ಆ್ಯಕ್ಷನ್​ನೊಂದಿಗೆ ಬರಲು ರೆಡಿ ಆದ ಕಮಲ್ ಹಾಸನ್​; 233ನೇ ಚಿತ್ರಕ್ಕೆ ಗನ್ ಟ್ರೇನಿಂಗ್

ಕಮಲ್ ಹಾಸನ್ ವಯಸ್ಸು ಈಗ 68. ಆದರೂ ಅವರು ಆ್ಯಕ್ಷನ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ 233ನೇ ಚಿತ್ರ ಸೆಟ್ಟೇರುವ ಹಂತದಲ್ಲಿದೆ. ಇದಕ್ಕೂ ಮೊದಲು ಕಮಲ್ ಹಾಸನ್ ಅವರು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಆ್ಯಕ್ಷನ್​ನೊಂದಿಗೆ ಬರಲು ರೆಡಿ ಆದ ಕಮಲ್ ಹಾಸನ್​; 233ನೇ ಚಿತ್ರಕ್ಕೆ ಗನ್ ಟ್ರೇನಿಂಗ್
ಕಮಲ್ ಹಾಸನ್
Edited By:

Updated on: Sep 08, 2023 | 11:05 AM

ನಟ ಕಮಲ್ ಹಾಸನ್ (Kamal Haasan) ಅವರ ನಟನೆಯ ‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಚಿತ್ರವನ್ನು ಕಮಲ್ ಹಾಸನ್ ಅವರೇ ನಿರ್ಮಾಣ ಮಾಡಿದ್ದರು. ಈಗ ಅವರು ಮತ್ತೊಂದು ಚಿತ್ರಕ್ಕಾಗಿ ರೆಡಿ ಆಗುತ್ತಿದ್ದಾರೆ. ಈ ಸಿನಿಮಾನ ವಿನೋದ್ ಅವರು ನಿರ್ದೇಶನ ಮಾಡಲಿದ್ದು, ಕಮಲ್ ಹಾಸನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ.

ಕಮಲ್ ಹಾಸನ್ ವಯಸ್ಸು ಈಗ 68. ಆದರೂ ಅವರು ಆ್ಯಕ್ಷನ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ 233ನೇ ಚಿತ್ರ ಸೆಟ್ಟೇರುವ ಹಂತದಲ್ಲಿದೆ. ಇದಕ್ಕೂ ಮೊದಲು ಕಮಲ್ ಹಾಸನ್ ಅವರು ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಮಲ್ ಹಾಸನ್ ಅವರು ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್​ನ್ಯಾಷನಲ್’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಟ್ವಿಟರ್ ಖಾತೆ ಮೂಲಕ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಬೇರೆ ಬೇರೆ ಗನ್​​ಗಳಲ್ಲಿ ಕಮಲ್ ಹಾಸನ್ ಶೂಟಿಂಗ್ ಟ್ರೇನಿಂಗ್ ಪಡೆಯುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ. ಸದ್ಯ ಈ ಚಿತ್ರದ ಶೂಟಿಂಗ್​ನಲ್ಲಿ ಕಮಲ್ ಬ್ಯುಸಿ ಆಗಿದ್ದಾರಂತೆ. ಅವರ ನಟನೆಯ 233ನೇ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮ ಆಗಿಲ್ಲ. ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ

ಕಮಲ್ ಮುಂದಿನ ಚಿತ್ರದ ನಿರ್ದೇಶಕ ವಿನೋದ್ ಅವರು ಈ ಮೊದಲು ‘ತುನಿವು’, ‘ವಲಿಮೈ’ ರೀತಿಯ ಆ್ಯಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಕಮಲ್ ಹಾಸನ್ ಚಿತ್ರದ ಮೂಲಕ ಅವರು ಮೋಡಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Follow Us