನಿಮಾಗೆ ಪ್ರೇಕ್ಷಕರು ಸಖತ್​ ಆಸಕ್ತಿ ತೋರಿಸಿದ್ದಾರೆ. ಅಂದಾಜು 10 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಮಾರಾಟ ಆಗಿವೆ. ಮೊದಲ ವೀಕೆಂಡ್​ನಲ್ಲಿ ಬಹುತೇಕ ಎಲ್ಲ ಕಡೆಗಳಲ್ಲೂ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುವ ಸಾಧ್ಯತೆ ದಟ್ಟವಾಗಿದೆ.

ಒಂದು ಸಿನಿಮಾ ಈ ಪರಿ ಓಪನಿಂಗ್​ ಪಡೆದುಕೊಳ್ಳುವುದು ನಿಜಕ್ಕೂ ಗಮನಾರ್ಹ ಸಂಗತಿ. ಪ್ರಭಾಸ್​ ಅವರು ನಟಿಸಿದ ಈ ಹಿಂದಿನ ಸಿನಿಮಾಗಳಾದ ‘ಅದಿಪುರುಷ್’, ‘ಸಾಹೋ’, ‘ರಾಧೆ ಶ್ಯಾಮ್​’ ಚಿತ್ರಗಳು ಉತ್ತಮ ಕಲೆಕ್ಷನ್​ ಮಾಡಿರಲಿಲ್ಲ. ಅವುಗಳಿಂದ ಸೊರಗಿದ್ದ ಪ್ರಭಾಸ್​ ವೃತ್ತಿ ಜೀವನಕ್ಕೆ ‘ಸಲಾರ್​’ ಸಿನಿಮಾ ಸ್ವಲ್ಪ ಚೇತರಿಕೆ ನೀಡಿತ್ತು. ಈಗ ‘ಕಲ್ಕಿ 2898 ಎಡಿ’ ಚಿತ್ರದಿಂದ ಮ್ಯಾಜಿಕ್​ ನಡೆಯಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಮೊದಲ ದಿನ (ಜೂನ್​ 27) ‘ಕಲ್ಕಿ 2898 ಎಡಿ’ ಸಿನಿಮಾಗೆ ವಿಶ್ವಾದ್ಯಂತ ಅಂದಾಜು 200 ಕೋಟಿ ರೂಪಾಯಿ ಹರಿದುಬರಲಿದೆ ಎಂದು ಊಹಿಸಲಾಗಿದೆ. ಒಂದು ವೇಳೆ ಮೊದಲ ದಿನ ಪಾಸಿಟಿವ್​ ವಿಮರ್ಶೆ ಸಿಕ್ಕರೆ ಶುಕ್ರವಾರ ಮತ್ತು ವಾರಾಂತ್ಯದಲ್ಲಿ ಅಭೂತಪೂರ್ವ ಪ್ರದರ್ಶನ ಕಾಣಲಿದೆ. ಹಾಗೇನಾದರೂ ಆದರೆ ಮುಂದಿನ ದಿನಗಳಲ್ಲಿ ಈ ಸಿನಿಮಾ ಖಂಡಿತವಾಗಿಯೂ ಸಾವಿರ ಕೋಟಿ ರೂಪಾಯಿ ಕಮಾಯಿ ಮಾಡಲಿದೆ.

ಇದನ್ನೂ ಓದಿ: ಪ್ರಭಾಸ್​ಗೆ ಸೂಪರ್​ ಸಕ್ಸಸ್​ ನೀಡಲಿರುವ ‘ಕಲ್ಕಿ 2898 ಎಡಿ’ ಸಿನಿಮಾ

‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್​ ಅವರು ನಿರ್ದೇಶನ ಮಾಡಿದ್ದಾರೆ. ‘ವೈಜಯಂತಿ ಮೂವೀಸ್​’ ಮೂಲಕ ಅಶ್ವಿನಿ ದತ್​ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಂದಾಜು 600 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಹಾಗಾಗಿ ನಿರ್ಮಾಪಕರಿಗೆ ದೊಡ್ಡ ಲಾಭ ಆಗಬೇಕು ಎಂದರೆ ಸಾವಿರ ಕೋಟಿ ರೂಪಾಯಿ ಗಳಿಸಲೇಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.