AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಸ್ಟಾರ್ ನಟರ ಜೊತೆ ಕೂತು ಸಿನಿಮಾ ನೋಡುವ ಅವಕಾಶ

‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಿ ಈವರೆಗೆ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಗಳಿಕೆಯಲ್ಲಿ ಕೆಲವು ದಾಖಲೆಗಳನ್ನೇ ನಿರ್ಮಿಸಿರುವ ಈ ಸಿನಿಮಾ ಇದೀಗ ವಿಶೇಷ ಶೋ ಒಂದನ್ನು ಆಯೋಜಿಸಿದೆ. ಸಿನಿಮಾದ ಸ್ಟಾರ್ ಗಳೊಟ್ಟಿಗೆ ಕೂತು ಸಿನಿಮಾ ನೋಡುವ ಅವಕಾಶ ದೊರೆಯಲಿದೆ.

‘ಕಲ್ಕಿ 2898 ಎಡಿ’ ಸ್ಟಾರ್ ನಟರ ಜೊತೆ ಕೂತು ಸಿನಿಮಾ ನೋಡುವ ಅವಕಾಶ
ಪ್ರಭಾಸ್
ಮಂಜುನಾಥ ಸಿ.
|

Updated on: Jul 31, 2024 | 11:16 PM

Share

ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿದ್ದ ‘ಕಲ್ಕಿ 2898 ಎಡಿ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಈವರೆಗೆ ಸುಮಾರು 1100 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಕೋಟ್ಯಂತರ ಮಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದರ ನಡುವೆ ಇದೀಗ ಪ್ರೇಕ್ಷಕರಿಗೆ ಹೊಸ ಅವಕಾಶವೊಂದನ್ನು ಚಿತ್ರತಂಡ ನೀಡುತ್ತಿದೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ನಟರೊಟ್ಟಿಗೆ ಸಿನಿಮಾ ನೋಡುವ ಅವಕಾಶವನ್ನು ಒದಗಿಸುತ್ತಿದೆ.

‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ, ದೀಪಿಕಾ ಪಡುಕೋಣೆ, ನಿರ್ದೇಶಕ ನಾಗ್ ಅಶ್ವಿನ್ ಮುಂತಾದ ನಟರು, ತಂತ್ರಜ್ಞರೊಟ್ಟಿಗೆ ನೋಡುವ ಅವಕಾಶವನ್ನು ಚಿತ್ರತಂಡ ಒದಗಿಸುತ್ತಿದೆ. ಆದರೆ ಸ್ಟಾರ್ ನಟರೊಟ್ಟಿಗೆ ಸಿನಿಮಾ ನೋಡಲು ದೊಡ್ಡ ಮೊತ್ತವನ್ನೇ ಭರಿಸಬೇಕಿದೆ. ಈ ವಿಶೇಷ ಶೋನ ಟಿಕೆಟ್​ಗಳನ್ನು ಹರಾಜು ಹಾಕಲಾಗುತ್ತಿದ್ದು, ಹರಾಜಿನಲ್ಲಿ ಟಿಕೆಟ್ ಖರೀದಿಸದವರಿಗೆ ಮಾತ್ರವೇ ಸಿನಿಮಾ ನೋಡುವ ಅವಕಾಶ ದೊರೆಯಲಿದೆ.

ಈ ವಿಶೇಷ ಶೋನ ಟಿಕೆಟ್​ಗಳು ಕಡಿಮೆ ಸಂಖ್ಯೆಯಲ್ಲಿ ಮಾತ್ರವೇ ಹರಾಜಿಗೆ ಇಡಲಾಗುತ್ತದೆ. ಸುಮಾರು 50 ರಿಂದ 100 ಟಿಕೆಟ್​ಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದೆ. ಶೋನ ಟಿಕೆಟ್​ಗಳನ್ನು ವಿಶೇಷ ವೆಬ್​ಸೈಟ್​ನಲ್ಲಿ ಹರಾಜು ಹಾಕಲಾಗುತ್ತದೆ ಎನ್ನಲಾಗುತ್ತಿದ್ದು, ಈ ಶೋನಿಂದ ಸಂಗ್ರಹವಾಗುವ ಹಣವನ್ನು ವಿಶೇಷ ಕಾರ್ಯಕ್ಕೆ ಬಳಕೆ ಮಾಡಲಾಗುತ್ತದೆಯಂತೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕಲ್ಕಿ ಬುಜ್ಜಿ ಮೇನಿಯಾ; ಏಳು ಕೋಟಿ ವೆಚ್ಚದ ಬುಜ್ಜಿ ವಿಶೇಷತೆಗಳೇನು?

‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಿತ್ತು. ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಇದು ಎನ್ನಲಾಗುತ್ತಿದ್ದು, ಸಿನಿಮಾದಲ್ಲಿ ಭಾರಿ ದೊಡ್ಡ ಸ್ಟಾರ್ ನಟರ ದಂಡೇ ಇದೆ. ಸಿನಿಮಾದ ಕತೆ ಮಹಾಭಾರತದ ಕುರುಕ್ಷೇತ್ರದಿಂದ ಆರಂಭವಾಗಿ ಕಲಿಯುಗದ 2898ನೇ ವರ್ಷದ ವರೆಗೆ ಕತೆ ನಡೆಯುತ್ತಿದೆ. ಸಿನಿಮಾದಲ್ಲಿ ಪ್ರಭಾಸ್ ಕರ್ಣನ ಪಾತ್ರದಲ್ಲಿ ನಟಿಸಿದ್ದು, ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಸುಪ್ರೀಂ ಯಾಸ್ಕಿನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದ್ದು ಸಿನಿಮಾದ ಎರಡನೇ ಭಾಗ ಕುತೂಹಲ ಮೂಡಿಸಿದೆ. ಮೊದಲ ಭಾಗದಲ್ಲಿ ಅಷ್ಟೇನೂ ತೆರೆಯ ಮೇಲೆ ಕಾಣಿಸಿಕೊಳ್ಳದ ಕಮಲ್ ಹಾಸನ್ ಎರಡನೇ ಭಾಗದಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