
ನಿರ್ದೇಶಕ ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಮಾಡಿ ಗಮನ ಸೆಳೆದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ದೊಡ್ಡ ಕಲೆಕ್ಷನ್ ಮಾಡಿತು. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರಬೇಕಿದೆ. ಅದಕ್ಕೂ ಮೊದಲೇ ಅವರು ರಜನಿಕಾಂತ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ವರದಿಗಳು ಬಂದಿವೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಎಗ್ಸೈಟ್ ಆಗಿದ್ದಾರೆ. ಕೆಲವರಿಗೆ ಬೇಸರ ಆಗಿದೆ.
ನಾಗ್ ಅಶ್ವಿನ್ ಅವರು ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರನ್ನು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಹ್ಯಾಂಡಲ್ ಮಾಡಿದ್ದಾರೆ. ಹೀಗಾಗಿ, ಅವರಿಗೆ ದೊಡ್ಡ ಸ್ಟಾರ್ಗಳನ್ನು ನಿರ್ದೇಶನ ಮಾಡಿದ ಅನುಭವ ಇದೆ ಎನ್ನಬಹುದು. ಈಗ ಅವರಿಗೆ ಈಗ ಮುಂಬರವು ಸಿನಿಮಾಗಳು ಸುಲಭ ಆಗಲಿವೆ. ಅವರು ಈಗ ರಜನಿಕಾಂತ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ನಾಗ್ ಅಶ್ವಿನ್ ಅವರು ರಜನಿಕಾಂತ್ಗೆ ಕಥೆ ಒಂದನ್ನು ಹೇಳಿದ್ದಾರೆ. ಈ ಕಥೆ ಅವರಿಗೆ ಇಷ್ಟ ಆಗಿದೆಯಂತೆ. ಅವರು ಕಥೆನ ಡೆವಲಪ್ ಮಾಡುವಂತೆ ಕೇಳಿದ್ದಾರೆ ಎಂದು ವರದಿ ಆಗಿದೆ. ಈ ಕಾರ್ಯದಲ್ಲಿ ನಿರ್ದೇಶಕರು ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್‌ಗೆ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಈ ವಿಚಾರ ಫ್ಯಾನ್ಸ್ಗೆ ಸಾಕಷ್ಟು ಬೇಸರ ಮೂಡಿಸಿದೆ. ಆ ಸಿನಿಮಾ ಸೆಟ್ಟೇರುತ್ತಿಲ್ಲ ಎಂದರೂ ರಜನಿ ಜೊತೆ ಅವಕಾಶ ಸಿಕ್ಕಿತಲ್ಲ ಎಂಬ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಇದನ್ನೂ ಓದಿ: ‘ಕಲ್ಕಿ 2’ ಬಗ್ಗೆ ಅಪ್ಡೇಟ್ ಕೊಟ್ಟ ನಾಗ್ ಅಶ್ವಿನ್, ಚಿತ್ರೀಕರಣ ಯಾವಾಗ ಶುರು?
‘ಕಲ್ಕಿ 2898 ಎಡಿ’ ಸಿನಿಮಾ ಸೀಕ್ವೆಲ್ ಅರ್ಧಕ್ಕೆ ನಿಂತಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ಚಿತ್ರದಲ್ಲಿ ದೀಪಿಕಾ ಮುಖ್ಯ ಪಾತ್ರ ಮಾಡಿದ್ದಾರೆ. ಆದರೆ, ಅವರ ಕಾರಣದಿಂದಲೇ ಸಿನಿಮಾದ ಕೆಲಸ ಅರ್ಧಕ್ಕೆ ನಿಂತಿತೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಅವರು ದಿನ ನಿತ್ಯ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹಾಗಾದಲ್ಲಿ ಸಿನಿಮಾ ಶೂಟ್ ಮಾಡೋದ ಕಷ್ಟ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Tue, 26 August 25