Aamir Khan: ಚೆನ್ನೈನಲ್ಲಿ ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿಗೆ ಹಾಜರಿ ಹಾಕಿದ ಆಮಿರ್​ ಖಾನ್​, ಸೂರ್ಯ; ಫೋಟೋ ವೈರಲ್​

Kamal Haasan Birthday: ತುಂಬಾ ಅದ್ದೂರಿಯಾಗಿ ಕಮಲ್​ ಹಾಸನ್​ ಅವರ ಬರ್ತ್​ಡೇ ಪಾರ್ಟಿ ನಡೆದಿದೆ. ನವೆಂಬರ್​ 6ರ ರಾತ್ರಿ ಆಯೋಜನೆಗೊಂಡ ಈ ಔತಣ ಕೂಟದಲ್ಲಿ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ವಿಶೇಷ ಏನೆಂದರೆ, ಬಾಲಿವುಡ್​ ನಟ ಆಮಿರ್​ ಖಾನ್​ ಕೂಡ ಪಾರ್ಟಿಗೆ ಬಂದಿದ್ದಾರೆ. ಅವರ ಫೋಟೋ ವೈರಲ್​ ಆಗಿದೆ.

Aamir Khan: ಚೆನ್ನೈನಲ್ಲಿ ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿಗೆ ಹಾಜರಿ ಹಾಕಿದ ಆಮಿರ್​ ಖಾನ್​, ಸೂರ್ಯ; ಫೋಟೋ ವೈರಲ್​
ಸೂರ್ಯ, ಆಮಿರ್ ಖಾನ್​, ಕಮಲ್​ ಹಾಸನ್​

Updated on: Nov 07, 2023 | 6:17 PM

ನಟ ಕಮಲ್​ ಹಾಸನ್​ (Kamal Haasan) ಅವರಿಗೆ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸ್ನೇಹಿತರು ಇದ್ದಾರೆ. ಬಾಲಿವುಡ್​ ಮಂದಿ ಕೂಡ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇಂದು (ನವೆಂಬರ್​ 7) ಕಮಲ್​ ಹಾಸನ್​ ಅವರಿಗೆ 69ನೇ ವರ್ಷ ಹುಟ್ಟುಹಬ್ಬದ (Kamal Haasan Birthday) ಸಂಭ್ರಮ. ಈ ಸಲುವಾಗಿ ಅವರು ಅದ್ದೂರಿಯಾಗಿ ಬರ್ತ್​ಡೇ ಪಾರ್ಟಿ ಆಯೋಜಿಸಿದ್ದಾರೆ. ಒಂದು ದಿನ ಮುಂಚೆ, ಅಂದರೆ ನವೆಂಬರ್​ 6ರ ರಾತ್ರಿ ಆಯೋಜನಗೊಂಡ ಈ ಔತಣ ಕೂಟದಲ್ಲಿ ತಮಿಳು ಚಿತ್ರರಂಗದ ಅನೇಕರು ಭಾಗಿ ಆಗಿದ್ದಾರೆ. ವಿಶೇಷ ಏನೆಂದರೆ, ಬಾಲಿವುಡ್​ ನಟ ಆಮಿರ್​ ಖಾನ್​ (Aamir Khan) ಕೂಡ ಪಾರ್ಟಿಗೆ ಬಂದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಫೋಟೋ ವೈರಲ್​ ಆಗಿದೆ.

