Kalki 2898 AD: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಈವೆಂಟ್; ಪ್ರಭಾಸ್ ಬರ್ತಾರಾ?

|

Updated on: May 30, 2024 | 12:15 PM

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣ ಆಗಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡುತ್ತಿದೆ. ಭೈರವ ಹಾಗೂ ಬುಜ್ಜಿಯ ಅನಿಮೇಷನ್ ಝಲಕ್​ನ ತಂಡ ಇಂದು ರಿಲೀಸ್ ಮಾಡಲಿದೆ.

Kalki 2898 AD: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಈವೆಂಟ್; ಪ್ರಭಾಸ್ ಬರ್ತಾರಾ?
ಕಲ್ಕಿ
Follow us on

‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಈ ಚಿತ್ರಕ್ಕೆ ಈವೆಂಟ್​​ಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಇಂದು (ಮೇ 30) ತಂಡ ಬೆಂಗಳೂರಿನಲ್ಲಿ ಈವೆಂಟ್ ಆಯೋಜನೆ ಮಾಡಿದೆ. ಆದರೆ, ಈ ಕಾರ್ಯಕ್ರಮಕ್ಕೆ ಪ್ರಭಾಸ್ ಬರೋದು ಅನುಮಾನ ಎನ್ನಲಾಗುತ್ತಿದೆ. ಅದಕ್ಕೆ ಒಂದು ಕಾರಣವೂ ಇದೆ.

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣ ಆಗಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡುತ್ತಿದೆ. ಭೈರವ ಹಾಗೂ ಬುಜ್ಜಿಯ ಅನಿಮೇಷನ್ ಝಲಕ್​ನ ತಂಡ ಇಂದು ರಿಲೀಸ್ ಮಾಡಲಿದೆ. ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇಂದು ರಿಲೀಸ್ ಆಗೋ ಸಾಧ್ಯತೆ ಇದೆ. ಹೀಗಾಗಿ, ಇಂದು ಬೆಂಗಳೂರಿಗೆ ಪ್ರಭಾಸ್ ಹಾಗೂ ಚಿತ್ರತಂಡ ಬರೋದು ಅನುಮಾನ ಎನ್ನಲಾಗಿದೆ.

ಬೆಂಗಳೂರಿನ ಓರಾಯನ್ ಮಾಲ್​ನಲ್ಲಿ ಈ ಚಿತ್ರದ ಈವೆಂಟ್ ನಡೆಯುತ್ತಿದೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಭಾಸ್ ಹಾಗೂ ಬುಜ್ಜಿ ವಾಹನ ಬೆಂಗಳೂರಿಗೆ ಬರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ.

ಟಾಲಿವುಡ್​ ಭಾಷೆಯ ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆ ಆಗಿದೆ. ಜನರು ಟಾಲಿವುಡ್ ಸ್ಟಾರ್ ನಟರ ಸಿನಿಮಾಗಳನ್ನು ಮುಗಿಬಿದ್ದು ವೀಕ್ಷಿಸುತ್ತಾರೆ. ಹೀಗಾಗಿ, ಈ ಭಾಗದಲ್ಲಿ ಸಿನಿಮಾ ಪ್ರಚಾರ ಮಾಡಲು ತೆಲುಗು ಸಿನಿಮಾಗಳು ಆದ್ಯತೆ ನೀಡುತ್ತವೆ. ಅದೇ ರೀತಿ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಮುಂದೊಂದು ದಿನ ಸಿನಿಮಾ ಮಾಡಲು ಬೆಂಗಳೂರಿಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಏಕಕಾಲಕ್ಕೆ ಮೂರು ಒಟಿಟಿಗಳಿಗೆ ಮಾರಾಟವಾದ ‘ಕಲ್ಕಿ 2898 ಎಡಿ’

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಸೇರಿ ದೊಡ್ಡ ಪಾತ್ರವರ್ಗ ಇದೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ವೈಜಯಂತಿ ಬ್ಯಾನರ್ ಈ ಚಿತ್ರಕ್ಕಾಗಿ 600 ಕೋಟಿ ರೂಪಾಯಿ ಖರ್ಚು ಮಾಡಿದೆ. 6000 ಸಾವಿರ ವರ್ಷಗಳ ಕಥೆಯನ್ನು ಸಿನಿಮಾ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.