ಕಮಲ್ ಹಾಸನ್​ ಅವರ ಬರ್ತ್​ಡೇ ಪಾರ್ಟಿ ಚೆನ್ನೈನಲ್ಲಿ ನಡೆದಿದೆ. ಸದ್ಯಕ್ಕೆ ಆಮಿರ್​ ಖಾನ್​ ಕೂಡ ಚೆನ್ನೈನಲ್ಲೇ ಇದ್ದಾರೆ. ಅವರ ತಾಯಿ ಅನಾರೋಗ್ಯ ಆಗಿರುವುದರಿಂದ ಆರೈಕೆ ಮಾಡಲು ಅವರು ಚೆನ್ನೈಗೆ ಬಂದು ಉಳಿದುಕೊಂಡಿದ್ದಾರೆ. ಹಾಗಾಗಿ ಕಮಲ್​ ಹಾಸನ್​ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗಿಯಾಗಲು ಆಮಿರ್​ ಖಾನ್​ ಅವರಿಗೆ ಸಾಧ್ಯವಾಗಿದೆ. ಅವರಿಗೆ ಕಾಲಿವುಡ್​ ನಟ ಸೂರ್ಯ ಸಾಥ್​ ನೀಡಿದ್ದಾರೆ. ಛಾಯಾಗ್ರಾಹಕ ರವಿ ಕೆ. ಚಂದ್ರನ್​ ಅವರು ಈ ಸ್ಟಾರ್​ ನಟರ ಜೊತೆ ಸೆಲ್ಫಿ ತೆಗೆದುಕೊಂಡು ಪೋಸ್ಟ್​ ಮಾಡಿದ್ದಾರೆ.

‘ಇಬ್ಬರು ಗಜಿನಿ ಒಂದೇ ಫ್ರೇಮ್​ನಲ್ಲಿ’ ಎಂದು ರವಿ ಕೆ. ಚಂದ್ರನ್​ ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ತಮಿಳಿನ ‘ಗಜಿನಿ’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದರು. ಅದೇ ಸಿನಿಮಾ ಬಾಲಿವುಡ್​ನಲ್ಲಿ ರಿಮೇಕ್​ ಆದಾಗ ಆಮಿರ್ ಖಾನ್​ ಮುಖ್ಯ ಪಾತ್ರ ಮಾಡಿದ್ದಾರೆ. ಆ ಕಾರಣದಿಂದಲೇ ರವಿ ಕೆ. ಚಂದ್ರನ್​ ಅವರು ಈ ರೀತಿ ಕ್ಯಾಪ್ಷನ್​ ನೀಡಿದ್ದಾರೆ. ತಮಿಳಿನಲ್ಲಿ ‘ಗಜಿನಿ’ ಸಿನಿಮಾ 2005ರಲ್ಲಿ ಬಿಡುಗಡೆ ಆಗಿತ್ತು. ಹಿಂದಿಯ ‘ಗಜಿನಿ’ ಚಿತ್ರ 2008ರಲ್ಲಿ ತೆರೆ ಕಂಡಿತ್ತು. ಎರಡೂ ಭಾಷೆಯಲ್ಲಿ ಈ ಸಿನಿಮಾ ಸೂಪರ್​ ಹಿಟ್​ ಆಗಿದ್ದವು.

Kamal Haasan: ಖ್ಯಾತ ನಟ ಕಮಲ್​ ಹಾಸನ್​ ಒಟ್ಟು ಆಸ್ತಿ ಮೌಲ್ಯ ಎಷ್ಟು? ಕಾರು, ಬಂಗಲೆ ಬಗ್ಗೆ ಇಲ್ಲಿದೆ ಪೂರ್ತಿ ವಿವರ

ತುಂಬಾ ಅದ್ದೂರಿಯಾಗಿ ಕಮಲ್​ ಹಾಸನ್​ ಅವರ ಬರ್ತ್​ಡೇ ಪಾರ್ಟಿ ನಡೆದಿದೆ. ಕಳೆದ ವರ್ಷ ‘ವಿಕ್ರಮ್​’ ಸಿನಿಮಾ ಮೂಲಕ ಅವರು ಬಿಗ್​ ಸಕ್ಸಸ್​ ಕಂಡಿದ್ದಾರೆ. ಹಾಗಾಗಿ ಅವರು ಬಹಳ ಖುಷಿಯಿಂದ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈಗ ಕಮಲ್​ ಹಾಸನ್​ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಇಂಡಿಯನ್​ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ ಜೊತೆಗಿನ ‘ಥಗ್​ ಲೈಫ್​’ ಚಿತ್ರದ ಕೆಲಸಗಳು ಕೂಡ ಪ್ರಗತಿಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us